ಜಿಲ್ಲಾ ಸುದ್ದಿಗಳು
ಕಾರವಾರ
ಜಿಲ್ಲಾ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್. ಫಕೀರಪ್ಪ ಅವರು, ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ 2017 ರಿಂದ ಈವರೆಗೆ ಪೊಲೀಸ್ ಕಾನಸ್ಟೇಬಲ್ ಹುದ್ದೆಯಿಂದ ಪೊಲೀಸ್ ಹೆಡ್‌ಕಾನಸ್ಟೇಬಲ್ ಹುದ್ದೆಗೆ 169 ಸಾಮಾನ್ಯ ವರ್ಗದ ಸಿಬ್ಬಂದಿಗೆ ಪದೋನ್ನತಿ ನೀಡಿದ್ದು, ಅದರಲ್ಲಿ 25 ಎಸ್.ಸಿ, 6 ಎಸ್.ಟಿ ಜನಾಂಗದ ಸಿಬ್ಬಂದಿಯವರಿಗೆ ಪದೋನ್ನತಿ ನೀಡಬೇಕಾಗಿತ್ತು. ಆದರೆ ಕೇವಲ ಎಸ್.ಸಿ 3 ಎಸ್.ಟಿ 1 ಜನಾಂಗದ ಸಿಬ್ಬಂದಿಯವರಿಗೆ ಪದೋನ್ನತಿ ನೀಡಲಾಗಿದೆ. ಇದರಿಂದ ಒಟ್ಟು 58 ಎಸ್.ಟಿ, ಎಸ್‌ಟಿ ಸಿಬ್ಬಂದಿಯವರಿಗೆ ಅನ್ಯಾಯವಾಗಿದೆ.ಕೂಡಲೇ ಸರಿಪಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್. ಫಕೀರಪ್ಪ ಆಗ್ರಹಿಸಿದರು.
ಸಮಸ್ಯೆ ಬಗೆಹರಿಸುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. ಒಂದೊಮ್ಮೆ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಕುಮಟಾ ತಾಲ್ಲೂಕಿನ ಬರ್ಗಿ ಗ್ರಾಮ ಪಂಚಾಯಿತ್ ಗೆ ಆಯ್ಕೆಯಾಗಿರುವ ಲಕ್ಷ್ಮಿ ಗೊಂಡ ಇವರು ಪಂಚಾಯಿತಿಯಲ್ಲಿ ನಡೆಯುವ ಸಭೆಗಳಿಗೆ ಹಾಜರಾಗುತ್ತಿದ್ದಾರೆ. ಈಗಾಗಲೇ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಇವರ ಜಾತಿ ಪ್ರಮಾಣ ಪತ್ರವನ್ನು ಸುಳ್ಳು ಎಂದು ರದ್ದುಗೊಳಿಸಿದ ಕಾರಣ ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ನ್ಯಾಯಾಲಯ ಫೆಬ್ರುವರಿ 12 ರಂದು ನಡೆಯುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಯ್ಕೆ ವೇಳೆ ಸಭೆಗೆ ಹಾಜರಾಗಲು ಅವಕಾಶ ನೀಡಿದೆ. ಆದರೆ ಇದೀಗ ಎಲ್ಲ ಸಭೆಗೆ ಹಾಜರಾಗುತ್ತಿರುವ ಲಕ್ಷಿö್ಮ ಗೊಂಡ ಅವರ ಸದಸ್ಯತ್ವವನ್ನು, ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯನ್ನು ತಕ್ಷಣ ರದ್ಧುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಬಸವರಾಜ್ ಸಂಗಮೇಶ್ವರ, ಮಂಜು ಆಗೇರ್, ಬೊಮ್ಮಯ್ಯ ಹಳ್ಳೇರ್, ಕಲ್ಲಪ್ಪಾ ಹೋಳಿ, ಗೋಪಾಲ್ ನಡಕಿನಮನಿ ಮುಂತಾದವರು ಉಪಸ್ತಿತರಿದ್ದರು.
Be the first to comment