ಮುದ್ದೇಬಿಹಾಳ ವ್ಯಾರಸ್ಥರಿಗೆ ಆರ್ಥಿಕತೆ ಏಳಿಗೆ ಮಾಡಿದ ಓಸ್ವಾಲ್ ಕುಟುಂಬದ ಛಗನಲಾಲ ನಿಧನ…!!! ಸಂತಾಪ ಸೂಚಿಸಿದ ತಾಲೂಕಿನ ಗಣ್ಯರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಪಟ್ಟಣದ ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಛಗನಲಾಲ ವೀರಚಂದ ಓಸ್ವಾಲ್(72) ಶುಕ್ರವಾರ ನಿಧನರಾದರು. ಮೃತರರಿಗೆ 2 ಗಂಡು ಹಾಗೂ 3 ಹೆಣ್ಣು ಮಕ್ಕಳಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಅಂತ್ಯಕ್ರೀಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


ಮುದ್ದೇಬಿಹಾಳ ಪಟ್ಟಣಕ್ಕೆ ಅಪಾರ ಕೊಡುಗೆ ನೀಡಿದ ಓಸ್ವಾಲ್:
ಛಗನಲಾಲ್ ಓಸ್ವಾಲ ಅವರು ಸುಮಾರು 40 ವರ್ಷದಿಂದ ಸ್ಥಳೀಯ ಲಯನ್ಸ್ ಕ್ಲಬ್ ಸದಸ್ಯರಾಗಿ ಸೇವೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲದೇ ವ್ಯಾಪಾರಸ್ಥರಿಗೆ ಆರ್ಥಿಕ ಸೌಲಭ್ಯ ಒದಗಿಸಲು ಪಟ್ಟಣದ ಬಸ್ ನಿಲ್ದಾಣದ ಎದುರಿಗೆ ಕೆಲವೇ ಸದಸ್ಯರನ್ನು ಒಗ್ಗೂಡಿಸಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪನೆಯನ್ನು ಛಗನಲಾಲ ಅವರ ತಂದೆ ವೀರಚಂದ ಓಸ್ವಾಲ್ ಅವರು ಮಾಡಿದರು. ನಂತರ ಅವರ ತಂದೆ ಮಾರ್ಗ ದರ್ಶನದಲ್ಲಿ ಛಗನಲಾಲ್ ಅವರೂ ಸಹ ಬ್ಯಾಂಕ್ ನಡೆಸಿಕೊಂಡು ಬಂದರು. ಸದ್ಯಕ್ಕೆ ಬೃಹತ್ ಪ್ರಮಾಣದಲ್ಲಿ ವ್ಯವಹಾರ ಗಿಟ್ಟಿಸಿಕೊಳ್ಳುವ ಹಂತಕ್ಕೆ ಇಂದು ಕರ್ನಾಟಕ ಬ್ಯಾಂಕ್ ಬೆಳೆದಿದೆ. ಸದ್ಯಕ್ಕೆ ಛಗನಲಾಲ್ ಅವರ ಸಂಬಂಧಿಯೇಯಾಗಿರುವ ಸತೀಶ ಓಸ್ವಾಲ್ ಅವರೇ ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಓಸ್ವಾಲ್ ಕುಟುಂಬಸ್ಥರು ಮುದ್ದೇಬಿಹಾಳ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಕೆಯಿಂದ ಅಳವಡಿಸಲಾದ ಸಿಸಿ ಕ್ಯಾಮರಾ ಒದಗಿಸುವಲ್ಲಿ ಪ್ರಮುಖ ಪಾತ್ರದಾರಿಯಾಗಿದ್ದಾರೆ.
ಸಂತಾಪ ಸೂಚನೆ:
ಮೃತರ ನಿಧನಕ್ಕೆ ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ), ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರದೇವರು, ಜೆಡಿಎಸ್ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ, ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಯಲಗೂರೇಶ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾವಸಾಹೇಬ ದೇಸಾಯಿ, ಲಯನ್ಸ್ ಕ್ಲಬ್ ಅಧ್ಯಕ್ಷ ನೇತಾಜಿ ನಲವಡೆ, ವೀರಶೈವ ಮಹಾಸಭಾ ಅಧ್ಯಕ್ಷ ಬಾಪುಗೌಡ ಪಾಟೀಲ, ವೀರಶೈಲ ಲಿಂಗಾಯತ ತಾಲೂಕಾಧ್ಯಕ್ಷ ಶರಣು ಬೂದಿಹಾಳಮಠ, ಡಾ.ವೀರೇಶ ಪಾಟೀಲ, ಹಸಿರು ತೋರಣ ಬಳಗದ ಸಂಚಾಲಕ ಮಹಾಭಲೇಶ್ವರ ಗಡೇದ, ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ರಾಜು ಕಲಬುರ್ಗಿ, ಪಂಚಮಸಾಲಿ ಸಂಘದ ರಾಜ್ಯ ಸಮೀತಿ ಸದಸ್ಯ ಕಾಮರಾಜ ಬಿರಾದಾರ, ತಾಲೂಕಾಧ್ಯಕ್ಷ ಅಮರೇಶ ಗೂಳಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಜೆಡಿಎಸ್ ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ ಸಂತಾಪ ಸೂಚಿಸಿದ್ದಾರೆ.

Be the first to comment

Leave a Reply

Your email address will not be published.


*