ಗುಡೂರ (ಎಸ್ ಸಿ)
ಇಳಕಲ್ಲ ತಾಲೂಕಿನ ಗುಡೂರ (ಎಸ್ ಸಿ) ಗ್ರಾಮದ ಶ್ರೀ ಬನಶಂಕರಿ ದೇವಿ ದೇವಾಲಯದಲ್ಲಿ ೨೫ ನೇ ವಾರ್ಷಿಕೋತ್ಸವವು ಪ್ರತಿ ವರ್ಷದ ಸಂಪ್ರದಾಯದಂತೆ ಜರುಗಿತು.ತನಿಮಿತ್ತ ಬೆಳಗಿನ ಜಾವ ಶ್ರೀ ಬನಶಂಕರಿ ದೇವಿಗೆ ಮಹಾಭಿಷೇಕ ಕುಂಕುಮ ಅರ್ಚನೆ ಹಾಗೂ ಶ್ರೀ ಬನಶಂಕರಿ ದೇವಿಗೆ ಬೆಳ್ಳಿಯ ಆಭರಣಗಳನ್ನು ತೊಡಿಸಿ ವಿಶೇಷ ಪೂಜೆಯನ್ನು ಮಾಡಲಾಗಿದ್ದು ಮುತೈದೆಯರಿಗೆ ಊಡಿ ತುಂಬುವ ಕಾರ್ಯಕ್ರಮ ಜರುಗಿತು.
ಪೂಜಾ ಕಾರ್ಯದ ನಂತರ ದೀಪದ ಡಿವಟಗಿಯ ಮೆರವಣಿಗೆಯು ದೇವಾಲಯದಿಂದ ಹೊರಟು ಮಾಬುಸಾಬನ ಕಟ್ಟಿ, ಕಾಯಿಪಲ್ಯ ಮಾರುಕಟ್ಟೆಯ ಮಾರ್ಗವಾಗಿ ಶ್ರೀ ಬನಶಂಕರಿ ದೇವಿಯ ಪಾದಗಟ್ಟೆಯನ್ನು ತಲುಪಿತು.ನಂತರ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಯಿತು.ಅನ್ನ ಸಂತರ್ಪನೆಯನ್ನು ಈಶ್ವರ ಕಳಸಾ ಹಾಗೂ ಪೂಜಾ ಕಾರ್ಯಗಳ ಸೇವೆಯನ್ನು ಮಲ್ಲಪ್ಪ ಕಳಸಾ ಸಮರ್ಪಿಸಿದರು.
ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ದೇವಾಂಗ ಸಮಾಜದ ಅದ್ಯಕ್ಷರಾದ ಚಂದಪ್ಪ ಕಳಸಾ,ಅರ್ಚಕರಾದ ಮಲ್ಲಪ ಬೆಲ್ಲದ,ಶ್ರೀಕಾಂತ ಕಳಸಾ,ನಿಂಗಪ್ಪ ಲಾಯದಗುಂದಿ,ಡಿಕಪ್ಪ ಕಳಸಾ, ರವಿ ಕಳಸಾ,ದೊಡ್ಡಪ್ಪ ಕಳಸಾ, ರಾಘವೇಂದ್ರ ಕಳಸಾ ಸೇರಿದಂತೆ ಶ್ರೀ ದೇವಲ ಮಹರ್ಷಿ ತರುಣ ಸಂಘದ ಅಧ್ಯಕ್ಷರಾದ ಅಜಯ ಕಳಸಾ, ಸಚಿನ ವೀರಾಪೂರ, ಮಹೇಶ ಕಳಸಾ,ಲಕ್ಷ್ಮಣ ಹುಣಶ್ಯಾಳ, ಶ್ರವಣ ಕಳಸಾ, ಭೀಮಪ್ಪ ಕಾಂಬ್ಳೆ,ಶಂಕರ ಕಳಸಾ, ಸಂತೋಷ ವೀರಾಪೂರ,ಗುಡೂರ ಗ್ರಾಮದ ದೇವಾಂಗ ಸಮಾಜದ ಮಹಿಳೆಯರು ಯುವಕರು ಹಾಗೂ ಭಕ್ತರು ಇತರರಿದ್ದರು.
Be the first to comment