ಸದಾಶಿವ ಆಯೋಗ ಜಾರಿಗೊಳಿಸುವ ವಿಷಯವಾಗಿ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾ ಗೋಷ್ಠಿ  …!

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ಪಟ್ಟಣದ ಹೊರವಲಯಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಲಾಯಿತು. ಒಂದೇ ವಿಷಯಕ್ಕಾಗಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಶಿಕ್ಷಣವಿಲ್ಲಾ ಅಂದರೆ ಅದು ನಮ್ಮ ಸದಾಶಿವ ಆಯೋಗದ ಹೋರಾಟವಾಗಿದೆ. ಇಂದು ನಾವು ಇಲ್ಲಿ ಸೇರಿರುವ ಉದ್ದೇಶವೇನೆಂದರೆ ಸದಾಶಿವ ಆಯೋಗ ಜಾರಿ ಮಾಡುವ ಕುರಿತು ಮಾದಿಗ, ಚೆಲುವಾದಿ,ಮೋಚಿ, ಸಮಗಾರ ಸಮುದಾಯದವರು ಹಾಗೂ ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಒಟ್ಟಾ ಗಿ ಸೇರಿದ್ದರು. ಹಾಗೆಯೇ ಸ್ಪರ್ಶ ಮತ್ತು ಅಸ್ಪರ್ಶ ಸಮುದಾಯಗಳಿಗೆ ಆಳುವ ಸರಕಾರಗಳು ಗೊಂದಲವನ್ನುಂಟು ಮಾಡುತ್ತಿವೆ. ಸಾಮಾನ್ಯವಾಗಿ ಇಡೀ ಕರ್ನಾಟಕದಲ್ಲಿ ಮಾದಿಗರು ಇರಲಾರದ ಒಂದು ಹಳ್ಳಿ ಯಾವುದಾದರೂ ಇದೆಯಾ…? ಎಂದು ತಾವು ತೋರಿಸಬಹುದು. ಪಕ್ಕದಲ್ಲಿಯೇ ನೀವೇ ಸರ್ವೇ ಮಾಡಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವಂತಹ ಬಹು ಸಂಖ್ಯಾತ ಜನಸಂಖ್ಯೆಗೆ ಅನುಗುಣವಾಗಿ ಆಸ್ತಿ, ಅಂತಸ್ತು, ಅಧಿಕಾರವೂ ಸಮನಾಗಿ ಹಂಚಿಕೆಯಾಗಲಿ ಮತ್ತು ಈ ಆಯೋಗವು ಜಾರಿಯಾಗಲಿ.

ಒಂದು ಕಡೇ ಡಾ. ಬಿ. ಆರ್ ಅಂಬೇಡ್ಕರ್ ರವರು ಹೇಳಿರುವಂತೆ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಆಸ್ತಿ, ಅಂತಸ್ತು, ಅಧಿಕಾರವೂ ಸಮವಾಗಿ ಹಂಚಿಕೆಯಾದಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ಆಗಲು ಸಾಧ್ಯ ಎಂದಿದ್ದರು.”

ಈ ಹಿಂದೆಯೂ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದಂತಹ ಎಸ್.ಎಂ. ಕೃಷ್ಣ, ಬಿ.ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೇಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರುಗಳಿಗೆ ಮನವಿ ಮಾಡಿದರೂ ಬರೀ ಆಸ್ವಾಸನೆ ನೀಡುತ್ತಾ, ಸದಾಶಿವ ಆಯೋಗವನ್ನು ಜಾರಿ ಮಾಡುವೆವು ಎಂದು ಸುಳ್ಳು ಭರವಸೆಯನ್ನು ನೀಡುತ್ತಾ ಸಮುದಾಯಗಳ ದಾರಿ ತಪ್ಪಿಸುವ ಕೆಲವನ್ನು ಮಾಡುತ್ತಾ ಬಂದಿರುತ್ತಾರೆ. ಸಂವಿಧಾನ ಬದ್ಧವಾಗಿಯೇ ಈ ಒಂದು ಚಳುವಳಿಯನ್ನು ಮಾಡುತ್ತಿದ್ದೇವೆ ಎಂದು ಸಿ. ದಾನಪ್ಪ ನಿಲೋಗಲ್ ಸೇರಿದಂತೆ ಸಮುದಾಯಗಳ ಮುಖಂಡರು ತಮ್ಮ ಹೋರಾಟದ ಕಹಿ ಮತ್ತು ನೋವಿನ ಮಾತುಗಳನ್ನೂ ಆಡುತ್ತಾ ಪತ್ರಿಕಾ ಹೇಳಿಕೆಯನ್ನು ನೀಡಿದರು.

ದಿನಾಂಕ:- 18-10-2021 ಸೋಮವಾರದಂದು ಸದಾಶಿವ ಆಯೋಗದ ವರದಿ ಜಾರಿಗೆ ಮಾಡುವ ಕುರಿತು ಪಟ್ಟಣದ ವಿವಿಧ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ನಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸದಾಶಿವ ಆಯೋಗಕ್ಕೆ ಒಳಪಡುವ ಎಲ್ಲಾ ಸಮುದಾಯಗಳು ಒಮ್ಮತದಿಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾದಿಗ, ಸಮಗಾರ,ಚಲುವಾದಿ, ಮೋಚಿ ಸಮುದಾಯಗಳ ಹಿರಿಯ ಮುಖಂಡರು,ಪತ್ರಿಕಾ ಬಳಗದವರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*