ರಾಜ್ಯ ಸುದ್ದಿಗಳು
ದೇವನಹಳ್ಳಿ
ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ, ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತದೆ. ಇದರಿಂದ ರೋಗಿ ಮುಕ್ತರಾಗಿರಲು ಸಹಕಾರಿಯಾಗುತ್ತದೆ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷೆ ಚಂದ್ರಿಕಾ.ಎನ್.ರವಿ ತಿಳಿಸಿದರು.ತಾಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ದೇವನಹಳ್ಳಿ ಆಕಾಶ್ ಆಸ್ಪತ್ರೆ ಮತ್ತು ಗ್ರಾಮ ಪಂಚಾಯತಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಮಾನ್ಯವಾಗಿ ರಕ್ತವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ರಕ್ತದಾನ ಮಾಡಿದರೆ, ತೀರಾ ಅವಶ್ಯಕತೆ ಇರುವವರಿಗೆ ಉಪಯೋಗವಾಗುತ್ತದೆ. ಆಕ್ಸಿಡೆಂಟ್ ನಲ್ಲಿ ಪ್ರಾಣಾಪಾಯದಲ್ಲಿರುವವರಿಗೆ, ಗರ್ಭಿಣಿಯರಿಗೆ ರಕ್ತ ಹೆಚ್ಚು ಅವಶ್ಯಕತೆ ಇರುತ್ತದೆ. ನಾವು ಮಾನವರೂ, ಸರ್ವರಿಗೂ ನಮ್ಮ ಕೈಲಾದಷ್ಟು ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
*ಕಾರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಆರ್. ಜಯರಾಮು ಮಾತನಾಡಿ,* ರಕ್ತದಾನದಿಂದ ಹಲವು ಪ್ರಯೋಜನಗಳಿವೆ. ಆರೋಗ್ಯ ಸಮತೋಲನ ಕಾಪಾಡಲು ಸಹಕಾರಿಯಾಗುತ್ತದೆ.ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡುವಂತೆ ಆಗಬೇಕು ಎಂದರು.ಈ ವೇಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಾಂತಮ್ಮ ಮುನಿಕೃಷ್ಣಪ್ಪ, ಸದಸ್ಯರಾದ ಶಾಂತಮ್ಮ, ಕೆಂಪಣ್ಣ, ಡಿ.ಎಂ.ಕೇಶವ, ಟಿ.ಆಂಜಿನಪ್ಪ, ಎನ್ .ಚಂದ್ರುಶೇಖರ್, ರವಿಕುಮಾರ್, ಶೇಖರ್, ಟಿ.ಎಸ್. ರಾಜಣ್ಣ , ನಾಗರತ್ನಮ್ಮ, ವೈ.ಕೆ.ರವಿಕುಮಾರ್, ಮುಖಂಡ ಕಾರಹಳ್ಳಿ ಅಶೋಕ್ ಕುಮಾರ್, ಪಿಡಿಒ ಎಸ್. ಕವಿತಾ, ಆಶಾಕಾರ್ಯಕರ್ತೆಯರು, ಕಾರಹಳ್ಳಿ ಪಿಎಚ್ಸಿ ವೈದ್ಯ ಡಾ.ಧನಂಜಯ್, ಆಕಾಶ್ ಆಸ್ಪತ್ರೆಯ ವೈದ್ಯರು ಗ್ರಾಮಸ್ಥರು ಇದ್ದರು.
Be the first to comment