ರಾಜ್ಯ ಸುದ್ದಿಗಳು
ಬೆಂಗಳೂರು
ಬಿಟಿವಿ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ. ಬಿಟಿವಿ ಸಂಪಾದಕರು ನೀಡಿದ ದೂರಿನ ಮೇರೆಗೆ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ.ಬಿಟಿವಿಯ ಕಚೇರಿಯಲ್ಲಿ ಈ ಹಿಂದೆ ವಿಡಿಯೋ ಎಡಿಟರ್ ಆಗಿದ್ದ ತೀರ್ಥ ಪ್ರಸಾದ್ ಕಳೆದ ಹಲವು ದಿನಗಳಿಂದ ತಂಡ ಕಟ್ಟಿಕೊಂಡು ವ್ಯವಸ್ಥಿತವಾಗಿ ವಸೂಲಿ ಮಾಡುತ್ತಿದ್ದ. ಈ ಬಗ್ಗೆ ಹಲವರು ಬಿಟಿವಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಟಿವಿ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿತ್ತು.ಅಷ್ಟಕ್ಕೂ ಬಿಟಿವಿಯಿಂದ ಕೆಲಸ ಬಿಟ್ಟು ಹೋದ ಬಳಿಕ ತೀರ್ಥ ಪ್ರಸಾದ್ ಮತ್ತು ಬೇರೆ ಬೇರೆ ಚಾನಲ್ ಗಳ 7 ಜನರು ಒಂದು ತಂಡ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ಕುಖ್ಯಾತ ಗ್ಯಾಂಗ್ ನ ಮಾಹಿತಿ ಬಿಟಿವಿ ಕಚೇರಿಗೆ ತಲುಪುತ್ತಿದ್ದಂತೆ ಅಲರ್ಟ್ ಆದ ಬಿಟಿವಿ ಈ ಗ್ಯಾಂಗ್ ಮೇಲೆ ಹದ್ದಿನ ಕಣ್ಣಿಟ್ಟಿತ್ತು.
ಇತ್ತೀಚೆಗೆ ಬಿಟಿವಿಯಲ್ಲಿ ಅಕ್ರಮ ಫಿಲ್ಟರ್ ಮರಳು ಮಾಫಿಯಾದ ಸುದ್ದಿ ಪ್ರಸಾರವಾಗಿತ್ತು. ಈ ಅಕ್ರಮದ ಸುದ್ದಿ ಪ್ರಸಾರವಾಗುತ್ತಿದ್ದಂತೆ ದಂಧೆಕೋರರನ್ನು ಸಂಪರ್ಕಿಸಿದ್ದ ತೀರ್ಥ ಪ್ರಸಾದ್ ಸುದ್ದಿ ನಿಲ್ಲಿಸುವುದಾಗಿ ಹೇಳಿ 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಬಿಟಿವಿ ಸಂಪಾದಕರು ತೀರ್ಥ ಪ್ರಸಾದ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೇ ವೇಳೆ ಹಣ ಪಡೆಯುವ ವೇಳೆ ತೀರ್ಥ ಪ್ರಸಾದ್ ನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.ಬಿಟಿವಿ ಹಿರಿಯ ಸಿಬ್ಬಂದಿಯ ಹೆಸರುಗಳಲ್ಲಿ ನಕಲಿ ಮೊಬೈಲ್ ನಂಬರ್ ನೋಟ್ ಮಾಡಿಕೊಂಡಿದ್ದ ತೀರ್ಥ ಪ್ರಸಾದ್ ಬಿಟಿವಿ ಹಿರಿಯ ಸಿಬ್ಬಂದಿ ಜೊತೆ ಮಾತನಾಡಿದ್ದೇನೆಂದು ಸುಳ್ಳು ಹೇಳಿ ವಂಚಿಸುತ್ತಿದ್ದ. ಈತನ ವಿರುದ್ಧ ಎರಡು ಪೊಲೀಸ್ ಠಾಣೆಗಳಲ್ಲಿ ಎಫ್ ಐ ಆರ್ ದಾಖಲಾಗಿದೆ. ತೀರ್ಥ ಪ್ರಸಾದ್ ಜೊತೆ ಇನ್ನೂ 7 ಮಂದಿಯ ತಂಡವಿದೆ. ಈ ತಂಡದಲ್ಲಿ ಬೇರೆ ಬೇರೆ ಚಾನೆಲ್ಗಳ ಪತ್ರಕರ್ತರೂ ಈ ಟೀಮ್ನಲ್ಲಿ ಇದ್ದಾರೆ. ಅವರು ಯಾವುದೇ ಕ್ಷಣದಲ್ಲಾದರೂ ಅರೆಸ್ಟ್ ಆಗಬಹುದಾಗಿದೆ.
ಕೆಲವು ಚಾನಲ್ ಗಳಲ್ಲಿ ತಪ್ಪಾಗಿ ಈ ಸುದ್ದಿ ಪ್ರಸಾರವಾಗುತ್ತಿದೆ. ಇದೇ ಅಸಲಿ ಸ್ಟೋರಿ… ತೀರ್ಥ ಪ್ರಸಾದ್ ಅಕ್ರಮದ ವಿರುದ್ಧ ದೂರು ನೀಡಿದ್ದೇ ಬಿಟಿವಿ.
Be the first to comment