ಗ್ರಾಪಂ ಪ್ರತಿಷ್ಠಿತ ಕಣದಲ್ಲಿ ಗೆದ್ದು ಜನ ನಾಯಕರಾದ ನಾಡಗೌಡ ಸಹೋದರರು….!!! ಬಸರಕೋಡ ಗ್ರಾಮದ ಅಭಿವೃದ್ಧಿಯೇ ಮುಖ್ಯ ಗುರಿ: ಮಲ್ಲಾಕಾರ್ಜುನ ನಾಡಗೌಡ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ ಅಂಬಿಗ ನ್ಯೂಸ್:

ಗ್ರಾಮ ಪಂಚಾಯತಿ ಚುನಾವಣೆಯ ಪ್ರತಿಷ್ಠಿತ ಕಣವಾಗಿದ್ದ ಬಸರಕೋಡ ಗ್ರಾಮ ಪಂಚಾಯತಿಗೆ ಸ್ಫರ್ಧಿಸಿದ ಮಲ್ಲಿಕಾರ್ಜುನ ನಾಡಗೌಡ ಹಾಗೂ ವರುಣರಾಜ ನಾಡಗೌಡ ಅವರು ಚುನಾವಣೆಯಲ್ಲಿ ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ.



ಬಸರಕೋಡ ಗ್ರಾಮದಲ್ಲಿ ವಿವಿಧ ರಂಗಗಳಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರವನ್ನು ವಿಪಕ್ಷದವರು ಹಂತ ಹಂತವಾಗಿ ಪಡೆಯುತ್ತಾ ಬಂದಿದ್ದು ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನು ನಿದ್ದೆಗೆಡೆಸುವಂತೆ ಮಾಡಿತ್ತು. ಅಲ್ಲದೇ ಮುದ್ದೇಬಿಹಾಳ ಮತಕ್ಷೇತ್ರದಲ್ಲಿಯೇ ರಾಜಕೀಯ ನಾಯಕರಾಗಿ ಶಾಸಕರಾಗಿ ಹಾಗೂ ಸಚಿವರಾಗಿ ಕ್ಷೇತ್ರಕ್ಕೆ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಸಂಬಂಧಿಕರಾದ ಮಲ್ಲಿಕಾರ್ಜುನ ಹಾಗೂ ವರುಣರಾಜ ಅವರು ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದು ಎಲ್ಲ ಕಾರ್ಯಕರ್ತರಿಗೂ ಭಲ ನೀಡಿದಂತಾಗಿದೆ ಎಂದು ತಿಳಿದುಬಂದಿದೆ.

ಧಾರ್ಮಿಕವಾಗಿ ವಿಜಯೋತ್ಸವ ಆಚರಿಸಿದ ನಾಡಗೌಡ ಸಹೋದರರು:

ಪಂಚಾಯತ ಚುನಾವಣೆಯಲ್ಲಿ ವಿಜಯಮಾಲೆ ಹಾಕಿಕೊಂಡ ಮಲ್ಲಿಕಾರ್ಜುನ ನಾಡಗೌಡ ಹಾಗೂ ವರುಣರಾಜ ನಾಡಗೌಡ ಅವರು ಭಾರತೀಯ ಧಾರ್ಮಿಕವಾಗಿ ಆರತಿ ಬೆಳಗಿಸಿಕೊಳ್ಳುವ ಮೂಲಕ ವಿಜಯೋತ್ಸವವನ್ನು ಆಚರಿಸಿದ್ದು ಎಲ್ಲರಿಗೂ ಸಂತಸತರುವಂತಾಯಿತು. ಇನ್ನೂ ಿಬ್ಬರೂ ಯುವ ನಾಯಕರೂ ಗೆಲುವಿನ ಪಟಾಕಿ ಸಿಡಿಸಿದ್ದನ್ನು ಅವರ ಬೆಂಬಲಿಗರಾದ  ಮಹ್ಮದರಫೀಕ ಶಿರೋಳ, ದಾವಲ ಗೊಳಸಂಗಿ, ಸದ್ದಾಂ ಕುಂಟೋಜಿ, ಶರಣು ಚಲವಾದಿ ಸೇರಿದಂತೆ ನೂರಾರು ಬೆಂಬಲಿಗರು ಸ್ಪರಸ್ಪರ ಗೂಲಾಲ ಎರಚಿಕೊಂಡು ವಿಜಯೋತ್ಸವವನ್ನು ಆಚರಿಸಿದರು. 



ಬಲಿಷ್ಠ ಮುಖಂಡರೊಂದಿಗೆ ಗೆದ್ದ ನಾಡಗೌಡ ಸಹೋದರರು:

ಬಸರಕೋಡ ಪಂಚಾಯತಿಯಲ್ಲಿ ಜಿಲ್ಲಾದ್ಯಂತ ರೈತರ ಹೋರಾಟದಲ್ಲಿ ತೊಡಗಿದ್ದ ಬಲಿಷ್ಠ ಮುಖಂಡರೊಬ್ಬರ ಸಹೋದರ ವಿರುದ್ಧ ಮಲ್ಲಿಕಾರ್ಜುನ ನಾಡಗೌಡ ಗೆದ್ದರೆ ಇನ್ನೊರ್ವ ಬಹು ದೊಡ್ಡ ಸಮಾಜದ ಹಿರಿಯ ಮುಖಂಡರೂ ಆಗಿದ್ದ ಅಭ್ಯರ್ಥಿಯ ವಿರುದ್ಧ ವರುಣರಾಜ ವಿಜಲಮಾಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಪಕ್ಷ ನಾಯಕರಿಗೆ ತಕ್ಕ ಉತ್ತರ ನೀಡಿದ ಯುವ ನಾಯಕರು:

ಬಸರಕೋಡ ಪಂಚಾಯತಿಯ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ನಡೆದ ಸಂದರ್ಭದಲ್ಲಿ ಪಂಚಾಯತಿ ವ್ಯಾಪ್ತಿಯಯಲ್ಲಿ ಕಾಂಗ್ರೆಸ್ ಬೆಂಬಲಿತ ಯಾವುದೇ ಅಭ್ಯರ್ಥಿಯೂ ಆಯ್ಕೆಯಾಗುವುದಿಲ್ಲ. ಅಲ್ಲದೇ ಕ್ಷೇತ್ರದಲ್ಲಿ ಶಾಸಕರಾಗಿ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿ ನಾಡಗೌಡ ಅವರ ಕುಟುಂಬಸ್ಥರೇ ಚುನಾವಣೆಗೆ ನಿಂತರೂ ಸದಸ್ಯರಾಗಿ ಆಯ್ಕೆಯಾಗುವುದಿಲ್ಲ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿಪಕ್ಷಗಳ ನಾಯಕರ ಮಾತನ್ನು ಸವಾಲಾಗಿ ಸ್ವೀಕರಿಸಿದ ಮಲ್ಲಿಕಾರ್ಜುನ ಹಾಗೂ ವರುಣರಾಜ ಅವರು ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಿ ಸ್ಥಳೀಯ ಮತದಾರರಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಹೇಳಿ ವಿಜಯಮಾಲೆಯನ್ನು ತಮ್ಮದಾಸಿಕೊಂಡಿದ್ದು ವಿಪಕ್ಷ ನಾಯಕರ ಟೀಕೆಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಕಾಂಗ್ರೆಸ ಹಿರಿಯ ಮುಖಂಡರು ಹೇಳಿದ್ದಾರೆ.

ಗ್ರಾಮ ಸಮಗ್ರ ಅಭಿವೃದ್ಧಿಯೇ ಮುಖ್ಯಗುರಿ:

ಬಸರಕೋಡ ಗ್ರಾಮವು ಸಾಕಷ್ಟು ಅಭಿವೃದ್ಧಿಯಾಗಿದ್ದರೂ ಇನ್ನೂ ಅನೇಕ ಜನಪರ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಇಂತಹ ಕಾರ್ಯಗಳನ್ನು ಮತದಾರರಿಗೆ ತಿಳಿಹೇಳಿದ್ದು ನಮಗೆ ಮತದಾನವನ್ನು ಮಾಡಿ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ. ರಾಜಕೀಯವನ್ನು ಕೇವಲ ಚುನಾವಣೆಗೆ ಮಾತ್ರ ಸಿಮಿತಗೊಳಿಸಿ ಗ್ರಾಮದ ಸಮಸ್ತ ಜನರ ಅಹವಾಲು ಹಾಗೂ ಗ್ರಾಮದಲ್ಲಿ ಆಗಬೇಕಾದ ಅತ್ಯಾಧುನಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಮುಖ್ಯಗುರಿಯನ್ನಾಗಿಸಿದ್ದೇವೆ ಎಂದು ನಾಡಗೌಡ ಸಹೋದರರು ತಿಳಿಸಿದ್ದಾರೆ.

 

 

 

 

Be the first to comment

Leave a Reply

Your email address will not be published.


*