ಕರ್ನಾಟಕ ಜನಸೇವಾ ಟ್ರಸ್ಟ್ ನಿರಾಶ್ರಿತರಿಗೆ ಆಕಾಶ್ ಹಾಸ್ಪಿಟಲ್ ವತಿಯಿಂದ ಉಚಿತ ಚಿಕಿತ್ಸೆ ಹಾಗೂ ಒಂದು ಲಕ್ಷ ಚೆಕ್ ವಿತರಣೆ ಮಾಡಿದರು

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿ 

CHETAN KENDULI

ಆಕಾಶ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವೃದ್ಧರಿಗೆ ಆಸರೆನಿ ರಾಶ್ರಿತರಿಗೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲುಗುಣಮುಖರಾಗಿ ವೃದ್ಧಾಶ್ರಮಕ್ಕೆ ಮರಳಿದ ನಿರಾಶ್ರಿತರ ತಂಡ ೧ಲಕ್ಷ ರೂ. ವೃದ್ಧಾಶ್ರಮಕ್ಕೆ ದೇಣಿಗೆ ಮತ್ತು ೧ ಟನ್ ಅಕ್ಕಿ ನೀಡುವ ಭರವಸೆ ಹೆಸರಘಟ್ಟ ವೃದ್ಧಾಶ್ರಮದ ಸ್ಥಾಪಕ ಪ್ರಶಾಂತ್ ಚಕ್ರವರ್ತಿ ಆಸ್ಪತ್ರೆಗೆ ಕೃತಜ್ಞತೆ ಸಲ್ಲಿಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಆಕಾಶ್ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ ಹೆಸರಘಟ್ಟ ವೃದ್ಧಾಶ್ರಮದ ನಿರಾಶ್ರಿತರು ಕೊರೊನಾ ಸೋಂಕಿನಿಂದ ದಾಖಲಾಗಿ, ಗುಣಪಡಿಸಿಕೊಂಡು ಮತ್ತೇ ವೃದ್ಧಾಶ್ರಮಕ್ಕೆ ತೆರಳುವಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಮೆರೆಯುವುದರ ಮೂಲಕ ಗಮನ ಸೆಳೆಯಿತು.

ನಿರಾಶ್ರಿತರ ಪ್ರಾಣ ಉಳಿವಿಗೆ ಸ್ಪಂಧಿಸಿದ ಆಕಾಶ್ ಆಸ್ಪತ್ರೆಯ ಮಾಲಿಕ ಮುನಿರಾಜು ಅವರ ಸೇವಾ ಮನೋಭಾವ ಮಾನವೀಯತೆಗೆ ವೃದ್ಧಾಶ್ರಮದ ಆಡಳಿತ ಮಂಡಳಿ ಅಭಿನಂದಿಸಿದರು. ಇತ್ತಿಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಹೆಸರಘಟ್ಟದ ವೃದ್ಧಾಶ್ರಮದಲ್ಲಿನ ಸೋಂಕಿತ ನಿರಾಶ್ರಿತರು ಸೋಂಕಿನಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ಆಕಾಶ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಗುಣಪಡಿಸಿಕೊಂಡು ವೃದ್ಧಾಶ್ರಮಕ್ಕೆ ಮತ್ತೆ ತೆರಳುವಾಗ ಆಕಾಶ್ ಆಸ್ಪತ್ರೆಯ ಮಾಲೀಕ ಮುನಿರಾಜು ಮಾನವೀಯತೆ ಮೆರೆಯುವುದರ ಮೂಲಕ ವೃದ್ಧಾಶ್ರಮಕ್ಕೆ ಒಂದು ಲಕ್ಷ ರೂ.ಗಳ ಚೆಕ್ ಅನ್ನು ವೃದ್ಧಾಶ್ರಮದ ಸ್ಥಾಪಕ ಚಕ್ರವರ್ತಿ ಅವರಿಗೆ ಹಸ್ತಾಂತರಿಸಿದರು. ಮತ್ತು ವೃದ್ಧಾಶ್ರಮಕ್ಕೆ ಒಂದು ಟನ್ ಅಕ್ಕಿಯನ್ನು ನೀಡುವ ಭರವಸೆಯನ್ನು ನೀಡಿದ್ದಾರೆ.

ವೃದ್ಧಾಶ್ರಮದ ಸ್ಥಾಪಕ ಪ್ರಶಾಂತ್ ಚಕ್ರವರ್ತಿ ಮಾತನಾಡಿ, ನಿರಾಶ್ರಿತ ಆಶ್ರಮದಲ್ಲಿ ರಸ್ತೆ ಬದಿಯಲ್ಲಿನ ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ಸೇವೆ ಮಾಡಲಾಗುತ್ತಿದೆ. ಸುಮಾರು ೭೦ ರಿಂದ ೮೦ ಜನರು ಇದ್ದಾರೆ. ಅದರಲ್ಲಿ ೪೧ ಕೋವಿಡ್ ಪಾಸಿಟೀವ್ ಬಂದಿತ್ತು. ತುಂಬಾ ಸೀರಿಯಸ್ ಇಶ್ಯು ಆಗಿದ್ದರಿಂದ ಆಗ ಮುನಿರಾಜ್ ಅವರಿಗೆ ಕರೆ ಮಾಡಿದೆ. ಬೇರೆ ಮಾತನಾಡದೆ, ಎಷ್ಟೇ ಆಗಲಿ, ಏನೇ ಆಗಲಿ ಜೀವ ಉಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಒಬ್ಬರೂ ಸಹ ಸಾವನ್ನಪ್ಪದೆ, ಉತ್ತಮವಾಗಿ ಆಶ್ರಮದ ನಿರಾಶ್ರಿತರಿಗೆ ಎಲ್ಲಾ ಸೌಲಭ್ಯ ನೀಡಿ ಗುಣಪಡಿಸಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಪ್ರಶಾಂತ್ ಚಕ್ರವರ್ತಿಇನ್ನೂ ಈ ಸಂದರ್ಭದಲ್ಲಿ ಆಕಾಶ್ ಆಸ್ಪತ್ರೆಯ ಮಾಲೀಕ ಮುನಿರಾಜ್, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಆಡಳಿತ ಮಂಡಳಿ, ನಿರಾಶ್ರಿತರು ಇದ್ದರು.

Be the first to comment

Leave a Reply

Your email address will not be published.


*