ಲಿಂಗಸಗೂರು:ಫೆ೧೪: ಗಟಾರದ ನೀರು ಬಿಡುವ ವಿಷಯಕ್ಕೆ ಪ್ರಾರಂಭವಾದ ಜಗಳದಲ್ಲಿ ಹಾಡುಹಗಲೆ ಬಿಜೆಪಿಯ ಮುಖಂಡ ಹಾಗೂ ಅವರ ಗುಂಪಿನಿಂದ ಸೈನಿಕನ ತಾಯಿಯ ಕೊಲೆಯಾಗಿದ್ದು ಶವವನ್ನು ಮುಖಂಡನ ಮನೆಯ ಮುಂದೆ ಇಟ್ಟು ನ್ಯಾಯ ದೊರೆಯಬೇಕೆಂದು ಒತ್ತಾಯಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ
ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಶರಣಪ್ಪಗೌಡ ಎನ್ನುವ ಬಿಜೆಪಿ ಮುಖಂಡನು ತನ್ನ ಮನೆಯಮುಂದಿನ ಗಟಾರದ ನೀರಿನ ವಿಷಯಕ್ಕೆ ಜಗಳ ಪ್ರಾರಂಭವಾಗಿ ಜಗಳದಲ್ಲಿ ಸೈನಿಕ ಅಮರೇಶ ತಂದೆ ನಿಂಗಪ್ಪನಿಗೆ ಮತ್ತು ಆತನ ಕುಟುಂಬಸ್ಥರಿಗೂ ಬಿಜೆಪಿ ಮುಖಂಡ ಹಾಗೂ ಆತನ ಅಕ್ರಮ ಗುಂಪು ಸೇರಿಕೊಂಡು ಹೊಡೆದಿದ್ದು ಜಗಳದಲ್ಲಿ ಅಡ್ಡಬಂದ ಸೈನಿಕನ ತಾಯಿ ಈರಮ್ಮ ಗಂ ನಿಂಗಪ್ಪ ೮೦ ವರ್ಷ ಎನ್ನುವಾಕೆಗೆ ಬಡಿದು ನೂಕಾಟ ತಳ್ಳಾಟ ತುಳಿಯುವುದು ಮಾಡಿದಾಗ ಮುದುಕಿಯ ಕೊಲೆಯಾಗಿದೆ ಎಂದು ಮುದುಕಿಯ ಮೊಮ್ಮಗ ಅಮರೇಶ ಹೇಳುತ್ತಿದ್ದಾನೆ
ಅಲ್ಲದೆ ಹೊಡೆಯುವುದು ಬಡಿಯುವುದು ಮಾಡಿದಾಗ ಸೈನಿಕನ ಕುಟುಂಬವು ಕೈ ಮುಗಿದರು ಗೌಡನ ಅಕ್ರಮ ಗುಂಪು ಮನೆಗೆ ಸುಗ್ಗಿ ಸೈನಿಕನ ತಾಯಿಯನ್ನು ಕೊಲೆಮಾಡಲಾಗಿದೆ ಎನ್ನಲಾಗುತ್ತಿದ್ದು
ಕೂಡಲೇ ಕುಟುಂಬಸ್ಥರು ಕೊಲೆಯಾದ ಮುದುಕಿಯ ಶವವನ್ನು ಶರಣಪ್ಪಗೌಡನ ಮನೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿ ನಮಗೆ ನ್ಯಾಯದೊರಕಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ
ಸ್ಥಳಕ್ಕೆ ಪೊಲಿಸ್ ಭೇಟಿನೀಡಿ ಪರಸ್ಥಿತಿಯನ್ನು ನಿಯಂತ್ರಿಸುವಲ್ಲಿ ಶ್ರಮಿಸುತ್ತಿದ್ದಾರೆ
Be the first to comment