ಜಿಲ್ಲಾ ಸುದ್ದಿಗಳು
ಬೆಂಗಳೂರು (ದೇವನಹಳ್ಳಿ):
ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಕೋವಿಡ್ ಕೇರ್ ಸೆಂಟರ್ ಆಗಿರುವ ಕಾರಣ ಅಲ್ಲಿನ ಕೋವಿಡ್ ರೋಗಿಗಳಿಗೆ ಸಮಾಜ ಸೇವಕ ದ್ಯಾವರಹಳ್ಳಿ ಶಾಂತಕುಮಾರ್ ರವರು 33 ಕ್ರೇಟ್ ಗಳ ಮೊಟ್ಟೆಗಳನ್ನು ನೀಡಿದರು.
ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ದ್ಯಾವರಹಳ್ಳಿ ಶಾಂತಕುಮಾರ್ ರವರ ತಂದೆಯವರಾದ ವೆಂಕಟೇಶಪ್ಪನವರ ಪುಣ್ಯಸ್ಮರಣೆ ಅಂಗವಾಗಿ ಕುಂದಾಣ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲಾ ಆವರಣದ ಕೋವಿಡ್ ಕೇರ್ ಸೆಂಟರ್ ಗೆ ಒಂದು ಸಾವಿರ ಮೊಟ್ಟೆಗಳನ್ನು ನೀಡಿದರು.
ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಾಂತಕುಮಾರ್ ರವರ ತಂದೆಯವರು 9 ನೇ ಪುಣ್ಯಸ್ಮರಣೆ ಅಂಗವಾಗಿ ಕುಂದಾಣ ಸಿ.ಸಿ.ಸೆಂಟರ್ ನಲ್ಲಿರುವ ಕೊರೋನಾ ರೋಗಿಗಳಿಗೆ ಅವರ ಆರೋಗ್ಯದಲ್ಲಿ ಆದಷ್ಟು ಬೇಗ ಚೇತರಿಕೆ ಕಾಣಲೆಂದು ಇಮ್ಯುನಿಟಿ ಹೆಚ್ಚಾಗಿರುವ ಮೊಟ್ಟೆಗಳನ್ನು ನೀಡಿತ್ತಿದ್ದಾರೆ ಇದಲ್ಲದೆ ಕಳೆದ ವರ್ಷ ಕೋವಿಡ್ ಪ್ರಾರಂಭದಿಂದಲೂ ಬಡವರಿಗೆ ಮತ್ತು ನಿರ್ಗತಿಕರಿಗೆ ದಿನಸಿ ಕಿಟ್, ಹೊಟ್ಟೆ ತುಂಬಿಸಲು ಊಟ, ಹಾಗೂ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಬೇಕಾದ ಸಾಮಾಗ್ರಿಗಳನ್ನು ನೀಡುತ್ತಿದ್ದು ಇವರ ಸೇವೆ ತಾಲ್ಲೂಕಿನ ಜನತೆಗೆ ಹೀಗೆ ಇರಲಿ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಆಶಿಸಿದರು.
ಜನರ ಕಷ್ಟಗಳಿಗೆ ನಾವುಗಳು ಸಕಾರಾತ್ಮಕವಾಗಿ ಸ್ಪಂದಿಸಿದಾಗ ಮಾತ್ರ ನಾವು ಮಾಡಿದ ಸೇವೆ ನೆನೆಯಲು ಸಾಧ್ಯ, ಜಗತ್ತನ್ನೆ ಆವರಿಸಿ ಮನುಷ್ಯನ ಪ್ರಾಣದ ಜೊತೆ ಆಟವಾಡುತ್ತಿರುವ ಮಹಾಮಾರಿ ಕೊವಿಡ್ ನಿಂದ ಜನತೆ ತತ್ತರಿಸಿದ್ದಾರೆ ಇಂತಹ ಸಂದರ್ಭಗಳಲ್ಲಿ ಬಡವರಿಗೆ ಆಸರೆಯಾಗಿ ನಮ್ಮ ಕೈಲಾದ ಸೇವೆ ಮಾಡಿದರೆ ನಮಗೂ ತೃಪ್ತಿ ದೊರೆಯುತ್ತದೆ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಮೊಟ್ಟೆಗಳನ್ನು ನೀಡಿ ತಮ್ಮ ಮನದಾಳದ ಮಾತನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕುಂದಾಣ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಮುಖಂಡರಾದ ವೆಂಕಟಪ್ಪ, ಚಲಪತಿ, ವಿಜಯ್ ಕುಮಾರ್, ಹೆಗ್ಗೆನಹಳ್ಳಿ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ,ವಸತಿ ಶಾಲೆಯ ಪ್ರಾಂಶುಪಾಲ ವೆಂಕಟೇಶ್ ಇದ್ದರು.
Be the first to comment