ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಸರಕಾರದ ಆದೇಶದನ್ವಯ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಹಂತ, ಹಂತವಾಗಿ ಪ್ರಾರಂಭವಾಗುತ್ತಿರುವದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸೆಪ್ಟೆಂಬರ 1 ರಿಂದ ಸಂಸ್ಥೆಯ ಬಸ್ ಪಾಸ್ ಲಭ್ಯತೆ ಕುರಿತು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಗಮನಕ್ಕೆ ತರಲಾಗಿದ್ದು ವಿದ್ಯಾರ್ಥಿಗಳು ಸೇವಾಸಿಂಧು ಆನಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ಪಾಸ್ ಕೌಂಟರ್‍ಗಳಿಂದ ಬಸ್ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ.
2020-21ನೇ ಸಾಲಿನಲ್ಲಿ ಬಸ್ ಪಾಸ್ ಪಡೆದ ಹಾಗೂ ಬಸ್ ಪಾಸ್ ಪಡೆಯದೇ ಇರುವ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಶೈಕ್ಷಣಿಕ ಹಿತದೃಷ್ಠಿಯಿಂದ ಪ್ರಸಕ್ತ ವರ್ಷದಲ್ಲಿ ಶಾಲಾ, ಕಾಲೇಜುಗಳಿಗೆ ಪ್ರವೇಶಾತಿ ಪಡೆದ ದಾಖಲಾತಿಯನ್ನು ತೋರ್ಪಡಿಸಿ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಸೆಪ್ಟೆಂಬರ 1 ರಿಂದ 25 ರವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು, ಇನ್ನುಳಿದಂತೆ 2020-21ನೇ ಸಾಲಿನಲ್ಲಿ ಪ್ರವೇಶ ಪಡೆದು ತರಗತಿ, ಪರೀಕ್ಷೆ ಬಾಕಿ ಇರುವ ಎಲ್ಲಾ ವರ್ಗದ ಪದವಿ, ಡಿಪ್ಲೊಮಾ, ಐ.ಟಿ.ಐ, ಸಂಜೆ ಕಾಲೇಜು, ಸ್ನಾತಕೋತ್ತರ, ವೃತ್ತಿಪರ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕಕ್ಕೆ ಅಂತ್ಯಗೊಳ್ಳುವಂತೆ ಗರಿಷ್ಟ ನವ್ಹೆಂಬರ್-2021ರವರೆಗೆ ಸಂಸ್ಥೆಗೆ ಸಂಬಂಧಪಟ್ಟ ಪಾಸ್ ಕೌಂಟರ್‍ಗಳಿಂದ ಸಹಿ ಹಾಗೂ ಮೊಹರು ಪಡೆದುಕೊಂಡು ಉಚಿತವಾಗಿ ತರಗತಿ ಹಾಗೂ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿರುತ್ತದೆ.
ಆದಾಗ್ಯೂ, ಸಹ ಪ್ರಸಕ್ತ ವರ್ಷದ ಬಸ್ ಪಾಸ್ ಪಡೆಯದೇ ಇರುವ ವಿದ್ಯಾರ್ಥಿಗಳು ಉಚಿತ ಪ್ರಯಾಣದ ಅವಧಿಯನ್ನುü ವಿಸ್ತರಿಸುವಂತೆ ಕೆಲವು ಬಸ್ ನಿಲ್ದಾಣಗಳಲ್ಲಿ ಸಂಸ್ಥೆಯ ಬಸ್ ಕಾರ್ಯಾಚರಣೆಗೆ ಅಡಚಣೆ ಹಾಗೂ ಪ್ರತಿಭಟನೆಯನ್ನು ಮಾಡುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ 2021-22ನೇ ಸಾಲಿಗೆ ಅಗತ್ಯವಾದ ಬಸ್ ಪಾಸ್‍ಗಳ ದಾಸ್ತಾನು ಲಭ್ಯವಿದ್ದು, ಈಗಾಗಲೇ ಸೆಪ್ಟೆಂಬರ 1 ರಿಂದ ವಿದ್ಯಾರ್ಥಿ ಬಸ್ ಪಾಸ್ ವಿತರಣೆಯ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 95179 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ 26 ರಿಂದ 29 ವರೆಗೆ ಕೇವಲ 04 ದಿನಗಳಲ್ಲಿ 54769 ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆಯಾಗಿವೆ.
ಸದರಿ ಅರ್ಜಿ ಸಲ್ಲಿಕೆಯ ಪ್ರಮಾಣ ಹೆಚ್ಚಳವಾಗಿರುವುದರಿಂದ ಸಂಸ್ಥೆಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜಿಸಿ ಬಸ್ ಪಾಸ್ ವಿತರಣಾ ಕಾರ್ಯವು ಸಮರೋಪಾದಿಯಲ್ಲಿ ಪ್ರಗತಿಯಲ್ಲಿರುತ್ತದೆ. ಆದ್ದರಿಂದ ಪ್ರಸಕ್ತ ವರ್ಷದ ಬಸ್ ಪಾಸ್ ಪಡೆಯದೇ ಇರುವ ವಿದ್ಯಾರ್ಥಿಗಳು ಈ ಕೂಡಲೇ ಸೇವಾಸಿಂಧು ಆನಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ಸಂಸ್ಥೆಯ ಪಾಸ್ ಕೌಂಟರ್‍ಗಳಿಂದ ಬಸ್ ಪಾಸ್ ಪಡೆದುಕೊಂಡು, ಸಂಸ್ಥೆಯ ಜೊತೆಗೆ ಸಹಕರಿಸಲು ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ಸಂಘಟನೆ, ಶಾಲಾ, ಕಾಲೇಜು ಆಡಳಿತ ಮಂಡಳಿಗಳಲ್ಲಿ ವಾಕರಸಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕೋರಲಾಗಿದೆ.
Be the first to comment