ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕ ಮತ್ತು ಮಾಲಕರ ಸಂಘದಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕರ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ದಿನಾಂಕ, 06/08/2021 ಶುಕ್ರವಾರ ಜಿಲ್ಲಾಧಿಕಾರಗಳ ಕಾರ್ಯಾಲಯ ಕಾರವಾರದಲ್ಲಿ ಪೆಟ್ರೋಲ್ ಮತ್ತು ಆಟೋ ಗ್ರಾಸ್ ಬೇಲೆ ಏರಿಕೆ ಖಂಡಿಸಿ ಮತ್ತು ಕಳೆದ ವರ್ಷ ಹಾಗೂ ಈ ವರ್ಷದ ಕೋವಿಡ್ ಸಂದರ್ಭದಲ್ಲಿ ಆಟೋ ಚಾಲಕರಿಗೆ ಸರ್ಕಾರ 5000/3000 ಪರಿಹಾರ ಘೋಷಣೆ ಮಾಡಿತ್ತೊ ಅದರಲ್ಲಿ ಇನ್ನೂ 50 ಶೇಕಡಾ ಚಾಲಕರಿಗೆ ಇಲ್ಲಿಯವರೆಗೆ ಚಾಲಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗದೆ ಇರುವುದನ್ನು ಖಂಡಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಕೊಡಲಾಯಿತು. ಸರ್ಕಾರ ಇದರ ಬಗ್ಗೆ ಸೂಕ್ತವಾದ ಕ್ರಮ ಜರುಗಿಸದೆ ಇದ್ದರೆ ಮುಂದಿನ ದಿನಗಳಲ್ಲಿ ತಾಲೂಕು ,ಜಿಲ್ಲಾ ಹಾಗೂ ರಾಜ್ಯದಲ್ಲಿ ಉಗ್ರವಾಗಿ ಪ್ರತಿಭಟನೆ ಮಾಡಬೇಕಾಗಬದು ಎಂದು ಎಚ್ಚರಿಕೆ ನೀಡಿದ್ದಾರೆ.

CHETAN KENDULI

ಇದರ ಜೊತೆಗೆ ಮುರ್ಡೇಶ್ವರದ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ರಿ, ಮಾವಳ್ಳಿ ಮುರ್ಡೇಶ್ವರ ಸಂಘದವತಿಯಿಂದ ಕೂಡ ಪ್ರತ್ಯೇಕ ಮನವಿ ಸಲ್ಲಿಸಿ ಮುರ್ಡೇಶ್ವರ ಭಾಗದಲ್ಲಿ ರಿಕ್ಷಾ ಪರ್ಮಿಟ್ ಕೊಡುವುದನ್ನು ಹತ್ತು ವರ್ಷಗಳ ಕಾಲ ಬಂದ್ ಮಾಡಬೇಕು ಎಂದೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಅಧ್ಯಕ್ಷರಾದ ಕೃಷ್ಣಾ ನಾಯ್ಕ್ ಆಸರಕೇರಿ,ಹಾಗು ಕಾರವಾರ ರಿಕ್ಷಾ ಸಂಘದ ಅಧ್ಯಕ್ಷರು ಹಾಗೂ ಮುರ್ಡೇಶ್ವರದ ರಿಕ್ಷಾ ಸಂಘದ ಅಧ್ಯಕ ಸತೀಶ್ ನಾಯ್ಕ್ ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*