ಶಾಲೆಗೆ ಮನೆಯ ಆಸ್ತಿ ತೆರಿಗೆ….ಗುಂಟಾ ಜಾಗದಲ್ಲಿ ವಾಣಿಜ್ಯ ಮಳಿಗೆಗೆ ಪರವಾಣಿಗೆ…!!! ಪುರಸಭೆ ಅಧಿಕಾರಿಗಳ ಗೋಲಮಾಲ: ವಿಜಯಪುರ ಜಿಲ್ಲಾಧಿಕಾರಿಗಳಿಗೆ ಸದಸ್ಯರಿಂದಲೇ ದೂರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಮುದ್ದೇಬಿಹಾಳ ಪಟ್ಟಣದ ಪುರಸಭೆಯ ಕಂದಾಯ ನಿರೀಕ್ಷಕಿ ಎಂ.ಬಿ.ಮಾಡಗಿ ಸೇರಿದಂತೆ ಕೆಲ ಅಧಿಕಾರಿಗಳು 2015 ರಿಂದ 2021ರ ವರೆಗೆ ಬಾರಿ ಅವ್ಯವಹಾರ ನಡೆಸಿದ್ದು ಕೂಡಲೇ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಪುರಸಭೆ ಸದಸ್ಯ ಯಲ್ಲಪ್ಪ ನಾಯಕಮಕ್ಕಳ, ರಿಯಾಜ ಢವಳಗಿ, ಆರ್.ಬಿ.ದ್ರಾಕ್ಷಿ, ಅಬ್ದುಲಮಜೀದ ಮಕಾನದಾರ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯ ಸಿಎಸ್ಟಿ ನಂ. 2170 ಜ್ಞಾನ ಗಂಗೋತ್ರಿ ವಿದ್ಯಾ ಮಂದಿರಕ್ಕೆ ಬಳಕೆಯಾಗುತ್ತಿದ್ದು ಇದರಿಂದ ಪುರಸಭೆಗೆ ಸುಮಾರು 2,91,977 ರೂಪಾಯಿಗಳು ಪುರಸಭೆಗೆ ಸಂದಾಯವಾಗಬೇಕಾಗಿತ್ತು. ಆದರೆ ಅಧಿಕಾರಿಗಳು ಈ ಜಾಗದಲ್ಲಿ ಮನೆ ಇದೆ ಎಂದು ತೋರಿಸಿ ಪುರಸಭೆಗೆ ಕೇವಲ 47000 ರೂಪಾಯಿಗಳನ್ನು ಪುರಸಭೆ ಕಂದಾಯಕ್ಕೆ ಸಂದಾಯ ಮಾಡಿಕೊಂಡು ಸರಕಾರಕ್ಕೆ ಬರಬೇಕಾದ ಬೃಹತ್ ಮೊತ್ತಕ್ಕೆ ಕತ್ತರಿ ಹಾಕಿ ತಮ್ಮ ಜೇಬು ತುಂಬಿಸಿಕೊಂಡಿದ್ದು ಕಂಡು ಬಂದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.



ಗುಂಟಾ ಜಾಗದಲ್ಲಿ ವಾಣಿಜ್ಯ ಮಳಿಗೆಯ ಕಟ್ಟಡ ಪರವಾಣಿಗೆ ನೀಡಿದ ಪುರಸಭೆ ಅಧಿಕಾರಿಗಳು:

ಮುದ್ದೇಬಿಹಾಳ ಪಟ್ಟಣದ ಇಂದಿರಾ ನಗರದ ಸರ್ವೆ ನಂ.58 ಚಿನಿವಾರ ಲೇಔಟ ಹಾಗೂ ಸಂಗಮೇಶ್ವರ ನಗರದ ಸರ್ವೆ ನಂ.65 ಮದರಿ ಮಳಿಗೆಗಳಗೆ ಮತ್ತು ಸೇಡಜಿ ಮಳಿಗೆಗಳಿಗೆ ಗುಂಟಾ ಜಾಗವಿದ್ದರೂ ವಾಣಿಜ್ಯ ಮಳಿಗೆ ನಿಮಾರ್ಣ ಮಾಡಲು ಪುರಸಭೆಯಲ್ಲಿ ರಜಿಸ್ಟರ್ ನೊಂದಣಿ ಮಾಡಿಕೊಂಡು ಕಟ್ಟಡ ಪರವಾಣಿಗೆ ಹಾಗೂ ಎನ್.ಓ.ಸಿ ನೀಡಿದ್ದಾರೆ. ಇದರ ಬಗ್ಗೆ ಪುರಸಭೆ ಸದಸ್ಯರು ಅಧಿಕಾರಿಗಳಿಗೆ ಪ್ರಶ್ನಿಸಿದರೆ ನೀವು ಬೇಕಾದರೆ ನಮ್ಮ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ತಮ್ಮ ಅವ್ಯವಹಾರ ಮರೆಮಾಚಿ ಬೇಜವಾಬ್ದಾರಿ ಉತ್ತರವನ್ನು ನೀಡುತ್ತಾರೆ ಎಂದು ಅವರು ಮನವಿಯಲ್ಲಿ ದೂರಿದ್ದಾರೆ.


ಹಣ ಮತ್ತು ರಾಜಕೀಯ ಬಲ ತೋರಿಸುತ್ತಿರುವ ಕಂದಾಯ ಅಧಿಕಾರಿ:
ಪಟ್ಟಣದ ಪುರಸಭೆಯಲ್ಲಿ ಕಳೆದ 3 ವರ್ಷಗಳಕ್ಕಿಂತಲೂ ಹೆಚ್ಚಿನ ಅವಧಿಯಾದರೂ ಸ್ಥಳೀಯ ಹಣ ಬಲ ಮತ್ತು ರಾಜಕೀಯ ಬೆಂಬಲವನ್ನು ಪಡೆದು ಕಂದಾಯ ನಿರೀಕ್ಷಕರು ಇದೇ ಪುರಸಭೆಯಲ್ಲಿ ಸರಕಾರದ ನಿಯಮ ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಯಲ್ಲಪ್ಪ ನಾಯಕಮಕ್ಕಳ, ರೀಯಾಜ ಢವಳಗಿ, ಆರ್.ಬಿ.ದ್ರಾಕ್ಷಿ, ಅಬ್ದುಲ್‌ಮಜೀದ ಮಕಾನದಾರ ಇದ್ದರು.

“ಪುರಸಭೆ ಕಂದಾಯಕ್ಕೆ ಆಸ್ತೆ ತೆರಿಗೆಯನ್ನು ಸ್ವಯಂ ಘೋಷಣೆ ಮಾಡಿ ತೆರಿಗೆ ತುಂಬಬೇಕು. ಆದರೆ ಜ್ಞಾನ ಗಂಗೋತ್ರಿ ಶಾಲೆಯನ್ನು ಮನೆ ಎಂದು ಘೋಷಣೆ ಮಾಡಿ ತೆರಿಗೆ ತುಂಬಿದ್ದಾರೆ ಎಂಬ ಮಾಹಿತಿ ತಿಳಿದಿದ್ದು ಇದರ ಬಗ್ಗೆ ನಾಳೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವೆ.”

-ಗೋಪಾಲ ಕಾಸೆ, ಮುಖ್ಯಾಧಿಕಾರಿಗಳು, ಪುರಸಭೆ, ಮುದ್ದೇಬಿಹಾಳ.

 

Be the first to comment

Leave a Reply

Your email address will not be published.


*