ಅಂಬಿಗ್ ನೂಸ್‌ಗೆ ಪ್ರತಿಕ್ರೀಯೆ ನೀಡಿದ ರಾಜ್ಯ ವಿವಿಧ ಮುಖಂಡರು…!!! ಲಿಂಗಾಯತ ಪಂಚಮಸಾಲಿ ಪಂಗಡಕ್ಕೆ ಸಿಎಂ ಸ್ಥಾನ ನೀಡಲಿ: ಬಿ.ಎಂ.ಚಿಕ್ಕನಗೌಡರ ಆಗ್ರಹ…! ಯಡಿಯೂರಪ್ಪನರವನ್ನು ಇಳಿಸಿದ್ದಕ್ಕೆ ಕಾರಣ ಹೇಳಿ: ಮಾಜಿ ಸಿಎಂ ಸಿದ್ರಾಮಯ್ಯ..! ಸಿಎಂ ರೇಸ್‌ನಲ್ಲಿ ಸಿ.ಟಿ.ರವಿ ಹಾಗೂ ಪ್ರಹ್ಲಾದ್ ಜೋಶಿ…!!!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಅಂಬಿಗ್ ನ್ಯೂಸ್:

‘ನಾನೂ ತಿನ್ನುವುದಿಲ್ಲ ಬೇರೆಯವರನ್ನೂ ತಿನ್ನಲಲು ಬಿಡುವುದಿಲ್ಲ’ ಎಂದು ಹೇಳಿದ ಪ್ರಧಾನಿಯವರು ಮೊದಲು ಯಡಿಯೂರಪ್ಪನವರ ಭ್ರಷ್ಠಾಚಾರದ ಬಗ್ಗೆ ತನಿಖೆ ನಡೆಸಲು ಸೂಚಿಸಬೇಕು.’

-ಸಿದ್ರಾಮಯ್ಯ, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು.

ರಾಜ್ಯ ಸರಕಾರದ ಸಿಎಂ ಸ್ಥಾನಕ್ಕೆ ನೀಡಿದ ರಾಜಿನಾಮೆ ಅಂಗಿಕಾರವಾಗುತ್ತಿದ್ದಂತೆಯೇ ರಾಜ ಜನತೆಯು ಕೇಂದ್ರ ಸರಕಾರದ ನಿರ್ಧಾರದತ್ತ ಗಮನವಿದ್ದರೆ ವಿರೋದ ಪಕ್ಷದ ಮುಖಂಡರಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹಾಗೂ ಸಂಸದೀಯ ಮಂಡಳಿಯ ನಿರ್ಧಾರದತ್ತ ಗಮನ ಹರಿಯುತ್ತಿದೆ.
ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಕೇಂದ್ರ ಸರಕಾರದ ಹತ್ತಿರಕ್ಕೆ ಇರುವವರನ್ನೆ ಗದ್ದುಗೆಗೆ ಏರಿಸಲಾಗುವುದು ಎನ್ನುವ ಮಾತುಗಳು ಒಂದುಕಡೆಯಾದರೆ ಇನ್ನೂ ಯಡಿಯೂರಪ್ಪನವರ ರಾಜಿನಾಮೆಗೆ ಆಗ್ರಹಿಸುತ್ತಿದ್ದ ರಾಜ್ಯ ಮುಖಂಡರು ನಾನೂ ಕೂಡಾ ಸಿಎಂ ಆಗುತ್ತೇನೆ ಎಂಬ ಮಾತುಗಳು ಹೇಳುತ್ತಿದ್ದಾರೆ.

ಸಿಎಂ ಕುರ್ಚಿಗೆ ಯಾರು ಯಾರು…?
ಕರ್ನಾಟಕ ರಾಜ್ಯ ಸರಕಾರದ ಅಧಿಪತಿಯಾಗಿ ಪ್ರಮಾನ ವಚನ ಸ್ವೀಕರಿಸಲು ಈಗಾಗಲೇ ರಾಜ್ಯದಲ್ಲಿನ ಲಿಂಗಾಯತ ಸಮುದಾಯ, ದಲಿತ ಸಮುದಾರ ಸೇರಿದಂತೆ ವಿವಿಧ ಸಮುದಾಯದ ಬೆಂಬಲಿಗರಿಂದ ನಮ್ಮ ಸಮುದಾಯದ ವ್ಯಕ್ತಿಯನ್ನೇ ಸಿಎಂ ಮಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.

ಲಿಂಗಾಯ ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನಕ್ಕೆ ಒತ್ತಾಯ:
ಕರ್ನಾಟಕ ರಾಜ್ಯದಲ್ಲಿ ೨೦೨೧ನೇ ಜನಗಣತಿ ಪ್ರಕಾರ ಲಿಂಗಾಯತ ಪಂಚಮಸಾಲಿ ಸಮಾಜವು ಸುಂಆರು ೨ ಕೋಟಿ ಜನಸಂಖ್ಯೆ ಮೀರುವ ಸಾದ್ಯತೆಗಳಿವೆ. ಅಲ್ಲದೇ ರಾಜ್ಯ ಲಿಂಗಾಯತ ಸಮಾಜವು ಕಾಂಗ್ರೆಸ್ ಪಕ್ಷದಿಂದ ಅಂತರವನ್ನು ಕಾಯ್ದುಕೊಂಡಿದ್ದು ರಾಜಕೀಯವಾಗಿ ಬಿಜೆಪಿ ಪಕ್ಷವನ್ನೆ ನೆಚ್ಚಿಕೊಂಡು ಬಂದಿದ್ದಾರೆ. ಆದರೆ ೧೯೯೭ರಲ್ಲಿ ದಿ.ಎಸ್.ಆರ್.ಬೊಮ್ಮಾಯಿ ಅವರಿಗೆ ಕೇಂದ್ರ ಸಂಪುಟ ದರ್ಜೆ ಸ್ಥಾನ ನೀಡಿದ್ದು ಇವರನ್ನು ಬಿಟ್ಟರೆ ಕಳೆದ ೨೪ ವರ್ಷಗಳಿಂದ ಯಾವ ಲಿಂಗಾಯತರಿಗೂ ಕೇಂದ್ರ ಸಂಪುಟ ದರ್ಜೆಯ ಸ್ಥಾನ ನೀಡಿರುವುದಿಲ್ಲ. ಆದ್ದರಿಂದ ಕರ್ನಾಟಕ ರಾಜ್ಯ ಸಿಎಂ ಸ್ಥಾನಕ್ಕೆ ಲಿಂಗಾಯತ ಪಂಚಮಸಾಲಿ ಸಮಾಜದವರನ್ನೇ ಆಯ್ಕೆ ಮಾಡಬೇಕು. ಬಿಜೆಪಿ ಕೆಂದ್ರದ ವರಿಷ್ಠರು ಲಿಂಗಾಯರ ಸಮಾಜವನ್ನು ಅದರಲ್ಲಿಯೂ ಪಂಚಮಸಾಲಿ ಉಪ ಪಂಗಡವನ್ನು ಇದೇ ರೀತಿಯಾಗಿ ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಇದರ ಪ್ರತಿಫಲವನ್ನು ಬಿಜೆಪಿ ಪಕ್ಷ ಅನುಭವಿಸಬೇಕಾಗುತ್ತದೆ ಎಂದು ಬೆಳಗಾವಿಯ ಸಮಸ್ತ ಲಿಂಗಾಯ ಹೋರಾಟ ವೇದಿಕೆಯ ಮುಖ್ಯ ಸಂಘಟಿಕ ಹಾಗೂ ಮಾಜಿ ಜಿಪಂ ಸದಸ್ಯ ಬಿ.ಎಂ.ಚಿಕ್ಕನಗೌಡರ ಅಂಬಿಗ್ ನ್ಯೂಸ್‌ಗೆ ತಿಳಿಸಿದ್ದಾರೆ.



ಯಡಿಯೂರಪ್ಪನವರ ಬದಲಾವಣೆಗೆ ಕಾರಣ ಕೇಳಿದ ಮಾಜಿ ಸಿಎಂ ಸಿದ್ರಾಮಯ್ಯ!
ಸಾಮಾನ್ಯವಾಗಿ ಚುನಾವಣೆಯಲ್ಲಿ ಸೋಲು ಕಂಡರೆ ಅಂತಹ ವ್ಯಕ್ತಿಯನ್ನು ಉನ್ನತ ಸ್ಥಾನದಿಂದ ಕೆಳಗಿಸಲಾಗುತ್ತದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವದಲ್ಲಿ ಬಿಜೆಪಿ ಪಕ್ಷ ಬಹುಮತವಿದ್ದರೂ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುತ್ತಿರುವ ಉದ್ದೇಶ ಯಾರಿಗೂ ತಿಳಿಯುತ್ತಿಲ್ಲ. ಅಲ್ಲದೇ ಈಗಾಗಲೇ ಯಡಿಯೂರಪ್ಪನವರ ವಿರುದ್ಧ ಸಾಕಷ್ಟು ಭ್ರಷ್ಠಾಚಾರದ ದೂರುಗಳು ಕೇಳಿ ಬಂದಿದ್ದು ‘ನಾನು ತಿನ್ನುವುದಿಲ್ಲ ಬೇರೆಯವರನ್ನೂ ತಿನ್ನಲಲು ಬಿಡುವುದಿಲ್ಲ’ ಎಂದು ಹೇಳಿದ ಪ್ರಧಾನಿಯವರು ಮೊದಲು ಯಡಿಯೂರಪ್ಪನವರ ಭ್ರಷ್ಠಾಚಾರದ ಬಗ್ಗೆ ತನಿಖೆ ನಡೆಸಲು ಸೂಚಿಸಬೇಕು ಎಂದು ಮಾಜಿ ಸಿಎಂ ಸಿದ್ರಾಮಯ್ಯನವರು ಬೆಂಗಳೂರಿನಲ್ಲಿ ಸೋಮವಾರ ಅಂಬಿಗ್ ನ್ಯೂಸ್‌ಗೆ ಪ್ರತಿಕ್ರೀಯೆ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*