ಹಾಲಿನ ಪಾಕೇಟ್ ಸಮೆತ ಸಿಕ್ಕಿಬಿದ್ದ ಅಂಗನವಾಡಿ ಕಾರ್ಯಕರ್ತೆಯರು…! ಶಿಸ್ಥು ಕ್ರಮಕ್ಕೆ ಗ್ರಾಮಸ್ಥರಿಂದ ಆಗ್ರಹ

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

ವಿಜಯನಗರ:

CHETAN KENDULI

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಿಬಿ ತಾಂಡದ  ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳಿಗೆ ಸರ್ಕಾರ ಕೊಡುವ ಹಾಲಿನ ಪುಡಿಯ ಪ್ಯಾಕೇಟ್ ಗಳನ್ನು ತಮ್ಮ ಮನೆಗೆ ಕದ್ದೊಯ್ಯುವಾಗ ಸಿಕ್ಕಿಬಿದ್ದಿದ್ದಾರೆಂದು ಬಿಬಿ ತಾಂಡಾದ ಯುವಕನೋರ್ವ ವೀಡಿಯೋ ಸಮೇತ ದೂರಿದ್ದಾನೆ.



ಗ್ರಾಮದ ಸಿ ಮತ್ತು ಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅಂಗನವಾಡಿ ಕೇಂದ್ರದಿಂದ ಮನೆಗೆ ತೆರಳುವ ಸಂದರ್ಭದಲ್ಲಿ ತಾವು ತಂದಿದ್ದ ಬ್ಯಾಗವೊಂದರಲ್ಲಿ ಮಕ್ಕಳಿಗಾಗಿ ಸರ್ಕಾರ ನೀಡಿರುವ ಹಾಲಿನ ಪುಡಿಯ ಹಲವು ಪ್ಯಾಕೇಟ್ ಗಳನ್ನು ಅಂಗನವಾಡಿ ಕಾರ್ಯಕರ್ತೆಯರು ತೆಗೆದುಕೊಂಡು ಹೋಗುವಾಗ ಮಾಲು ಸಮೇತ ತಾನು ಅವರನ್ನು ಹಿಡಿದಿರುವುದಾಗಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ.



ಇದು ಅಂಗನವಾಡಿ ಕಾರ್ಯಕರ್ತೆಯರು ಮಾಡುವ ಹಗಲು ದರೋಡೆಯಾಗಿದೆ ಎಂದು ಆ ಯುವಕ ಖಂಡಿಸಿದ್ದಾನೆ. ಈತನೊಂದಿಗೆ ಕೆಲ ಯುವಕರೂ ದ್ವನಿ ಗೂಡಿಸಿದ್ದು ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಶಿಸ್ಥು ಕ್ರಮಕ್ಕೆ ಆಗ್ರಹಿಸಿದ್ದಾರೆ.



ಭ್ರಷ್ಟ ಅಂಗನವಾಡಿ ಕರ್ಯಕರ್ತರ ವಿರುದ್ಧ ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ಥು ಕ್ರಮಕ್ಕೆ ಗ್ರಾಮದ ಯುವಕರಾದ ಪಿ.ಲಕ್ಷ್ಮೀಪತಿ,ಜಗಧೀಶ,ಪರಮೇಶ್ವರ,ಸುದೀಪ್,ಹರೀಶ,ನಾಗರಾಜ ಸೇರಿದಂತೆ ಹಲವರು ಈ ಮೂಲಕ ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*