ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಪಿಡಿಓ ಪಿಎಸ್ ನಾಯ್ಕೋಡಿಯವರ ವರ್ಗಾವಣೆ ರದ್ದು ಗೊಳಿಸಿ ಯಥಾಸ್ಥಿತಿಯಲ್ಲಿ ಸೇವೆಯಲ್ಲಿ ಮುಂದುರವೆಯವಂತೆ ಆಗ್ರಹಿಸಿ ಕುಂಟೋಜಿ ಕೆಲ ಸದಸ್ಯರು ಹಾಗೂ ಗ್ರಾಮಸ್ಥರು ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ವಿರೇಶ ಹಿರೇಮಠವರಿಗೆ ಶನಿವಾರ ಮನವಿ ಸಲ್ಲಿಸಿದರು.
ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಪಿಡಿಓ ಪಿಎಸ್ ನಾಯ್ಕೋಡಿಯವರು ಅಧಿಕಾರ ವಹಿಸಿಕೊಂಡು ಬಂದಾಗಿನಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳ್ಳುವಂತೆ ಮಾಡಿದ್ದಾರಲ್ಲದೆ, ಸಾರ್ವಜನಿಕರೊಂದಿಗೆ ಸ್ನೇಹ ಬಾಂಧವ್ಯದಿಂದ ನಡೆದುಕೊಳ್ಳುವ ಮೂಲಕ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯ ಕಳೇದ ಒಂದು ವರ್ಷಗಳಿಂದ ಬಹಳ ಭೀಕರವಾಗಿ ಕಾಡುತ್ತಿರುವ ಕೋವಿಡ್ ಸಂದರ್ಭದಲಂತೂ ಅತ್ಯಂತ ಜಾವಾಬ್ದಾರಿಯುತ ಕರ್ತವ್ಯ ನಿರ್ವಹಿಸಿ ಕೋರೊನಾ ನಿಯಂತ್ರಣಕ್ಕಾಗಿ ಶ್ರಮಿಸಿದ್ದಾರೆ. ಅದರಂತೆ ತಾಲೂಕಿನಲ್ಲಿಯೇ ಅತಿಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿ ಗ್ರಾಪಂಗೆ ಗ್ರಾಮ ಕಾಯಕ ಮಿತ್ರ ಹುದ್ದೇ ಮಂಜೂರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಸರಕಾರ ಯೋಜನೆಗಳನ್ನು ಹಣವನ್ನು ಒಂದು ನೈಯಾಪೈಸೆ ಪೋಲು ಮಾಡಿಸದೇ ಸಮಯಕ್ಕೆ ಸರಿಯಾಗಿ ಅನುದಾನ ಮಂಜೂರಿ ಮಾಡಿ ಅಭಿವೃದ್ಧಿಗೆ ಸೈ ಏನಿಸಿಕೊಂಡಿದ್ದಾರೆ.
ಇಂತಹ ಅಭಿವೃದ್ಧಿ ಅಧಿಕಾರಿಯನ್ನು ಯಾವೂದೇ ಮುನ್ಸೂಚನೆ ಇಲ್ಲದೇ ತಕ್ಷಣದಲ್ಲಿ ವರ್ಗಾವಣೆ ಮಾಡಿದ್ದು ಈ ಭಾಗದ ಜನರಿಗೆ ಮತ್ತು ಗ್ರಾಪಂ ಕೆಲ ಸದಸ್ಯರುಗಳಿಗೆ ನೋವನ್ನುಂಟು ಮಾಡಿದೆ, ಕಾರಣ ಪಿಡಿಓ ಪಿ ಎಸ್ ನಾಯ್ಕೋಡಿಯವರ ವರ್ಗಾವಣೆ ಆದೇಶ ತಕ್ಷಣದಲ್ಲಿಯೇ ಜಾರಿ ಬರುವಂತೆ ವರ್ಗಾವಣೆಯನ್ನು ಹಿಂಪಡೆದು ರದ್ದು ಗೊಳಿಸಿ ಪುನಃ ಯಥಾಸ್ಥಿಯಲ್ಲಿ ಮೊದಲಿದ್ದ ಸ್ಥಳದಲ್ಲಿಯೇ ಸೇವೆ ಸಲ್ಲಿಸುವಂತೆ ಆದೇಶ ನೀಡಬೇಢಕು ಎಂದು ಇಲ್ಲವಾದಲ್ಲಿ ಇಡೀ ಗ್ರಾಮಸ್ಥರು ಸೇರಿಕೊಂಡು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಕುಂಟೋಜಿ ಗ್ರಾಮ ಪಂಚಾಯಿತಿ ಸದಸ್ಯೆ ರಾದ ಮಂಜುಳಾ ಹುಲಗಣ್ಣಿ, ಸುಮಂಗಲಾ ಪಿ ಬಿರಾದಾರ,ನಂದಾ ಬಾಗೇವಾಡಿ, ಹಣಮಂತ ಮಾರನಾಳ, ಬಸಮ್ಮ ಈಳಗೇರ, ರಾಚಪ್ಪ ಜಗಲಿ, ರಾಮನಗೌಡ ಪಾಟೀಲ, ನೂರಜಾನಬಿ ಗುರಿಕಾರ, ಭೀಮವ್ವ ಭಜಂತ್ರಿ ಸೇರಿದಂತೆ ಹಲವರು ಇದ್ದರು.
Be the first to comment