ಜಿಲ್ಲಾ ಸುದ್ದಿಗಳು
ಶಿರಸಿ
ಅರಣ್ಯ ಭೂಮಿಯಲ್ಲಿ ವಸತಿ ರಹಿತರಿಗೆ ವಸತಿ ಯೋಜನೆಗಳಡಿ ರಾಜ್ಯ ಸರಕಾರ ಸಹಾಯಧನ ನೀಡಲು ಪರಿಗಣಿಸಲು ಆದೇಶಿಸಿದ ಆದೇಶ ಸ್ವಾಗತಾರ್ಹ. ಆದರೆ, ಇಂತಹ ಆದೇಶ ನೀಡಲು ರಾಜ್ಯ ಸರಕಾರಕ್ಕೆ ಇರುವ ಕಾನೂನಾತ್ಮಕ ಬದ್ದತೆಯ ಮೌಲ್ಯತೆಯನ್ನು ರಾಜ್ಯ ಸರಕಾರ ಸ್ಪಷ್ಟ ಪಡಿಸಬೇಕೆಂದು ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ರಾಜ್ಯ ಸರಕಾರಕ್ಕೆ ಆದೇಶಿಸಿದ್ದಾರೆ.
ಅವರು ಇಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ವಸತಿ ಮತ್ತು ಅರಣ್ಯ ಇಲಾಖೆಯ ಇತ್ತೀಚಿನ ಆದೇಶವನ್ನು ಪ್ರದರ್ಶಿಸುತ್ತಾ ಹೇಳಿದರು.
ವಸತಿ ಇಲಾಖೆಯು ವಸತಿ ಯೋಜನೆಗಳಡಿ ಪೂgಕ ಆದೇಶ ನಿಡಿದರೇ, ಅರಣ್ಯ ಅಧಿಕಾರಿಗಳು ಪಂಚಾಯತ ಅಭೀವೃದ್ದಿ ಅಧಿಕಾರಿಗಳಿಗೆ ಕಾಯ್ದಿಟ್ಟ ಅರಣ್ಯ ಪ್ರದೇಶ ರಕ್ಷಿತ ಅರಣ್ಯ ಪ್ರದೇಶದಲ್ಲಿ ಇಲ್ಲಿಯವರೆಗೂ ಯಾವುದಾದರು ಆಶ್ರಯ ಮನೆ ಮಂಜೂರಿ ಮಾಡಿದ್ದರೆ, ಅಂತಹ ಆಶ್ರಯ ಮನೆ ರದ್ದು ಪಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಇನ್ನು ಮುಂದೆ ಕಾಯ್ದಿಟ್ಟ ಅರಣ್ಯ ಪ್ರದೇಶ, ರಕ್ಷಿತ ಅರಣ್ಯ ಪ್ರದೇಶದಲ್ಲಿ ಆಶ್ರಯ ಮನೆ ಹಾಗೂ ಇನ್ನೀತರ ಯಾವುದೇ ಯೋಜನೆಗಳನ್ನು ಮಂಜೂರಿ ಮಾಡಬಾರದು ಹಾಗೂ ತಪ್ಪಿದ್ದಲ್ಲಿ ತಮ್ಮ ವಿರುದ್ಧ
ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ ರ ಅಡಿಯಲ್ಲಿ ಹಾಗೂ ಇನ್ನೀತರ ಅರಣ್ಯ ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ನಿರ್ಧೇಶನ ನೀಡುವುದರಿಂದ ವಸತಿ ಇಲಾಖೆ ಹೊರಡಿಸಿದ ಆದೇಶದ ಕುರಿತು ಸರಕಾರ ಕಾನೂನು ಬದ್ಧತೆಯನ್ನು ಪ್ರಕಟಿಸಲು ಅವರು ಒತ್ತಾಯಿಸಿದ್ದಾರೆ.
ಭೂಮಿ ಹಕ್ಕು ನೀಡದೇ, ಅರಣ್ಯ ಭೂಮಿ ಅರಣ್ಯೇತರ ಚಟುವಟಿಕೆಗೆ ನೀಡಲು ಇರುವ ಕಾನೂನಿನ ತೊಡಕನ್ನು ನಿವಾರಿಸದೇ, ಕೇಂದ್ರ ಸರಕಾರದ ಪರವಾನಿಗೆ ಪಡೆಯದೇ ವಸತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯ ಆದೇಶವು ಸುಫ್ರೀಂ ಕೋರ್ಟಿನ
ನಿರ್ಧೇಶನಕ್ಕೆ ವ್ಯತಿರಿಕ್ತವಾಗುವುದೆಂಬ ಸಂಶಯ ಅವರು ವ್ಯಕ್ತಪಡಿಸಿದರು. ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯ ಸಾಗುವಳಿ ಮತ್ತು ವಾಸ್ತವ್ಯದ ಹಕ್ಕಿನ ಮೂಲಕ ಶಾಶ್ವತ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವು ಚಿಂತಿಸಬೇಕು.
CHETAN KENDULI
Be the first to comment