ರಾಜ್ಯ ಸುದ್ದಿಗಳು
ದೇವನಹಳ್ಳಿ
ಪ್ರತಿ ಗ್ರಾಮ ನಿವಾಸಿಗಳು ಸರಕಾರದ ಸೌಲಭ್ಯದಿಂದ ವಂಚಿತರಾಗಬಾರದು. ಗ್ರಾಮದಲ್ಲಿ ಬಗೆಹರಿಸಲಾಗದ ಸಮಸ್ಯೆಗಳಿಗೆ ಶಾಶ್ವತವಾಗಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ಆವರಣದಲ್ಲಿ ವಿಶೇಷ ಪಿಂಚಣಿ ಅದಾಲತ್ ಮತ್ತು ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್ ಸಾಂಕ್ರಾಮಿಕ ರೋಗವಿದ್ದರೂ ಸಹ ತಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು, ತಮ್ಮ ಆರೋಗ್ಯಕ್ಕೆ ಒತ್ತು ನೀಡಬೇಕಾಗಿದೆ. ಆರೋಗ್ಯದ ಹಿತದೃಷ್ಠಿಯಿಂದ ತಾವೆಲ್ಲ ಒಗ್ಗಟ್ಟಾಗಿ ಸರಕಾರದ ನೀತಿ ನಿಯಮಗಳನ್ನು ಪಾಲನೆ ಮಾಡುವಂತಾಗಬೇಕು. ಸರಕಾರದ ಪಿಂಚಣಿ ಅದಾಲತ್‌ನಲ್ಲಿ ಅರ್ಹ ಫಲಾನುಭವಿಗಲು ಇನ್ಮುಂದೆ ಸರಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಬಹಳಷ್ಟು ಸಹಕಾರಿಯಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ದೀಪ್ತಿ ವಿಜಯ್‌ಕುಮಾರ್ ಮಾತನಾಡಿ, ಸಾಕಷ್ಟು ದಿನಗಳಿಂದ ಕಂದಾಯ ಇಲಾಖೆಯವರಿಗೆ ಪಿಂಚಣಿ ಅದಾಲತ್ ನಮ್ಮ ಪಂಚಾಯಿತಿಯಲ್ಲಿ ಆಗಬೇಕು ಎಂದು ಒತ್ತಾಯ ಮಾಡಲಾಗಿತ್ತು. ಅದು ಇವತ್ತು ನೇರವೇರುತ್ತಿರುವುದು ಸಂತಸದ ವಿಷಯವಾಗಿದೆ. ಜನರಿಗೆ ಕೋವಿಡ್ ಕಾಲದಲ್ಲಿ ಎಲ್ಲಿಯೂ ಹೋಗದೆ, ಪಂಚಾಯಿತಿ ಆವರಣದಲ್ಲಿ ಈ ಕಾರ್ಯಕ್ರಮ ಆಗುತ್ತಿರುವುದು ಸಂತೋಷದ ವಿಷಯ. ಪಿಂಚಣಿ ಅದಾಲತ್‌ನಲ್ಲಿ ೧೦೦ ಜನರು ಅರ್ಜಿ ಹಾಕಿಕೊಂಡಿದ್ದರು. ವಿಕಲಚೇತನ, ಮನಸ್ವಿನಿ, ವೃದ್ಧಾಪ್ಯವೇತನ ಎಲ್ಲವೂ ಸಿಗುತ್ತಿದೆ. ಇದಕ್ಕೆ ಸಹಕಾರ ನೀಡಿದ ಕಂದಾಯ ಇಲಾಖೆ, ಗ್ರಾಪಂ ಸದಸ್ಯರು ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಈ ವೇಳೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಯುವ ಜೆಡಿಎಸ್ ಅಧ್ಯಕ್ಷ ಭರತ್, ಮಾಜಿ ಬಯಪ್ಪ ಸದಸ್ಯ ಶ್ರೀರಾಮಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎನ್.ಸೊಣ್ಣಪ್ಪ, ಕೆ.ರಮೇಶ್, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಲಕ್ಷ್ಮಣ್, ಬಿಜೆಪಿ ಉಪಾಧ್ಯಕ್ಷ ಐ.ಸಿ.ಗೋಪಿನಾಥ್, ಜಾಲಿಗೆ ಗ್ರಾಪಂ ಉಪಾಧ್ಯಕ್ಷ ಹೆಚ್.ಬಾಲಸುಬ್ರಮಣ್ಯ, ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್, ಗ್ರೇಡ್-೨ ತಹಶೀಲ್ದಾರ್ ಉಷಾ, ಉಪತಹಶೀಲ್ದಾರ್ ಚೈತ್ರ, ಕಂದಾಯ ನೀರಿಕ್ಷಕ ಚಿದಾನಂದ್, ಗ್ರಾಮ ಲೆಕ್ಕಿಗ ವಿನಯ್‌ಕುಮಾರ್, ಗ್ರಾಪಂ ಸದಸ್ಯರು, ಮುಖಂಡರು ಇದ್ದರು.
Be the first to comment