ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ದಂಧೆ….! ಅಕ್ರಮಕೋರರೊಂದಿಗೆ ಡಿ.ವಾಯ್.ಎಸ್.ಪಿ. ಹುಲ್ಲೂರ ಸೇರಿ ಅನೇಕ ಅಧಿಕಾರಿಗಳು ಶಾಮಿಲು: ಯಂಕಪ್ಪ ಚಿತ್ತಾಪುರ ಆರೋಪ….!!!

ಅಂಬಿಗ್ ನ್ಯೂಸ್

ರಾಜ್ಯ ಸುದ್ದಿಗಳು

ಲಿಂಗಸೂರು:

CHETAN KENDULI

ಲಿಂಗಸೂರು ತಾಲೂಕಿನಲ್ಲಿ ಸಾಕಷ್ಟು ಅಕ್ರಮಗಳಲ್ಲಿ ಅಕ್ರಮ ಮರಳುಗಾರಿಕೆಯು ಮಿತಿ ಮೀರಿದೆ. ಅಕ್ರಮ ಮರಳುಗಾರರೊಂದಿಗೆ ಯಾದಗಿರಿ, ನಾರಾಯಣಪೂರ ಕೆಲ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ ಅಧಿಕಾರಿಗಳೂ ಶಾಮಿಲಾಗಿದ್ದು ಕೂಡಲೇ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ ಮಹಾ ನಿರ್ದೇಶಕರು ಅಕ್ರಮಕೊರರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಲಿಂಗಸೂರು ತಾಲೂಕಾ  ದಲಿತ ಸಂಘರ್ಷ ಸಮಿತಿ ಪ್ರ.ಕಾರ್ಯದರ್ಶಿ ಯಂಕಪ್ಪ ಚಿತ್ತಾಪುರ ಒತ್ತಾಯಿಸಿ.

ದೇವದುರ್ಗ ನದಿಯಿಂದ ದಿನಿತ್ಯ ಅಕ್ರಮ ಮರಳು ದಂಧೆಕೊರರು ಮರಳನ್ನು ತಂದು ನಾರಾಯಣಫೂರ ಜಲಾಶಯದ ಪಕ್ಕದಲ್ಲಿರುವ ಅರಣ್ಯ ಇಲಾಖೆಯ ಜಾಗದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಇಲ್ಲಿಂದ ಮತ್ತೆ ಅದನ್ನು ಬೇರೆಡೆಗೆ ಸಾಗಿಸುತ್ತಿದ್ದಾರೆ. ಅಲ್ಲದೇ ಈ ಎಲ್ಲ ದಂಧೆಯೂ ಹಗಲಿನಲ್ಲಿಯೇ ನಡೆಯುತ್ತಿದ್ದು ಅಕ್ರಮ ಮರಳು ದಂಧೆಕೋರರಿಗೆ ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಶಾಮಿಲಾಗಿದ್ದಾರೆ. ಇಂತಹ ದಂಧೆ ಕೋರರು ವಿರುದ್ಧ ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


 


ಮರಳು ದಂಧೆಯಲ್ಲಿ ಡಿ.ವಾಯ್.ಎಸ್.ಪಿ ಶಾಮಿಲು:

ಅಕ್ರಮ ಮರಳುಗಾರಿಕೆ ದಂಧೆಗೆ ಲಿಂಗಸೂರು ಡಿ.ವಾಯ್.ಎಸ್.ಪಿ. ಎಸ್.ಎಸ್.ಹುಲ್ಲೂರ ಹಾಗೂ ಸುರಪುರ ಡಿ.ವಾಯ್.ಎಸ್.ಪಿ ಅಧಿಕಾರಿಗಳು ಶಾಮಿಲಾಗಿದ್ದರಿಂದ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳಿನತ್ತ ಸ್ಥಳೀಯ ಪಿ.ಎಸ್.ಐ ಸ್ಥಳಕ್ಕೆ ಬೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ. ಇವರಲ್ಲದೇ ಭೂ ಗಣಿ ವಿಜ್ಞಾನಿ ಅಧಿಕಾರಿಗಳೂ ಈ ದಂಧೆಯಲ್ಲಿ ಶಾಮಿಲಾಗಿದ್ದಾರೆ. ಆದ್ದರಿಂದ ಇದರಲ್ಲಿ ಶಾಮಿಲಾಗಿರುವವರ ವಿರುದ್ಧ ರಾಜ್ಯ ನೀರಾವರಿ ಸಚಿವರು ಮಧ್ಯಸ್ಥಿಕೆ ವಹಿಸಿ ಬ್ರಷ್ಠ ಅಧಿಕಾರಿಗಳ ವಿರುದ್ಧ ಸೂಕ್ರ ಕಾನೂನು ಕ್ರಮ ಕೈಗೊಂಡು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಯಂಕಪ್ಪ ಚಿತ್ತಾಪುರ ಒತ್ತಾಯಿಸಿದ್ದಾರೆ.

ಅಕ್ರಮ ಮರಳುಗಾರಿಕೆಯಿಂದ ಸಾರ್ವಜನಿಕರಿಗೆ ಜೀವಹಾನಿ:

ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಬೇಕು ಎಂಬ ನಿಟ್ಟಿನಲ್ಲಿ ಚಿತಾಪೂರ ಗ್ರಾಮದ ಸಾಹೇಬಪಟೇಲ ಅವರು ಮರಳು ಲಾರಿಯನ್ನು ತಡೆಯಲು ಹೋಗಿ ಮರಣ ಹೊಂದಿದ್ದರು. ಅಲ್ಲದೇ ಸಮೀಪದ ಜಾವೂರ ಕ್ರಾಸ್ ನಲ್ಲ್ಲಿಯೂ ಕೂಡಾ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಇಂತಹ ಅಕ್ರಮಗಾರಿಕೆಯನ್ನ ತಡೆಗಟ್ಟಿ ಸರಕಾರದ ನಿಯಮಾನುಸಾರವಾಗಿ ಮರಳು ಗಣಿಗಾರಿಕೆಗೆ ಅವಕಾಶ ನೀಡಬೇಕು. ಅಕ್ರಮಕೋರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಇದಕ್ಕಾಗಿ ಜೀವ ಬಿಟ್ಟಂತಹ ಜುನರ ಆತ್ಮಕ್ಕೆ ಶಾಂತಿಯನ್ನು ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಣ್ಮುಚ್ಚಿ ಕುಳಿತಿರುವ ಪೊಲೀಸ ಇಲಾಖೆ:

ಈಗಾಗಲೇ ಸಾಕಷ್ಟು ಬಾರಿ ಜಿಲ್ಲೆಯ ಪೊಲೀಸ ಇಲಾಖೆಯ ಎಸ್.ಪಿ ಮತ್ತು ಡಿ.ವಾಯ್.ಎಸ್.ಪಿ. ಅವರಿಗೆ ಸಾಕ್ಷಿ ಸಮೇತವಾಗಿ ಲಿಖಿತ ಮನವಿ ನೀಡಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗದೇ ಕಣ್ಮುಚ್ಚಿ ಕುಳಿತಿದ್ದಾರೆ. ಅಲ್ಲದೇ ಇಂತಹ ಅಕ್ರಮ ದಂಧೆಯಿಂದ ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಯಾವುದೇ ದೂರು ದಾಖಲಿಸದೇ ಪೊಲೀಸರು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

 

 

Be the first to comment

Leave a Reply

Your email address will not be published.


*