ಆರೋಗ್ಯ ಭಾರತಿ ಮತ್ತು ಸುವಿಧ ಮಹಿಳಾ ಮಂಡಲ ಸಹಯೋಗದಲ್ಲಿ ಮಹಿಳಾ ದಿನಾಚರಣೆ 

ವರದಿ: ಜೀವೋತ್ತಮ ಪೈ, ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ

ಮುಟ್ಟಳ್ಳಿಯ ಗಣೇಶೊತ್ಸವ ಸಮೀತಿಯ ಕಟ್ಟಡದಲ್ಲಿ ನಡೆಯುವ ಮಹಿಳಾ ಯೋಗ ಕೇಂದ್ರದಲ್ಲಿ ದಿನಾಂಕ ಮಾರ್ಚ್5ರ ಶನಿವಾರದಂದು ಮಹಿಳಾ ದಿನಾಚರಣೆಯ ಸಪ್ತಾಹ ದ ಅಂಗವಾಗಿ ಆರೋಗ್ಯ ಭಾರತಿ ಮತ್ತು ಸುವಿಧ ಮಹಿಳಾ ಮಂಡಲ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮ ದೀಪ ಬೆಳಗುವ ಮೂಲಕ ಪ್ರಾರಂಭಿಸಲಾಯಿತು. ಈ ಸಂಧರ್ಭದಲ್ಲಿ ಅಥಿತಿಗಳಾಗಿ ಆಗಮಿಸಿದ ಡಾ. ಗಾಯತ್ರಿ ಪ್ರಭು ಮತ್ತು ಡಾ. ನಮೃತಾ ನಾಯ್ಕರವರು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು ಮಹಿಳೆಯರ ಆರೋಗ್ಯದ ಬಗೆಗಿನ ಸಂದೇಹಗಳಿಗೆ ಉತ್ತರನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ವಿನಿತಾ ನಾಯಕ್ ಮಾತನಾಡಿ ಋತುಚಕ್ರ, ಗರ್ಭಧಾರಣೆ, ಸಂತಾನೋತ್ಪತ್ತಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀಮತಿ ಗೀತಾ ಶಂಕರ ಶೆಟ್ಟಿರವರು ಉಪಸ್ಥಿರಿದ್ದರು ಹಾಗೂ ಸುವಿಧಾ ಮಹಿಳಾ ಮಂಡಳದ ಸದಸ್ಯರು ಸೇರಿದಂತೆ ಸುತ್ತಮತ್ತಲಿನ ಮಹಿಳೆಯರು ಉಪಸ್ಥಿತರಿದ್ದರು, ಪ್ರಾರ್ಥನೆಯನ್ನು ಶ್ರೀಮತಿ ನಾಗರತ್ನ ಭಟ್, ಸ್ವಾಗತ ಪರಿಚಯವನ್ನು ಸ್ವಾತಿ ಶೆಟ್ಟಿ, .ವಂದನಾರ್ಪಣೆಯನ್ನು ಸುಮ ಶೆಟ್ಟಿ, ಹಾಗೂ ಶ್ರೀಮತಿ ಸೌಮ್ಯ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.   

CHETAN KENDULI

Be the first to comment

Leave a Reply

Your email address will not be published.


*