ಜಿಲ್ಲಾ ಸುದ್ದಿಗಳು
ಭಟ್ಕಳ
ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯ ಪಿಂಚಣಿ ಸಿಗದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವಿಷಯವಾಗಿಮಾನ್ಯ ತಹಸೀಲ್ದಾರರು ಭಟ್ಕಳ ಇವರ ಮುಖಾಂತರ ಎ.ಐ.ಟಿ.ಯು.ಸಿ ಮತ್ತು ಸಿ.ಐ.ಟಿ.ಯು ಸಂಘಟನೆಯಿಂದ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಸಿಗುವ ಪಿಂಚಣಿಯು ವರ್ಷಕ್ಕೆ ಕೇವಲ ಮೂರು ನಾಲ್ಕು ತಿಂಗಳ ಪಿಂಚಣಿ ನೀಡಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಆನ್ಲೈನ್ ಮೂಲಕ ಪಿಂಚಣಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಸಕಾಲದ ಅವಧಿಯೊಳಗೆ ಕಾರ್ಮಿಕ ನಿರೀಕ್ಷಕರು ಪಿಂಚಣಿ ಅರ್ಜಿಯಲ್ಲಿ ಪರಿಶೀಲನೆ ಮಾಡಿ ಮುಂದಿನ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಅರ್ಜಿ ರವಾನೆ ಮಾಡಿದರೂ 7-8 ತಿಂಗಳ ಗಟ್ಟಲೆ ಹಿರಿಯ ಅಧಿಕಾರಿಗಳು ಅರ್ಜಿ ಹಾಗೆಯೇ ಇರಿಸಿ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಮೂರು ನಾಲ್ಕು ತಿಂಗಳ ಪಿಂಚಣಿ ಮಂಜೂರಿ ಮಾಡಿರುತ್ತಾರೆ. ವರ್ಷಕ್ಕೆ 24 ಸಾವಿರ ಪಿಂಚಣಿ ಬರುವ ಅರ್ಜಿದಾರರಿಗೆ ಕೇವಲ 6-8 ಸಾವಿರ ರೂಪಾಯಿ ಮಾತ್ರ ಪಿಂಚಣಿ ನೀಡಲಾಗಿದೆ. ಈ ಅವಸ್ಥೆಯಲ್ಲಿ ಆನ್ಲೈನ್ ಅರ್ಜಿದಾರರಿಗೆ ತುಂಬಾ ಅನ್ಯಾಯವಾಗಿದೆ. ಅದರಂತೆ 2015- 16 ರಿಂದ ಮ್ಯಾನುಯೆಲ್ ಪಿಂಚಣಿ ಅರ್ಜಿ ಮೂಲಕ ಸಲ್ಲಿಕೆಯಾಗಿರುವ ಅರ್ಜಿದಾರರಿಗೆ ಇದುವರೆಗೂ ಸಂಪೂರ್ಣ ಪಿಂಚಣಿ ಧನಸಹಾಯ ಜಮಾ ಆಗಿದೆ ಅನ್ಯಾಯಕ್ಕೊಳಗಾಗಿದ್ದಾರೆ.2015 -16 ರಿಂದ ಸಲ್ಲಿಕೆಯಾಗಿರುವ ಪಿಂಚಣಿ ಅರ್ಜಿಗಳು ನಿರೀಕ್ಷಕರ ಕಚೇರಿಯಲ್ಲಿ ಹಾಗೆಯೇ ಇರಿಸಿ 2021 ಅಗಸ್ಟ್ ತಿಂಗಳ ಕಾರ್ಮಿಕ ಅದಾಲತ್ ಕಾರ್ಯಕ್ರಮದ ಅಡಿಯಲ್ಲಿ ಮರು ಜೀವಿತ ಪ್ರಮಾಣ ಪತ್ರ ಫಲಾನುಭವಿ ಯಿಂದ ಪಡೆದು ಮಂಜೂರಾತಿ ಅಧಿಕಾರಿಗಳಿಗೆ ರವಾನಿಸಲಾಗಿದೆ. ಅರ್ಜಿದಾರ 2016 ರಿಂದ ಪ್ರತಿ ವರ್ಷಕ್ಕೊಮ್ಮೆ ಜೀವಿತ ಪ್ರಮಾಣ ಪತ್ರ ನಿರೀಕ್ಷಕರ ಕಛೇರಿಗೆ ಸಲ್ಲಿಸಿದ್ದರು ನಿರೀಕ್ಷಕರ ಕಚೇರಿಯವರು 2020 ರ ವರೆಗೂ ಅರ್ಜಿ ರವಾನೆ ಮಾಡಿರುವುದಿಲ್ಲ. ಆದ್ದರಿಂದ ಅರ್ಜಿದಾರರಿಗೆ ಪಿಂಚಣಿ ಧನಸಹಾಯ ಮಂಜೂರಾಗಿಲ್ಲ. ಈ ವಿಷಯವಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಲವಾರು ಬಾರಿ ಕಲ್ಯಾಣ ಮಂಡಳಿಗೆ. ಕಾರ್ಮಿಕ ಇಲಾಖೆಗೆ. ರಾಜ್ಯಸರ್ಕಾರಕ್ಕೆ ಹೋರಾಟದ ಮೂಲಕ ಮನವಿ ಸಲ್ಲಿಸುತ್ತಾ ಬಂದಿರುತ್ತಾರೆ. ಆದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಕಾರ್ಮಿಕರು ಸಾವಿರಾರು ಬಾರಿ ನಿರೀಕ್ಷಕರ ಕಛೇರಿಗೆ ಪಿಂಚಣಿ ಪಡೆಯುವ ಗೋಸ್ಕರ ಅಲೆದಾಡಿದ್ದಾರೆ. ಆದರೂ ಕಾರ್ಮಿಕರಿಗೆ ನ್ಯಾಯ ಸಿಗಲಿಲ್ಲ. ಈ ಕೂಡಲೇ ಪಿಂಚಣಿದಾರರಿಗೆ ತಾನು ಅರ್ಜಿ ಸಲ್ಲಿಸಿದ ದಿನಾಂಕದಿಂದ ಇಲ್ಲಿಯವರೆಗೆ ತನಗೆ ಸಲ್ಲಬೇಕಾದ ಪಿಂಚಣಿ ಒಟ್ಟು ಮೊತ್ತ(ಇಡೀ ಗಂಟಾಗಿ) ಪಲಾನುಭವಿ ಖಾತೆಗೆ ಜಮಾ ಆಗಬೇಕೆಂದು ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಗೆ. ಕಾರ್ಮಿಕ ಇಲಾಖೆಗೆ. ಮತ್ತು ರಾಜ್ಯ ಸರಕಾರಕ್ಕೆ ಎ.ಐ.ಟಿ.ಯು.ಸಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಎನ್. ರೇವಣಕರ್.ಜಿಲ್ಲಾ ಸಂಚಾಲಕರಾದ ಸುನಿಲ್.ಎ.ರಾಯ್ಕರ್. ಮತ್ತುಸಿ.ಐ.ಟಿ.ಯು. ತಾಲೂಕು ಅಧ್ಯಕ್ಷರಾದ ಪುಂಡಲೀಕ ನಾಯ್ಕ್ ಮನವಿ ಸಲ್ಲಿಸಿರುತ್ತಾರೆ.
Be the first to comment