ಜಿಲ್ಲಾ ಸುದ್ದಿಗಳು
ಭಟ್ಕಳ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪದವಿ ಪರೀಕ್ಷೆ ಗೊಂದಲ ಪರಿಹರಿಸಲು ಆಗ್ರಹಿಸಿ ಹಾಗೂ
ಪದವಿ ಕಾಲೇಜಿನ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡುವಂತೆ ವಿದ್ಯಾರ್ಥಿಗಳು ಭಟ್ಕಳದ ಮಾಜಿ ಶಾಸಕ ಮಂಕಾಳರಲ್ಲಿ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವಿಕರಿಸಿ ಮಾತನಾಡಿದ ಮಂಕಾಳ ವೈದ್ಯ ಪರಿಕ್ಷೇಯ ಸಂಬಂದ ಪದವಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದೆ ವಿಧ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವುದು ಸರಿಯಲ್ಲಾ ಸರಕಾರ ಈ ಕೂಡಲೆ ಸರಿಯಾದ ಕ್ರಮವನ್ನು ಕೈಗೊಳ್ಳ ಬೇಕು ಯುಜಿಸಿ ಪ್ರಕಟಿಸಿದ ಆದೇಶದಂತೆ ಅಂತಿಮ ಸೆಮಿಷ್ಟರ್ ಪರಿಕ್ಷೇ ನಡೆಸ ಬೇಕು ,ಅಗಷ್ಡ 14 ರ ವರೆಗೂ ಪಾಠ ಪ್ರವಚನದ ಅವದಿ ಮುಂದುವರಿಸಿ ಸಂಪೂರ್ಣ ಪಾಠ ಮಾಡಿ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಅಬ್ಯಾಸ ಮಾಡಲು ಅವಕಾಶ ನೀಡಬೇಕು
ಒಂದು ವೇಳೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುವಂತ ಕ್ರಮಗಳನ್ನು ಸರಕಾರ ಕೈಗೊಂಡಿದ್ದೆ ಆದಲ್ಲಿ ನಾನು ವಿಧ್ಯಾರ್ಥಿಗಳೊಂದಿಗೆ ಪ್ರತಿಭಟನೆಗಾಗಿ ಬಿದಿಗಿಳಿಯ ಬೇಕಾಗುತ್ತದೆ ಇದು ಸರಕಾರದ ಗಮನಕ್ಕಿರಲಿ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಸರಕಾರವನ್ನು ಎಚ್ಚರಿಸಿದರು.
Be the first to comment