ನಾಲತವಾಡ ಕೋವಿಡ್ ಕೇರ್ ಸೆಂಟರ್ ಪರಿಶೀಲಿಸಿದ ತಹಸೀಲ್ದಾರ್ ಕಡಕಭಾವಿ

ವರದಿ: ಕಾಶೀನಾಥ ಬಿರಾದಾರ

ಜಿಲ್ಲಾ ಸುದ್ದಿಗಳು

CHETAN KENDULI

ನಾಲತವಾಡ:

ಕೋವಿಡ್ ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆಯಗದಂತೆ ನಿಗವಹಿಸಬೇಕು ಎಂದು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ತಹಸೀಲ್ದಾರ್ ವಿಜಯ ಕಡಕಭಾವಿ ಹೇಳಿದರು.

ಮಂಗಳವಾರ ನಾಲತವಾಡ ಪಟ್ಟಣದ ಕೋವಿಡ್ ಕೇರ್ ಸೆಂಟರ್ ಬೇಟಿ ನೀಡಿ ಆರೋಗ್ಯ ಸಿಬ್ಬಂದಿಗಳೊಂದಿಗೆ ಪರಿಶೀಲನಾ ಸಭೆ ನೆಡೆಸಿ ಅವರು ಮಾತನಾಡಿ, ಕೋವಿಡ್ ಕೇರ್ ಸೆಂಟರನಲ್ಲಿ ರೋಗಿಗಳಿಗೆ ಬೇಕಾದ ಸಂಪೂರ್ಣ ಸೌಲಭ್ಯ ಸರಕಾರ ಒದಗಿಸಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ C.B.ವಿರಕ್ತಮಠ, ಉಪತಹಶೀಲದಾರ ಶ್ರೀ ಜಿ.ಎನ್ ಕಟ್ಟಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ,  ಕಂದಾಯ ನಿರೀಕ್ಷಕರು ಶ್ರೀ ಎನ್ ಬಿ.ಮಾವಿನಮಟ್ಟಿ (ದೊರೆ), ಗ್ರಾಮಲೆಕ್ಕಾಧಿಕಾರಿ ಏಕನಾಥ ಸಾಲೋಟಗಿ ಹಾಗೂ ಆರೋಗ್ಯ ಇಲಾಖೆಯ ಸಿಬಂದಿ ಮುನಾ ಹೂನಟೂಗಿ, ಇರಣ್ಣ ಕಸೆಬೆಗೌಡರ, ಪಟ್ಟಣ ಪಂಚಾಯತಿ ಆರೋಗ್ಯ ಕಿರಿಯ ಸಾಹಾಯಕ ಚಂದ್ರಶೇಖರ ಸಗರ್, ಪ್ರಸನ್ ಅವಟಿ, ಕಂದಾಯ ಇಲಾಖೆಯ ಸಿಬ್ಬಂದಿ ಮುತ್ತು ತಳವಾರ, ಮಹಿಬು ನಾಡದಾಳ ಇದ್ದರು.

 

Be the first to comment

Leave a Reply

Your email address will not be published.


*