ರಾಜ್ಯ ಸುದ್ದಿಗಳು
ದೇವನಹಳ್ಳಿ
ಕನ್ನಡ ಚಿತ್ರರಂಗದ ನಾಯಕ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮಕ್ಕೆ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಯುವಕರ ತಂಡದಿಂದ ಪುಣ್ಯಸ್ಮರಣೆ ಕಾರ್ಯಕ್ರಮವನ್ನುನೆರವೇರಿಸಲಾಯಿತು.ಬೆಳಿಗ್ಗೆಯಿಂದಲೇ ಯುವಕರ ತಂಡ ಅಪ್ಪುವಿನ ಭಾವಚಿತ್ರವನ್ನಿಟ್ಟು ಹೂವಿನ ಮಾಲೆ ಹಾಗೂ ಕಟೌಟ್ ನಿಲ್ಲಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಮತ್ತೇ ಹುಟ್ಟಿಬಾ ಅಪ್ಪು ಬಾಸ್ ಎಂದು ಘೋಷಣೆ ಕೂಗುತ್ತ ತಮ್ಮ ನೋವಿನಲ್ಲೂ ಅಪ್ಪುವಿಗೆ ವಿಶೇಷ ಗೌರವನಮನ ಸಲ್ಲಿಸಿದರು.
ಮಧ್ಯಾಹ್ನ 1 ಗಂಟೆಯ ನಂತರ ಅಪ್ಪುವಿನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ತುಳಸಿ ನೀರು ಬಿಡುವುದರ ಮೂಲಕ ಗ್ರಾಮದ ಮಹಿಳೆಯರು ಮತ್ತು ಯುವಕರು ಅಪ್ಪುವಿಗೆ ಶಾಂತಿ ಕೋರಿದರು. ನಂತರ ಅವರ ಸ್ಮರಣಾರ್ಥಕವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪುನೀತ್ ರಾಜ್ಕುಮಾರ್ ಹಾಡುಗಳು ಗ್ರಾಮದಲ್ಲಿ ಮೊಳಗಿಸಲಾಯಿತು.
ಅಪ್ಪು ಅಭಿಮಾನಿ ರಾಜು ಮಾತನಾಡಿ, ಪುನೀತ್ ರಾಜ್ಕುಮಾರ್ ಅವರು ನಮ್ಮೆಲ್ಲರ ಜೊತೆಯಲ್ಲಿದ್ದಾರೆ. ಅವರು ಅಗಲಿದ್ದಾರೆ ಎಂದರೆ ನಂಬಲು ಸಾದ್ಯವಾಗುತ್ತಿಲ್ಲ. ಎಲ್ಲರ ಮನಸ್ಸಿನಲ್ಲಿ ಚಿರಾಯುವಾಗಿರುವ ಅಪ್ಪು ಇವತ್ತಿಗೆ ನಮ್ಮನ್ನು ಅಗಲಿ 11ದಿನವಾಗಿದೆ. 11ನೇ ದಿನದ ಪುಣ್ಯತಿಥಿಯನ್ನು ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಯುವಕರೆಲ್ಲರೂ ಸೇರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ ಎಂದರು.
ಗ್ರಾಮದ ಯುವತಿ ಅಶ್ವಿನಿ ಮಾತನಾಡಿ, ಪುನೀತ್ ರಾಜ್ಕುಮಾರ್ಅವರನ್ನುನೋಡಿಕೊಳ್ಳಬೇಕೆಂದುಕೊಂಡಿದ್ದೆ, ನೋಡಲು ಸಾದ್ಯವಾಗಲಿಲ್ಲ. ಅವರು ನಮ್ಮನ್ನು ಅಗಲಿದ ನಂತರ ಅವರ ಸಾಧನೆಗಳು ಗೊತ್ತಾಗಿದೆ. ಶಕ್ತಿದಾಮ ಮೂಲಕ 1800 ಮಹಿಳೆಯರಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ಅದು ನಮಗೆ ಸ್ಪೂರ್ತಿ ತಂದಿದೆ. ಅಪ್ಪು ಸಾರ್ ಅವರಿಗೆ ಮಿಸ್ ಮಾಡಿಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೇವೆ ಎಂದರು. ಈ ವೇಳೆಯಲ್ಲಿ ಕಾರಹಳ್ಳಿ ಗ್ರಾಮದ ಯುವಕರ ತಂಡ, ಮಹಿಳೆಯರು ಮತ್ತು ಮಕ್ಕಳು ಭಾಗಿಯಾಗಿದ್ದರು.
Be the first to comment