ರಾಜ್ಯ ಸುದ್ದಿ
ಹೊನ್ನಾವರ: ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಇಲ್ಲಿನ ಖಾಸಗಿ ವಾಣಿಜ್ಯ ಬಂದರು ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತೆ ಪೆÇಲೀಸ್ ಭದ್ರತೆಯಲ್ಲಿ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ದು, ಅನೇಕ ಯುವಕರು ಸಮುದ್ರಕ್ಕೆ ಹಾರಲು ಯತ್ನಿಸಿರುವ ಘಟನೆ ಶನಿವಾರ ನಡೆದಿದೆ.
ಜಿಸಿಬಿ ಯಂತ್ರ ಬಳಸಿ ಶೆಡ್ ಮತ್ತು ಮರಗಳನ್ನು ತೆರವುಗೊಳಿಸಿದ್ದು, ಸುಮಾರು ಐದು ನೂರಕ್ಕೂ ಹೆಚ್ಚು ಪೆÇೀಲೀಸರನ್ನು ಸ್ಥಳದಲ್ಲಿ ಬಂದೋಬಸ್ತನಲ್ಲಿ ನಿಯೋಜಿಸಿ ಬಂದರು ಕಾಮಗಾರಿ ಆರಂಭಿಸಲಾಗಿದೆ.
ನಾಲ್ಕು ತಿಂಗಳ ಹಿಂದೆ ಬಂದರು ಕಾಮಗಾರಿ ಆರಂಭವಾಗಿದ್ದು ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಾಮಗಾರಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಕಾಮಗಾರಿ ಸ್ಥಗಿತಗೊಳಿಸಿದ್ದರು. ಆದರೆ ದಿಢೀರ್ ಆಗಿ ಕಾಮಗಾರಿ ಆರಂಭಿಸಿರುವುದು ಸ್ಥಳೀಯರ ತೀವ್ರ ವಿರೋಧ ವ್ಯಕ್ತಪಡಿಸಿದರು. ಮೀನುಗಾರರ ಬದುಕನ್ನು ಸರ್ವನಾಶ ಮಾಡುವ ಬಂದರು ಬೇಡ ಎಂದು ಒತ್ತಾಯಿಸಿದರು.
Be the first to comment