ನಗರದ ಎ.ಪಿ.ಎಮ್.ಸಿ ಚರಾಸ್ತಿ ಜಪ್ತಿ: ನ್ಯಾಯಾಲಯದ ಆದೇಶ…!!!

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ, ಎಪಿಎಮ್ ಸಿ ಚರಾಸ್ತಿ ಜಪ್ತಿ ಮಾಡಿದ್ದಾರೆ. ಖುರ್ಚಿ, ಟೇಬಲ್, ಕಪಾಟು, ಪ್ರಿಂಟರ್ ಗಳನ್ನು ನ್ಯಾಯಾಲಯ ಸಿಬ್ಬಂದಿಗಳು ಜಪ್ತಿ ಮಾಡಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

CHETAN KENDULI

ಕಮಟೆಹಿತ್ಲದ ಸುಬ್ರಾಯ ಶಿವಾನಂದ್ ಎನ್ನುವವರಿಗೆ ಎ.ಪಿ.ಎಮ್.ಸಿ ಯಿಂದ 1 ಕೋಟಿ 44 ಲಕ್ಷದ 83 ಸಾವಿರದ 201 ರೂಪಾಯಿ ಪಾವತಿಸಬೇಕಿತ್ತು. ಆದರೆ ಎ.ಪಿ.ಎಮ್.ಸಿ ಅದನ್ನು ಪಾವತಿಸದ ಕಾರಣ ದಾವೆ ಹೂಡಿದ್ದರು. 

ಸಿವಿಲ್ ನ್ಯಾಯಾಲಯವು ಎ.ಪಿ.ಎಮ್ ಸಿ ಚರಾಸ್ತಿ ಜಪ್ತಿ ಮಾಡಿಕೊಳ್ಳುವಂತೆ ಆದೇಶ ಹೊರಡಿಸಿತ್ತು. ಈ ಆದೇಶದ ಹಿನ್ನೆಲೆ ಎಪಿಎಮ್ ಸಿ ಚರಾಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ.

Be the first to comment

Leave a Reply

Your email address will not be published.


*