ರಾಜ್ಯ ಸುದ್ದಿಗಳು
ಮಸ್ಕಿ
ಪಟ್ಟಣದ ಸಾರಿಗೆ ಘಟಕದ ಚಾಲಕ ಶರೀಫ್, ನಿರ್ವಾಹಕ ನೀಲಪ್ಪ ,ಪ್ರಯಾಣಿಕನೊಬ್ಬ ಬಸ್ ನಲ್ಲಿ ಬಿಟ್ಟುಹೋದ ಲಗೇಜ್ ಮತ್ತು 6500 ನಗದು ಹಣ ಪ್ರಯಾಣಿಕನಿಗೆ ಮರಳಿಸಿ ಸಾರಿಗೆ ನೌಕರರು ಪ್ರಾಮಾಣಿಕತೆ ತೋರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಸ್ಕಿ ಸಾರಿಗೆ ಘಟಕಕ್ಕೆ ಸೇರಿದ ಬಸ್ ಕಲಬುರಗಿ ಯಿಂದ ಬಳ್ಳಾರಿಗೆ ಹೊರಟಿತ್ತು. ಪ್ರಯಾಣಿಕನೊಬ್ಬ ಕಲಬುರ್ಗಿಯಿಂದ ಭೀಮರಾಯನಗುಡಿ ಗೆ ಟಿಕೆಟ್ ಪಡೆದಿದ್ದ, ಬಸ್ಸಿನಿಂದ ಇಳಿಯುವಾಗ ಲಗೇಜ್ ಮರೆತು ಇಳಿದನು. ಬಸ್ ಕಲಬುರಗಿ ಯಿಂದ ಬಳ್ಳಾರಿ ತಲುಪಿದ ನಂತರ ಚಾಲಕ,ನಿರ್ವಾಹಕ ಬಸ್ ನಲ್ಲಿ ಲಗೇಜ್ ಕಂಡು ಪರಿಶೀಲಿಸಿದ್ದಾರೆ. ಲಗೇಜ್ ನಲ್ಲಿ 6500 ನಗದು ಹಣ ಕಂಡುಬಂದಿದೆ. ಬಳ್ಳಾರಿಯಿಂದ ಬಸ್ ಮಸ್ಕಿ ಡಿಪೋ ಗೆ ಬಂದನಂತರ ಲಗೇಜ್ ಕಳೆದುಕೊಂಡಿದ್ದ ವ್ಯಕ್ತಿ ಬಸು ಪವರ್ ಭೀಮರಾಯ ಗುಡಿಯಿಂದ ಮಸ್ಕಿ ಡಿಪೋಗೆ ಬಂದು ಮ್ಯಾನೇಜರ್ ಎಸ್. ಬಿ ಪಾಟೀಲ್ ಜೊತೆ ಮಾತನಾಡಿ ಬಸ್ ಟಿಕೆಟ್ ತೋರಿಸಿದ್ದಾನೆ.
ಲಗೇಜ್ ಬಿಟ್ಟು ಇಳಿದ ಪ್ರಯಾಣಿಕನ ಮಾಹಿತಿ ಪಡೆದ ನಂತರ 6500 ನಗದು ಹಣ ಮತ್ತು ಲಗೇಜನ್ನು ಪ್ರಯಾಣಿಕನಿಗೆ ಹಿಂದಿರುಗಿಸಲಾಯಿತು. ಚಾಲಕ ನಿರ್ವಾಹಕನ ಪ್ರಾಮಾಣಿಕತೆಗೆ ಹಣ ಮರಳಿ ಪಡೆದ ಪ್ರಯಾಣಿಕ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.
Be the first to comment