ಜಿಲ್ಲಾ ಸುದ್ದಿಗಳು
ಯಲ್ಲಾಪುರ
ದಿನೆ ದಿನೇ ಕೊವಿಡ್ ಪ್ರಕರಣ ಬರುತ್ತಿರುವುದರಿಂದ ಜಿಲ್ಲಾಧಿಕಾರಿ ಆದೇಶದನ್ವಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 15 ಗ್ರಾಮಪಂಚಾತದ ವ್ಯಾಪ್ತಿಯಲ್ಲಿ ಐಸೋಲೇಶನ್ ಸೆಂಟರ್ ತೆರೆಯಲಾಗಿದೆ ಎಂದು ತಹಶೀಲ್ದಾರ ಶ್ರೀಕೃಷ್ಣ ಕಾಮಕರ ಹೇಳಿದ್ದಾರೆ
ಅವರು ತಾಲೂಕಾ ದಂಡಾಧಿಕಾರಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಎರಡು ದಿನದ ಹಿಂದೆ ಒಂದು ಪ್ರಕರಣ ತಾಲೂಕಿನಲ್ಲಿತ್ತು. ಇವತ್ತು ಒಂಬತ್ತು ಪ್ರಕರಣ ಬಂದಿದೆ ಜನರು ಕೂಡ ಮಾಸ್ಕ ಹಾಕುವುದನ್ನು ಮರೆತಿದ್ದಾರೆ. ಆದ್ದರಿಂದ ಕಡ್ಡಾಯವಾಗಿ ಎಲ್ಲಾ ಅಂಗಡಿ ಕಾರರನ್ನು, ಮಾಲಿಕರನ್ನು ಸ್ಯಾಬ್ ಟೆಸ್ಟ್ ಮಾಡಲಾಗುವದು ಮಾಸ್ಕ ಧರಿಸದಿದ್ದರೆ 100 ರೂ.ದಂಡ ಹಾಕಲು ಪೆÇೀಲಿಸ್ ಇಲಾಖೆಗೆ, ಗ್ರಾಮ ಪಂಚಾತ ಪಿಡಿಒ ಗಳಿಗೆ ತಿಳಿಸಲಾಗಿದೆ ಯಾರು ಜ್ವರ, ನೆಗಡಿ, ಥಂಡಿ ಬಂದವರು ಚೆಕ್ ಮಾಡಿಸಿಕೊಳ್ಳಲು ಬರದಿದ್ದರೆ ವೈದ್ಯರು ಮಾಹಿತಿ ನೀಡಬೇಕು.
ಒಂದು ಮನೆಯಲ್ಲಿ ಒಬ್ಬರಿಗಿಂತ ಹೆಚ್ಚಿಗೆ ಕೋವಿಡ್ ಪ್ರಕರಣ ಬಂದರೆ ಹೋಮ್ ಕ್ವಾರೈಂಟೆನ್ ಮಾಡುವದರೊಂದಿಗೆ ಆ ಏರಿಯಾವನ್ನೆ 15 ದಿನ ಸೀಲ್ ಡೌನ್ ಮಾಡಲಾಗುವದು ಈಗಾಗಲೇ ಸರಕಾರಿ ಆಸ್ಪತ್ರೆ ಯಲ್ಲಿ 12 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.ಶನಿವಾರ, ಭಾನುವಾರ ಬೇರೆ ಬೇರೆ ಜಿಲ್ಲೆಯಿಂದ ಬರುವ ಪ್ರವಾಸಿಗರನ್ನು ವಾಪಸ್ ಕಳಿಸುವದರೊಂದಿಗೆ ಚೆಕಪ್ ಮಾಡಲಾಗುವದು. ಸಂತೆಗೆ ಬರುವ ವ್ಯಾಪಾರಿಗಳು ಕಡ್ಡಾಯವಾಗಿ ಎರಡು ದಿನ ಹಿಂದೆ ಚೆಕಪ್ ಮಾಡಿದ ಆರೊಗ್ಯ ಇಲಾಖೆಯ ಸರ್ಟಿಪಿಕೇಟ ತರಲೇಬೇಕು ಕಡ್ಡಾಯ ತಪಾಸಣೆ ಮಾಡುವ ಬಗ್ಗೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಕಠಿಣ ಕ್ರಮ ತೆಗೆದುಕೊಳ್ಳುವದು ಅನಿವಾರ್ಯ ಸಾರ್ವಜನಿಕರು ಸಹಕರಿಸಬೇಕೆಂದರು ಹೇಳಿದರು.
Be the first to comment