ಜಿಲ್ಲಾ ಸುದ್ದಿಗಳು
ಕಾರವಾರ
ಉತ್ತರ ಕನ್ನಡದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಮೊದಲ ಬಾರಿಗೆ ವಿಧಾನ ಪರಿಷತ್‌ಗೆ ಪ್ರವೇಶ ಪಡೆದಿದ್ದಾರೆ. ಅಭ್ಯರ್ಥಿ ಗಣಪತಿ ಉಳೇಕರ್ ಸುಮಾರು 183 ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಟ್ಟು 2915 ಮತಗಳಲ್ಲಿ 2907 ಮತಗಳ ಚಲಾವಣೆಯಾಗಿತ್ತು. ಬಿಜೆಪಿಯ ಅಭ್ಯರ್ಥಿ ಗಣಪತಿ ಉಳೇಕರ್ 1514 ಮತ ಪಡೆದಿದ್ದು, ಕಾಂಗ್ರೆಸ್‌ನ ಭೀಮಣ್ಣ ನಾಯ್ಕ 1331 ಮತಗಳು ಪಡೆದು ತೀವ್ರ ಪೈಪೋಟಿ ನೆಫಿ 183 ಮತಗಳ ಅಂತರದಿಂದ ರಾಜಕೀಯದಲ್ಲಿ ನಾಲ್ಕನೇ ಸೋಲನನ್ನುಭವಿಸಿದ್ದಾರೆ.
14 ಟೇಬಲ್‌ಗಳಲ್ಲಿ 17 ಸುತ್ತಿಗೆ ಮತಗಳ ಎಣಿಕೆ ಕಾರ್ಯ ನಡೆಸಲಾಗಿದೆ. ಪಕ್ಷೇತರ ಅಭ್ಯರ್ಥಿಗಳಾದ ಸೋಮಶೇಖರ 1, ಈಶ್ವರ ಗೌಡ 4,ಬಿ.ಜಿ.ಪಿ ಬಂಡಾಯ ಅಭ್ಯರ್ಥಿ ವಕೀಲ ದತ್ತಾತ್ರೇಯ ನಾಯ್ಕ್ ಭಟ್ಕಳ 3 ಮತಗಳನ್ನು ಪಡೆದಿದ್ದಾರೆ. 54 ಮತಗಳು ತಿರಸ್ಕೃತವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಈ ಬಾರಿ ಮೀನುಗಾರ ಮುಖಂಡ ಗಣಪತಿ ಉಳೇಕರರನ್ನು ನಿಲ್ಲಿಸಿತ್ತು. 2016ರಲ್ಲಿ ಗಣಪತಿ ಅವರನ್ನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಾಡಿತ್ತು. ಆಗ ಅವರು ಅತ್ಯಲ್ಪ (228) ಮತಗಳ ಅಂತರದಿಂದ ಚುನಾವಣೆಯಲ್ಲಿ ಸೋತಿದ್ದರು. ಆದರೆ ಈ ಬಾರಿ ತೀವ್ರ ಹಣಾಹಣಿಯ ನಡುವೆ ಭೀಮ್ಮಣ್ಣಗೆ ಸೋಲುಣಿಸಿ, ಇವರು ಜಯಗಳಿಸಿದ್ದಾರೆ.
Be the first to comment