ಲಿಂಗಸುಗೂರ ವರದಿ ಜೂನ್ 03::ಜನಸಾಮಾನ್ಯರ ಬದುಕಿನ ಅಸ್ತಿತ್ವವನ್ನೇ ಅಲುಗಾಡಿಸಿಬಿಟ್ಟಿದೆ. ಕೋವಿಡ 19 ಎಂಬ ಮಹಾಮಾರಿ ರೋಗವು ಲಾಕ್‌ಡೌನ್ ನಿಂದಾಗಿ ರೈತರು, ದಲಿತರು, ಅಲೆಮಾರಿ, ಆದಿವಾಸಿ, ಬುಡಕಟ್ಟು ಸಮುದಾಯಗಳು, ಕೂಲಿ ಕಾರ್ಮಿಕರು. ಕಟ್ಟಡ ಕೆಲಸಗಾರರು, ಬೀದಿ ಬದಿಯ ವ್ಯಾಪಾರಸ್ಥರು ಬದುಕು ಬೀದಿಪಾಲಾಗಿದೆ. ವೈದ್ಯಕೀಯ ಸೌಲಭ್ಯಗಳು, ದುಸ್ತರವೆನಿಸಿ ಜನರು ಕಂಗಾಲಾಗಿದ್ದಾರೆ. ಕರೋನ್ ರೋಗದಿಂದಾಗಿ ಆಗುತ್ತಿರುವ ಸಾವುಗಳು ಒಂದು ಕಡೆಯಾದರೆ, ಮೂಲಭೂತ ವೈದ್ಯಕೀಯ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗದೆ ಭಯದಿಂದಾಗಿ ಸಂಭವಿಸುತ್ತಿರುವ
-ಸಾವುನೋವುಗಳು ಹೆಚ್ಚಾಗುತ್ತಿವೆ. ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕು, ಗೋಣಿಬೀಡು ಠಾಣಾ ವ್ಯಾಪ್ತಿಯ ಕಿಲುಗುಂದ ಗ್ರಾಮದ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ವರದಿಯಾಗಿರುವುದು ಆಘಾತಕಾರಿ ಸಂಗತಿ, ಅದರಲ್ಲೂ ಜಾತಿ ದೌರ್ಜನ್ಯ, ಕಾರ್ಯಕ್ಕೆ ಒಳಗಾದ ದುರ್ಬಲ ವರ್ಗದವರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಅಧಿಕಾರಿಯ ಇಂತಹ ಅಮಾನವೀಯ ಕೃತ್ಯವೆಸಗಿರುವುದು ಅಕ್ಷಮ್ಯ ಅಪರಾಧವಾಗಿದೆ. 44 ದುರ್ಘಟನೆಯು ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಇದಕ್ಕೆ ಕಾರಣರಾದ ಗೋಣಿಬೀಡು ಪೊಲೀಸ್ ಠಾಣೆಯ ಪಿ.ಎಸ್.ಐ. ಅರ್ಜುನನನ್ನು ಸೇವೆಯಿಂದ ವಜಾ ಮಾಡುವ ಮೂಲಕ ಸರ್ಕಾರ ತನ್ನ ನೈತಿಕ ಘನತೆಯನ್ನು ಉಳಿಸಿಕೊಳ್ಳಬೇಕಾಗಿದೆ.
ಕರೋನಾ ರೋಗ ಸೃಷ್ಟಿಸಿರುವ ಸಾವು ನೋವು ಸಂಕಷ್ಟದ ಈ ಸಂದರ್ಭದಲ್ಲೂ ದಲಿತರ ಮೇಲಿನ ದೌರ್ಜನ್ಯ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿರುವುದು ದುರದೃಷ್ಟಕರ, ಕಳೆದ ಏಪ್ರಿಲ್‌ನಲ್ಲಿ ಗದಗದ ಅಪಾರ ದಲಿತ ಬಾಲಕಿಯೋರ್ವಳ ಮೇಲೆ ಯುವಕನೊಬ್ಬ ಬೆಳಗಾವಿಯ ರಾಮದುರ್ಗದಲ್ಲಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಸುದ್ದಿ ಪ್ರಕಟವಾಗಿತ್ತು. ಮೇ-೧೨ರಲ್ಲಿ ವಿಜಯನರದ ಬಸವನಬಾಗೇವಾಡಿ, ಕುದುರೆ ಸಾಲವಾಡಿ ಗ್ರಾಮದ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ ಬಾವಿಯೊಂದರಲ್ಲಿ ಹಾಕಿರುವ ಪ್ರಕರಣ ಜರುಗಿದೆ. ಹಾಗೆಯೇ, ಯಾದಗಿರಿಯ, ಸುರಪುರದ ಶಾಖಾಮದ ಎಚ್.ಎಸ್. ಗ್ರಾಮದ ದಲಿತ ಬಸಪ್ಪ ಮತ್ತು ಆತನ ಕುಟುಂಬದ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಲಾಗಿದೆ. ಇವಿಷ್ಟು ಬೆಳಕಿಗೆ ಬಂದ ಘಟನೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ದಲಿತರಿಗೆ ಭದ್ರತೆ ಇಲ್ಲದಂತಾಗಿರುವುದು
ಕಣ್ಣಾವಲಿನಂತೆ ಕೆಲಸ ಮಾಡಬೇಕಾದ ಸಮಾಜ ಕಲ್ಯಾಣ ಸಚಿವರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಈ
ಸಂಕಷ್ಟದ ಸಂದರ್ಭದಲ್ಲಿ ಏನು ಮಾಡುತ್ತಿದ್ದಾರೋ ತಿಳಿಯದಾಗಿದೆ. ಸಚಿವರು ಈಗಲಾದರೂ ಎಚ್ಚೆತ್ತುಕೊಂಡು ದಲಿತ
ಸಮುದಾಯದ ಬಡವರು, ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆಗಾಗಿ ಪರಿಣಾಮಕಾರಿ ಯೋಜನೆಗಳನ್ನು
ರೂಪಿಸಿ ಅನುಷ್ಠಾನಕ್ಕೆ ತರಲು ಕಾರ್ಯ ಪ್ರವೃತ್ತರಾಗಬೇಕಿದೆ.
ಕೋವಿಡ 2 ನೇ ಅಲೆಯನ್ನು ಎದುರಿಸುವುಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಚಾಮರಾಜನಗರದಲ್ಲಿ ಒಂದೇ ದಿನ ೭ ಜನರ ಮಾರಣಹೋಮವೂ ಸೇರಿದಂತೆ ರಾಜ್ಯದಾದ್ಯಂತ ಸಹಸ್ರಾರು ಜನರ ಸಾವಿಗೆ ಈ ಬಿಜೆಪಿ ಸರ್ಕಾರ ನೇರ ಕಾರಣವಾಗಿದೆ. ಇದಲ್ಲದೆ ರಾಜ್ಯ ಸರ್ಕಾರವು ಕನಿಷ್ಟ ನೆರೆ ರಾಜ್ಯಗಳ ಮುಖ್ಯಮಂತ್ರಿಗಳು ಅಲ್ಲಿನ ಜನಸಾಮಾನ್ಯರಿಗೆ ನೀಡಿರುವಷ್ಟು ಆರ್ಥಿಕ ನೆರವು, ಸೌಲಭ್ಯವನ್ನು ಸಂಕಷ್ಟದಲ್ಲಿ ಸಿಲುಕಿರುವ ಇಲ್ಲಿನ ಜನರಿಗೆ ಕಲ್ಪಿಸಿಕೊಡುವಲ್ಲಿ ಸೋತು ಹೋಗಿದೆ.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮುಂದೆ ಬರಲಿರುವ ಕೋವಿಡ 3ನೇ ಅಲೆಯನ್ನು ಎದುರಿಸಲು ಸಂಪೂಣ ಸಿದ್ಧತೆ ಮಾಡಿಕೊಳ್ಳಬೇಕು ಬಡಜನರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ರಾಜ್ಯ ಸರ್ಕಾರ ಬಡ ಜನರಿಗೆ ಅನುಕೂಲ ವಾಗಬಹುದು ಕರ್ನಾಟಕ ರಾಜ್ಯ ದಲಿತ ಸಂಘ ಸಮಿತಿ ಹಕ್ಕೊತ್ತಾಯ ಈಡೇರಿಸಿ ಜಾರಿಗೊಳಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
ದಲಿತ ಯುವಕ ಪುನೀತ್‌ಗೆ ಮೂತ್ರ ನೆಕ್ಕಿಸಿದ ಪ್ರಕರಣ ಅಮಾನವೀಯ ಈ ಪ್ರಕರಣ ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಅಚಾತುರ್ಯಕ್ಕೆ ಕಾರಣಕರ್ತರನಾದ ಗೋಣಿಬೀಡಿನ ಪಿ.ಎಸ್.ಐ. ಅರ್ಜುನ್ ಅವರನ್ನು ಸೇವೆಯಿಂದ ವಜಾ ಮಾಡಬೇಕು.
ವಿಜಯಪುರದ ಬಸವನ ಬಾಗೇವಾಡಿಯ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು.
ಚಾಮರಾಜನಗರದಲ್ಲಿ ೩೭ ಜನರ ಸಾವಿಗೆ ಆಮ್ಲಜನಕದ ಕೊರತೆಯೇ ಕಾರಣವೆಂದು ಹೈಕೋರ್ಟ್ ನೇಮಿಸಿದ್ದ ತನಿಖಾ ಸಮಿತಿಯು ವರದಿ ನೀಡಿರುವುದರಿಂದ ಆರೋಗ್ಯ ಸಚಿವರಾದ ಸುಧಾಕರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜ್ಯದಾದ್ಯಂತ ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪಿರುವ ಬಡಕುಟುಂಬಗಳಿಗೆ ತಲಾ ೧೦ ಲಕ್ಷ ಪರಿಹಾರ ಧನ ನೀಡಬೇಕು. ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ/ವರ್ಗದ ಬಡವರಿಗೆ ಎಸ್.ಸಿ.ಪಿ./ಟಿ.ಎಸ್.ಪಿ. ಅನುದಾನದಿಂದ ಹಾಗೂ ಎಲ್ಲಾ ಸಮುದಾಯದ ದುಡಿಯುವ ಬಡಜನರ ಪ್ರತಿ ಕುಟುಂಬಗಳಿಗೂ ಸರ್ಕಾರ ಮಾಸಿಕ ಕನಿಷ್ಟ ೧೫ ಸಾವಿರ ರೂ. ಆರ್ಥಿಕ ನೆರವು ನೀಡಬೇಕು (ಏಪ್ರಿಲ್-೨೦೨೧ರಿಂದ ಪೂರ್ವಾನ್ವಯವಾಗುವಂತೆ).
ಎಸ್.ಸಿ.ಪಿ./ಟಿ.ಎಸ್.ಪಿ. ಹಣದ ದುರ್ಬಳಕೆ, ಅವ್ಯವಹಾರ ಹಾಗೂ ಸದ್ಬಳಕೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು.
. ಕೊರೋನಾ ಮತ್ತು ಪಂಗಸ್‌ಗೆ ಒಳಗಾಗಿರುವ ಎಲ್ಲರಿಗೂ ಉಚಿತವಾಗಿ ಲಸಿಕೆ, ಔಷದೋಪಚಾರ, ಆಸ್ಪತ್ರೆಗಳಲ್ಲಿ, ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಕಲ್ಪಿಸಬೇಕು.
ಕೊರೋನಾ ವಾರಿಯರ್ಸ್‌ಗಳಾಗಿ ಹಗಲಿರುಳು ಅವಿಶ್ರಾಂತವಾಗಿ ದುಡಿಯುತ್ತಿರುವ ವೈದ್ಯರು, ನರ್ಸ್‌ಗಳು, ಆಶಾಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ‘ಡಿ’ ದರ್ಜೆ ನೌಕರರ ಸಂಬಳವನ್ನು ಹೆಚ್ಚಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಕೃಷಿ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ ಪಡೆದುಕೊಳ್ಳಬೇಕು.
: ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಡತನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಬೇಕು. ಬಾಕಿ ಇರುವ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್
ಅನ್ನು ತಕ್ಷಣ ಮಂಜೂರು ಮಾಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು.
ಪಡಿತರ ಚೀಟಿಯ ಮೂಲಕ ಗ್ರಾಮೀಣ ಪ್ರದೇಶದ ಬಡವರಿಗೆ ಕೊಡುವ ಆಹಾರ ಪದಾರ್ಥ ಹಾಗೂ ಕಲ್ಪಿಸಬೇಕು ಕೊರೋನಾದ ಮೂರನೆಯ ಅಲೆಯನ್ನು ಎದುರಿಸುವ ಸಲುವಾಗಿ,
ನಗರ, ಪಟ್ಟಣಗಳಲ್ಲಿರುವ ಲಾಡ್‌ಗಳು, ಭವನಗಳು ಮತ್ತು ಕಲ್ಯಾಣ ಮಂಟಪ
ಕಟ್ಟಡಗಳನ್ನು ವಶಪಡಿಸಿಕೊಂಡು ಅವುಗಳನ್ನು ಸುಸಜ್ಜಿತವಾದ ಕೊರೋನಾ ಚಿಕಿತ್ಸಾ
ಸೆಂಟರ್‌ಗಳನ್ನಾಗಿ ಪರಿವರ್ತಿಸಬೇಕು.
ರಾಜ್ಯದಲ್ಲಿ ಈಗಿರುವ ತಾಲೂಕ ಸಾರ್ವಜನಿಕ ಆಸ್ಪತ್ರೆಗಳನ್ನು ಕೂಡಲೆ 150 ರಿಂದ 200 ಬೆಡ್ಡಿನ ಆಸ್ಪತ್ರೆಗಳನ್ನಾಗಿ ಮೇಲ್ದರ್ಜಗ ಏರಿಸಬೇಕು
ಪ್ರಭುಲಿಂಗ ಮೇಗಳಮನಿ
ಜಿಲ್ಲಾ ಸಂಚಾಲಕರು
ಯಲ್ಲಪ್ಪ ಹಾಲಭಾವಿ
ತಾಲೂಕ ಸಂ ಸಂಚಾಲಕರು
ನಾಗರಾಜ ಹಾಲಭಾವಿ
ತಾಲೂಕ ಸಂಚಾಲಕರು ಅಕ್ರಮ ಪಾಷಾ ಲಿಂಗಸುಗೂರ ಸಹಾಯಕ ಆಯುಕ್ತರ ಮೂಲಕ ಕರ್ನಾಟಕ ರಾಜ್ಯದ ಮುಖ್ಯೆಮಂತ್ರಿಗಳಿಗೆ ಮನವಿ ಸಲ್ಲಿಸಿದರು
Be the first to comment