ಕಛೇರಿಗೆ ಚಕ್ಕರ್ ಮೋಜಿಗೆ ಹಾಜರ್….! ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯ…!!! ರೋಡಲಬಂಡಾ ಕ್ಯಾಂಪನ ಕಛೇರಿಯಲ್ಲಿ ಅಧಿಕಾರಿಗಳೇ ಇರುವುದಿಲ್ಲ: ಯಂಕಪ್ಪ ಚಿತ್ತಾಪುರ ಆರೋಪ

ಅಂಬಿಗ್ ನ್ಯೂಸ್

ರಾಜ್ಯ ಸುದ್ದಿಗಳು

ಲಿಂಗಸೂರು:

AMARESH K

ಲಿಂಗಸೂರು ತಾಲೂಕಿನ ರೋಡಲಬಂಡಾ ಕ್ಯಾಂಪನಲ್ಲಿರುವ ಕೆ.ಬಿ.ಜೆ.ಎನ್.ಎಲ್.  ನಾರಾಯಣಪೂರ ಎಡದಂಡೆ ಕಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಾರ್ಯಾಯದಲ್ಲಿ ರೈತರಿಗೆ ಮಾಹಿತಿ ನೀಡಲು ಯಾವಬ್ಬ ಅಧಿಕಾರಿಗಳು ಇರುವುದಿಲ್ಲ. ಸದ್ಯಕ್ಕೆ ಕೋವಿಡ್-19 ಸಂದಿಗ್ಧ ಪರಿಸ್ಥಿತಿ ಹಾಗೂ ಬೆಸಿಗೆಯ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರವು ಕಾರ್ಯಾಲಯದ ಅವಧಿಯನ್ನು ಬದಲಾವಣೆ ಮಾಡಿದ್ದು ರಾಜ್ಯ ಸರಕಾರದ ನೀಧೇರ್ಶನಕ್ಕೆ ಅಧಿಕಾರಿಗಳಲು ಕಿಮ್ಮತ್ತೆ ಕೊಡುತ್ತಿಲ್ಲ ಎಂಬಂತಾಗಿದೆ.

ಹೌದು, ನಾರಾಯಣಪೂರ ಎಡದಂಡೆ ಕಾಲುವೆ ವಿಭಾಗದ ಅಡಿಯಲ್ಲಿ ಒಟ್ಟು 7 ಉಪ ವಿಭಾಗಗಳು ಬರುತ್ತವೆ. ಇದರಲ್ಲಿ ಮೂರು ಉಪ ವಿಭಾಗಗಳು ರೋಡಲಬಂಡಾ ಕ್ಯಾಂಪ್ ನಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಆದರೆ ಸ್ಥಳೀಯ ರೈತರು ಕೆಲ ಸಮಸ್ಯೆಗಳನ್ನು ಇಟ್ಟುಕೊಂಡು ಕಾರ್ಯಾಲಯಕ್ಕೆ ಬಂದರೆ ಕಛೇರಿಯಲ್ಲಿ ಯಾವಬ್ಬ ಅಧಿಕಾರಿಯೂ ಸಿಗುವುದಿಲ್ಲ. ಇದರಿಂದ ಬೇಸತ್ತಿರುವ ರೈತರು ಅಧಿಕಾರಿಗಳ ವರ್ಗಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. 

ಅಭಿವೃದ್ಧಿಗೆ ಅನುಕೂಲವಿದ್ದರೂ ಅಧಿಕಾರಿಗಳ ನಿರ್ಲಕ್ಷ: ಕಾರ್ಯಪಾಲಕ ಅಭಿಯಂತರ ಸುರೇಂದ್ರ ಬಾಬು ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ

ಕೆ.ಬಿ.ಜೆ.ಎನ್.ಎಲ್. ನಾರಾಯಪೂರ ಎಡದಂಡೆ ಕಾಲುವೆ ವಿಭಾಗದಿಂದ ನಾರಾಯಣಪೂರ, ಕುಷ್ಟಗಿ, ಯಲಬುರ್ಗಾ ಹಾಗೂ ಇಲಕಲ್ಲ ನಗರಗಳಲ್ಲಿ ನೂರಾರು ಕೋಟಿ ವೆಚ್ಚಗಳ ಕಾಮಗಾರಿಗಳು ನಡೆಯುತ್ತಿವೆ. ಅಲ್ಲದೇ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ತರ ಯೋಜನೆಗಳಾದ ರಾಂಪೂರ ಏತ್ ನೀರಾವರಿ, ಕೊಪ್ಪಳ ಏತ್ ನೀರಾವರಿ, ನಂದವಾಡಗಿ ಏತ್ ನೀರಾವರಿ ಯೋಜನೆಗಳನ್ನೂ ಇದೇ ಕಾರ್ಯಾಲಯದ ಮೂಲಕ ಮಾಡಲಾಗುತ್ತಿದೆ. ಇಂತಹ ದೊಡ್ಡ ಮಟ್ಟದ ಅಧಿಕಾರಗಳನ್ನು ಹೊಂದಿರುವ ಕಾರ್ಯಾಲಯಗಳಲ್ಲಿ ಕರ್ತವ್ಯ ನೀರ್ವಹಿಸುವ ಕಾರ್ಯಪಾಲಕ ಅಭಿಯಂತರ ಸುರೇಂದ್ರ ಬಾಬು  ಮಾತ್ರ ನಿರ್ಲಕ್ಷ ತೋರಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಲಿಂಗಸೂರ ತಾಲೂಕಾ ದಲಿತ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಯಂಕಪ್ಪ ಚಿತ್ತಾಪುರ ಆರೋಪಿಸಿದ್ದಾರೆ.



ಸರಕಾರದ ಮಾಹಿತಿ ಹಕ್ಕು ಅಧಿನಿಯಮಕ್ಕೂ ಕಿಮ್ಮತ್ತು ಕೊಡದ ಅಧಿಕಾರಿಗಳು: ಕಛೇರಿಗಳಲ್ಲಿ ನಾಮ ಫಲಕವೇ ಇಲ್ಲಾ

7 ಉಪ ವಿಭಾಗಗಳನ್ನು ಹೊಂದಿರುವ ಅಭಿಯಂತರರ ಪಾಲಿಕೆ ಕಾರ್ಯಾಲಯದ ಮೂಲಕ ನಡೆಯುತ್ತಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಕೇಳ ಬೇಕೆಂದು  ಕಾರ್ಯಾಲಯಕ್ಕೆ ಬಂದರೆ ಯಾವ ಅಧಿಕಾರಿಗಳಿಂದ ಮಾಹಿತಿ  ಪಡೆಯಬೇಕು ಎನ್ನುವುದೇ ತಿಳಿಯುವುದಿಲ್ಲ. ಅಲ್ಲದೇ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಪ್ರತಿಯೊಂದು ಸರಕಾರಿ ಕಛೇರಿಗಳನ್ನು ಮಾಹಿತಿ ಹಕ್ಕು ನಿಯಮದಡಿ ಮಾಹಿತಿ ಒದಗಿಸುವ ಅಧಿಕಾರಿಗಳ ಸಮಗ್ರ ಮಾಹಿತಿ ಫಲಕವನ್ನು ಹಾಕಬೇಕು ಎನ್ನುವ ಆದೇಶವಿದ್ದರೂ ಸ್ಥಳೀಯ ಅಧಿಕಾರಿಗಳು ಸರಕಾರದ ಆದೇಶವನ್ನು ಗಾಳಿಗೆ ತೂರಿ ಯಾವುದೇ ಕಛೇರಿಗಳಲ್ಲಿಯೂ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಒದಗಿಸುವ ಯಾವಬ್ಬ ಅಧಿಕಾರಿಗಳ ಮಾಹಿತಿ ಫಲಕವನ್ನೂ ಹಾಕಿಲ್ಲ ಎಂದು ಆರೋಪಿಸಲಾಗಿದೆ.

ಗುತ್ತಿಗೆದಾರರನ್ನೇ ಸೃಷ್ಠಿ ಮಾಡಿ ಹಗಲು ದರೋಡೆ ಮಾಡುತ್ತಿರುವ ಕೆ.ಬಿ.ಜೆ.ಎನ್.ಎಲ್. ಇಂಜಿನಿಯರಗಳು :

ರೋಡಲಬಂಡಾ ಕ್ಯಾಂಪನಲ್ಲಿರುವ ಉಪ ವಿಭಾಗ ನಂ.33ರಲ್ಲಿ ಕೆಲ ಇಂಜಿನಿಯರಗಳು ಕೇವಲ 1 ರೂಪಾಯಿನಲ್ಲಿ ಮಾಡುವ ಕಾಮಗಾರಿಗಳನ್ನು 10 ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆದು ತಾವೇ ಸೃಷ್ಠಿ ಮಾಡಿದಂತಹ ಗುತ್ತಿಗೆದಾರರ ಮೂಲಕ ಕಾಮಗಾರಿಗಳ ಟೆಂಡರ್ ಪಡೆದು ತಾವೇ ಮುಂದೆ ನಿಂತು ಉಪ ವಿಭಾಗದಿಂದ ಕಡಿಮೆ ವೆಚ್ಚದಲ್ಲಿಯೇ ಮಾಡಬಹುದಾದ ಕಾಮಗಾರಿಗಳನ್ನು ಹೆಚ್ಚಿನ ಹಣದಲ್ಲಿ  ಮಾಡುವ ಮೂಲಕ ಉಪ ವಿಭಾಗದಿಂದ ಹಣ ಲೂಟಿ ಹೊಡೆದು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇಂತಹ ಹಗಲು ದರೋಡೆ ನಡೆಯುತ್ತಿರುವುದನ್ನು ವಿಭಾಗದ ಮೇಲಾಧಿಕಾರಿಗಳು ಮೌಖಿಕವಾಗಿ ಹೇಳಿದರೂ ಇಂತಹ ಇಂಜಿನಿಯರಗಳ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿರುವುದನ್ನು ನೋಡಿದರೆ ವಿಭಾಗದ ಎಲ್ಲ ಅಧಿಕಾರಿಗಳೂ ಹಣ ಲೂಟಿಯಲ್ಲಿ ಶಾಮಿಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಯಂಕಪ್ಪ ಚಿತ್ತಾಪುರ ಆರೋಪಿಸಿದ್ದಾರೆ.

Be the first to comment

Leave a Reply

Your email address will not be published.


*