ರಾಜ್ಯ ಸುದ್ದಿಗಳು
ಭಟ್ಕಳ
ಭಟ್ಕಳದ ಇತಿಹಾಸದಲ್ಲಿ ಶಂಶುದ್ದೀನ್ ಜುಕಾಕು ರವರು ಶಾಸಕರಾಗಿ ಮತ್ತು ಉಪ ಹಣಕಾಸು ಸಚಿವರಾಗಿ ತಾಲೂಕಿಗೆ ಕೀರ್ತಿ ಪ್ರಾಯರಾಗಿರುತ್ತಾರೆ. ಇವರನಂತರದಲ್ಲಿ ಭಟ್ಕಳದಲ್ಲಿ ವಿದ್ಯುತ್ ಶಕ್ತಿಯ ಕ್ರಾಂತಿಯಾಗಿ ಮನೆಮನೆಗೆ ಬೆಳಕಾಗುವ ಹಾಗೆ ಮಾಡಿ ತಾಲೂಕಿನಲ್ಲಿ ಅಲ್ಲದೇ ರಾಜ್ಯಾದ್ಯಂತ ಪ್ರಸಿದ್ದಿಯನ್ನು ಪಡೆದಿದ್ದರು. ಮತ್ತು ಉತ್ತಮ ರಾಜಕಾರಣಿ ಹಾಗೂ ಸರ್ವಧರ್ಮಯರ ಮಹಾನ್ ನಾಯಕರಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಇವರ ಆಡಳಿತ ಅವಧಿಯಲ್ಲಿ ಯಾರೂ ಮೇಲೂ ಕೀಳು ಎನ್ನದೇ ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎಂಬ ನೀತಿಯನ್ನು ಪಾಲಿಸಿಕೊಂಡು ಬಂದಂತಹ ಒಳ್ಳೆಯ ರಾಜಕೀಯ ಮುತ್ಸದ್ದಿಯಾಗಿದ್ದರು. ಇಂತಹ ಜನಪ್ರಿಯ ಸಚಿವರ ಹೆಸರನ್ನು ಭಟ್ಕಳದ ಸರ್ಕಲ್‌ಗೆ ಭಟ್ಕಳದ ನಾಗರಿಕರು ಇಟ್ಟಿದ್ದರು.
ಅದರೆ ಇದನ್ನು ಸಹಿಸದ ಹಿಂದಿನ ಇತಿಹಾಸ ಅರಿಯದ ಈಗಿನ ಕೆಲವು ವ್ಯಕ್ತಿಗಳು ಇಂತಹ ಧೀಮಂತ ನಾಯಕರ ಹೆಸರನ್ನು ಬದಲಾಯಿಸಲು ತಯಾರಿ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಕಾರಣ ಮುಂಬರುವ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಮತ್ತು ವಿಧಾನಸಭಾ ಚುನಾವಣಾ ದೃಷ್ಟಿಯನ್ನು ಇಟ್ಟುಕೊಂಡು ಊರಿನ ಜನರಲ್ಲಿ ಅಶಾಂತಿ ಉಂಟು ಮಾಡಿ, ತಮ್ಮ ರಾಜಕೀಯ ಲಾಭ ಮಾಡಿಕೊಳ್ಳುವ ಪಿತೂರಿ ನಡೆಸುತ್ತಿರುವುದು ನಮ್ಮ ಪಾರ್ಟಿಯ ಗಮನಕ್ಕೆ ಬಂದಿರುತ್ತದೆ.
ಕಾರಣ ಇಂತಹ ದುಷ್ಟ ವ್ಯಕ್ತಿಗಳ ಮತ್ತು ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ ಭಟ್ಕಳ ಶಂಶುದ್ದೀನ್ ಸರ್ಕಲ್‌ಗೆ ಈ ಹಿಂದಿನಿಂದ್ಲೂ ಇಟ್ಟಿರುವ ಹೆಸರನ್ನೇ ಮುಂದುವರಿಸಿಕೊಂಡು ಹೋಗಲು ನಮ್ಮ ಪಾರ್ಟಿಯು ಒತ್ತಾಯಿಸುತ್ತಿದೆ. ಮತ್ತು ಮುಂದಿನ ದಿನಗಳಲ್ಲಿ ಬದಲಾಯಿಸಲು ಪ್ರಯತ್ನಿಸಿದಲ್ಲಿ ಈ ಕುರಿತು ತೀವ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಮನವಿಯನ್ನು ಭಟ್ಕಳದ ಡಿವೈಎಸ್‌ಪಿ ಅವರ ಮೂಲಕ ಉತ್ತರಕನ್ನಡ ಜಿಲ್ಲಾ ಎಸ್ ಪಿ ಯವರಿಗೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷರು ಉತ್ತರ ಕನ್ನಡ ತೌಫಿಕ್ ಬ್ಯಾರಿ ಹಾಗೂ ಇತರರು ಉಪಸ್ಥಿತರಿದ್ದರು.
Be the first to comment