ಮನೆ ಬಾಗಿಲಿಗೆ ಕಂದಾಯ ದಾಖಲೆ; ಕೆಲೂರ ಗ್ರಾಮದಲ್ಲಿ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಅಲೆದಾಟ ಬೇಕಿಲ್ಲ. ಇಂದು, ನಾಳೆ ಎಂಬ ಸುತ್ತಾಟವಿಲ್ಲ. `ಕಂದಾಯ ದಾಖಲೆಗಳು ಮನೆ ಬಾಗಿಲಿಗೆ’ ಎಂಬ ಹೊಚ್ಚ ಹೊಸ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಇಂದು ಜಾರಿಗೆ ತಂದಿದೆ.

ಇಳಕಲ್ಲ ತಾಲ್ಲೂಕಿನ ಕೆಲೂರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ,ಪಿಕೆಪಿಎಸ್ ಅಧ್ಯಕ್ಷ ಬಸವರಾಜ ನಾಡಗೌಡರ ಹಾಗೂ ಕಂದಾಯ ನಿರೀಕ್ಷಕರಾದ ಧರ್ಮಣ್ಣ ಯತ್ನಟ್ಟಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡಿದರು.

ಗ್ರಾಮದ ಸಿದ್ದವ್ವ ಮಾದರ,ರಾಜು ಕುಂಚಗನೂರ ಹಾಗೂ ಶಂಕ್ರಪ್ಪ ಮಾದನಶೆಟ್ಟಿಯವರ ಹಾಗೂ ಗ್ರಾಮದ ಇತರರ ಮನೆ ಬಾಗಿಲಿಗೆ ತೆರಳಿ ಕಂದಾಯ ದಾಖಲೆ ಪತ್ರಗಳನ್ನು ವಿತರಿಸಿದರು.

ಕಂದಾಯ ದಾಖಲೆಗಳಾದ ಪಹಣಿ, ಜಾತಿಮತ್ತು ಆದಾಯ ಪ್ರಮಾಣಪತ್ರವನ್ನು ಕುಟುಂಬವಾರು ಪಡೆದು ಮತ್ತು ಮೋಜಣಿ ತಂತ್ರಾಂಶದಿಂದ ಸರ್ವೆ ನಕ್ಷೆ (ಅಟ್ಲಾಸ್‌) ಮುದ್ರಿಸಿ, ಆ ದಾಖಲೆಗಳನ್ನು ಪ್ಲಾಸ್ಟಿಕ್‌ ಲಕೋಟೆಯಲ್ಲಿರಿಸಿ ಪ್ರತಿ ರೈತಕುಟುಂಬದ ಮನೆ ಬಾಗಿಲಿಗೆ ತಲುಪಿಸಿ ಸರ್ಕಾರಿ ಕಚೇರಿಗಳಿಗೆ ಜನ ಸಾಮಾನ್ಯರ ಅಲೆದಾಟ ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ ಕೊಪ್ಪದ,ಉಮೇಶ ಹೂಗಾರ,ಹನಮಂತ ವಡ್ಡರ,ಬಸವರಾಜ ಮಾದರ,ಪಿಕೆಪಿಎಸ್ ಸದಸ್ಯರಾದ ವಜಿರಪ್ಪ ಪೂಜಾರ, ಎಸ್.ಆರ್. ಎನ್.ಇ ಫೌಂಡೇಶನ್ ಕಾರ್ಯಕರ್ತ ನಾಗರಾಜ ಶಡ್ಲಗೇರಿ ಗ್ರಾಮ ಪಂಚಾಯತಿ ಸಿಬ್ಬಂದಿ ರಂಗಪ್ಪ ತಳವಾರ,ಸಂಗಪ್ಪ ಚಲವಾದಿ,ಕಂದಾಯ ಇಲಾಖೆಯ ಸಿಬ್ಬಂದಿ ಬಸಪ್ಪ ಶಿರಬಡಗಿ,ಹಾಗೂ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*