ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಛಲವಾದಿ ಮಹಾಸಭಾ. ದೊಡ್ಡ ಬಳ್ಳಾಪುರ ತಾಲ್ಲೂಕು. ದೊಡ್ಡ ಬೆಳವಂಗಲ ಹೋಬಳಿಗೆ ಶ್ರೀ ಎನ್,ಉದಯಶಂಕರ್ ಪುನರ್ ಆಯ್ಕೆ ಮತ್ತು ಛಲವಾದಿ ದಿನದರ್ಶೀಕೆ ಬಿಡುಗಡೆ. “ಹಿಂಧೂ ಧರ್ಮದ ಆಚರಣೆಗಳನ್ನು ಒರೆ ಹಚ್ಚಿ, ವೈಜ್ಞಾನಿಕವಾಗಿ ಚಿಂತಿಸಿ ಆಚರಣೆಗೆ ತಂದಾಗ ಮಾತ್ರ, ಛಲವಾದಿ ಸಮುದಾಯದ ಅಭಿವೃದ್ಧಿ ಸಾದ್ಯ”ಎಂದು ದೊಡ್ಡ ಬಳ್ಳಾಪುರ ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಶ್ರೀ ಸಿ,ಗುರುರಾಜಪ್ಪನವರು ಹೇಳಿದರು.
ದೊಡ್ಡ ಬೆಳವಂಗಲದ ಸರ್ಕಾರಿ ಕಾಲೇಜು ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೊಡ್ಡ ಬೆಳವಂಗಲ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಮತ್ತು ಛಲವಾದಿ ದಿನದರ್ಶಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ಡ ಬಳ್ಳಾಪುರ ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಶ್ರೀ ಸಿ,ಗುರುರಾಜಪ್ಪನವರು ವಹಿಸಿದ್ದರು. ಸಮುದಾಯದ ಹಿರಿಯ ರು,ನಿವೃತ್ತ ಉಪನ್ಯಾಸಕರಾದ ಪ್ರೊಪೆಸರ್ ಶ್ರೀ ಚಂದ್ರಪ್ಪರವರು ಛಲವಾದಿ ದಿನದರ್ಶೀಕೆ ಬಿಡುಗಡೆ ಮಾಡಿ”ಸರ್ಕಾರದ ಸವಲತ್ತುಗಳನ್ನು ಪಡೆಯುವುದರಲ್ಲಿ ನಮ್ಮ ಸಮುದಾಯ ವಿಫಲವಾಗಿದ್ದು, ಸವಲತ್ತುಗಳನ್ನು ಪಡೆಯಲು ಸಂಘಟಿತ ಹೋರಾಟ ನಡೆಸಬೇಕಾಗಿದೆ”ಎಂದು ಸಲಹೆ ನೀಡಿದರು. ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ .ಗುತ್ತಿಗೆದಾರರ ಸಂಘದ ಮಾಜಿ ಕಾರ್ಯದರ್ಶಿಗಳು,ಹಿರಿಯರಾದ ಶ್ರೀ ಕುಮಾರಸ್ವಾಮಿ ರವರು”ಹೆಣ್ಣೊಂದು ಕಲಿತರೆ,ಇಡೀ ಸಮುದಾಯ ಶೈಕ್ಷಣಿಕವಾಗಿ,ಆರ್ಥಿಕವಾಗಿ ಮತ್ತು ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಲು ಸಾದ್ಯ”ಎಂದು ಹೇಳಿದರು. ದೊಡ್ಡ ಬೆಳವಂಗಲ ಹೋಬಳಿ ಮಟ್ಟಕ್ಕೆ ಅಧ್ಯಕ್ಷರಾಗಿ ಶ್ರೀ ಎನ್,ಉದಯಶಂಕರ್ ರವರನ್ನು ಅವಿರೋಧವಾಗಿ ಎರಡನೇ ಬಾರಿಗೆ ಪುನರ್ ಆಯ್ಕೆ ಮಾಡಲಾಯಿತು. ಛಲವಾದಿ ಮಹಾಸಭಾ ತಾಲ್ಲೂಕು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮೇನಕಮ್ಮ,ಉಪಾಧ್ಯಕ್ಷರಾದ ಶ್ರೀ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶ್ರೀ ರಾಜಣ್ಣ, ಪ.ಜಾ/ಪ.ಪಂ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಆಂಜಿನಮೂರ್ತಿ,ಚಾಲುಕ್ಯ ಛಲವಾದಿ ಸೇವಾಭಿವೃದ್ದಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಮೂರ್ತಿ.ಎಲ್ಲಾ ಹೋಬಳಿ ಘಟಕದ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Be the first to comment