ರಾಜ್ಯ ಸುದ್ದಿಗಳು
ಯಲಹಂಕ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜನಕುಂಟೆ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು.ಠಾಣೆಯ ಮೊದಲ ಇನ್ಸ್ಪೆಕ್ಟರ್ ಆಗಿ ಭರತ್ ಬಿ. ಅವರನ್ನು ನೇಮಿಸಲಾಗಿದೆ.ಮಂಗಳವಾರ ಸಂಜೆ ದೊಡ್ಬಳ್ಳಾಪುರ ಡಿವೈಎಸ್ಪಿ ಕಚೇರಿಯಲ್ಲಿ ಪ್ರಥಮ ಇನ್ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾದ ಬರತ್ ಬಿ ಅವರನ್ನು ಡಿವೈಎಸ್ಪಿ ಕೆ ಎಸ್ ನಾಗರಾಜ್ ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಅವರು ಅಭಿನಂದಿಸಿದರು.
ಅಪರಾಧ ಪ್ರಕರಣಗಳ ತನಿಖೆ ಹಾಗೂ ಕಾನೂನು ಸುವ್ಯವಸ್ಥೆಯ ದಕ್ಷ ನಿರ್ವಹಣೆಯ ದೃಷ್ಟಿಯಿಂದ ಮತ್ತು ಪೊಲೀಸ್ ಠಾಣೆಗಳನ್ನು ಮರು ಸಂಘಟನೆಯ ಕಾರಣ ಬೆಂಗಳೂರು ಜಿಲ್ಲೆಯ 7 ಪೊಲೀಸ್ ಠಾಣೆಗಳು ಪೊಲೀಸ್ ಇನ್ಸ್ಪೆಕ್ಟರ್ ಠಾಣೆಗಳಾಗಿ ಮೇಲ್ದರ್ಜೆಗೆರಿಸಿ ಕರ್ನಾಟಕ ರಾಜ್ಯಪಾಲರ ಆದೇಶದನ್ವಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಎನ್ ವನಜ ಅವರು ಆದೇಶಿಸಿದ್ದರುಇದರ ಅನ್ವಯ ದೊಡ್ಡಬಳ್ಳಾಪುರ ನಗರ ವೃತ್ತದಲ್ಲಿದ್ದ ರಾಜನಕುಂಟೆ ಪೊಲೀಸ್ ಇನ್ಸ್ಪೆಕ್ಟರ್ ಕಾಣೆಯಾಗಿ ಮೇಲ್ದರ್ಜೆಗೇರಿದು. ದೊಡ್ಡಬಳ್ಳಾಪುರ ನಗರ ವೃತ್ತದಲ್ಲಿ ದೊಡ್ಡಬಳ್ಳಾಪುರ ನಗರ ಠಾಣೆ ದೊಡ್ಡಬೇಳವಂಗಲ ಹೊಸಹಳ್ಳಿ ಠಾಣೆ ಮಾತ್ರ ಉಳಿದಿವೆ
Be the first to comment