ದಾಂಡೇಲಿಯಲ್ಲಿ ಮಾಸ್ಕ್ ಧರಿಸದೆ ಜನಸಂಚಾರ; 9 ದಿನದಲ್ಲಿ 1ಲಕ್ಷಕ್ಕೂ ಅಧಿಕ ದಂಡ ವಸೂಲಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ದಾಂಡೇಲಿ

ಕೊರೊನಾ ಮೂರನೇ ಅಲೆಯ ತಡೆಗೆ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತಿದ್ದು, ಸಾರ್ವಜನಿಕರು ಇದಕ್ಕೆ ಸಕಾರ ನೀಡಬೇಕೆಂದು ಹೇಳುತ್ತಲೇ ಬಂದಿದೆ. ಆದರೆ ಸಾರ್ವಜನಿಕರು ಮಾಸ್ಕ್ ಧರಿಸದೆ ಓಡಾಡುತ್ತಿದ್ದು, ನಗರದ ದಾಂಡೇಲಿಯಲ್ಲಿ ಮಾಸ್ಕ್ ಧರಿಸದವರ ಮೇಲೆ ಪ್ರಕರಣ ದಾಖಲಿಸಿ, ಕಳೆದ 9 ದಿನದಲ್ಲಿ 9 ಲಕ್ಷಕ್ಕೂ ಅಧಿಕ ಮೊತ್ತದ ದಂಡ ವಸೂಲಿ ಮಾಡಲಾಗಿದೆ ಎಂದು ತಹಶೀಲ್ದಾರ ಶೈಲೇಶ್ ಪರಮಾನಂದ ತಿಳಿಸಿದ್ದಾರೆ.

CHETAN KENDULI

ಮೂರನೆ ಅಲೆ ತಡೆಗೆ ನಗರದ ತಾಲೂಕಾಡಳಿತ, ನಗರಾಡಳಿತ, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತಿದೆ. ಮಾಸ್ಕ್ ಧರಿಸದವರನ್ನು ಗುರುತಿಸಿ ದಂಡ ವಸೂಲಿ ಮಾಡಲಾಗಿದೆ. ಆ.1ರಿಂದ 9ರವೆರೆಗೆ ಕೇವಲ ಒಂಭತ್ತು ದಿನದಲ್ಲಿ 1,02,800 ರೂಗಳನ್ನು ಇಲ್ಲಿನ ನಗರಾಡಳಿತ, ತಾಲೂಕಾಡಳಿತ, ಪೊಲೀಸ್ ಇಲಾಖೆ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸಂಗ್ರಹ ಮಾಡಲಾಗಿದೆ ಎಂದು ತಹಶೀಲ್ದಾರರು ತಿಳಿಸದ್ದಾರೆ.

Be the first to comment

Leave a Reply

Your email address will not be published.


*