ಮುದ್ದೇಬಿಹಾಳ ಪಟ್ಟಣದಲ್ಲಿ 24 ಗಂಟೆಯಲ್ಲಿಯೇ ವಿದ್ಯುತ್ ಪುರೈಕೆಯಲ್ಲಾಗುತ್ತಿರುವ ಸಮಸ್ಯೆ ಬಗೆಹರಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ನಾಗರೀಕರ ಆಗ್ರಹ…!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಪಟ್ಟಣದಲ್ಲಿ ಅನಿಯಮಿತವಾಗಿ ವಿದ್ಯುತ್ ತೆಗೆಯುತ್ತಿರುವುದರಿಂದ ಸಣ್ಣ ಪುಟ್ಟ ಉದ್ಯಮಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು ಇನ್ನೂ 24 ಗಂಟೆಗಳಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಮಂಗಳವಾರ ಮುದ್ದೇಬಿಹಾಳ ಜಿಲ್ಲಾ ರಚನಾ ಹೋರಾಟ ಸಮಿತಿ ಮತ್ತು ನಗರದ ಎಲ್ಲ ಪ್ರಗತಿಪರ ಸಂಘಟನೆಗಳು ಹಾಗೂ ವ್ಯಾಪಾರಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

CHETAN KENDULI


ಕಳೆದ ಒಂದು ತಿಂಗಳಿಂದ ಮೇಲಿಂದ ಮೇಲೆ ಅನಿಯಮಿತವಾಗಿ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ನಗರದ ಉದ್ಯಮಿಗಳಲಿಗೆ ಹಾಗೂ ವಿದ್ಯುತ್ತನ್ನೆ ಆಧರಿಸಿ ವ್ಯವಹಾರ ನಡೆಸುತ್ತಿರುವವರಿಗೆ ತುಂಬಾ ತೊಂದರೆಯಾಗುತ್ತಿದೆ. ಇನ್ನೂ ಕೆಲ ಅಂಗಡಿಕಾರರು ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ಬ್ಯಾಟರಿ ಹಾಗೂ ಯುಪಿಎಸ್ ಅವಳಡಿಸಿದ್ದು ಬ್ಯಾಟರಿ ಚಾರ್ಜ್ ಆಗುವಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಚಿಕ್ಕಪುಟ್ಟ ಉದ್ಯೋಗಸ್ಥರು ಅಕ್ಷರಶಹ ಬೀದಿಗೆ ಬೀಳುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ರಾಜ್ಯಕ್ಕೆ ಬಳಕೆಯಾಗಿ ಉಳಿದ ಹೆಚ್ಚುವರಿ ವಿದ್ಯುತ್ತನ್ನು ನೆರೆ ರಆಜ್ಯಕ್ಕೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಜನರ ಪಾಲಿನ ಹಕ್ಕಿನ ವಿದ್ಯುತ್ತನ್ನು ಸಂಪೂರ್ಣ ಬಳಕೆ ಮಾಡುವಲ್ಲಿ ವಿಫಲವಾಗಿದ್ದೂ ಅಲ್ಲದೇ ಅನಿಯಮಿತ ವಿದ್ಯುತ್ ನಿಲುಗಡೆಯನ್ನು ಭಲವಾಗಿ ಪ್ರತಿಭಟಿಸುತ್ತಿದ್ದೇವೆ ಎಂದು ನಗರ ನಾಗರೀಕರ ಪರವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರಕಾಶ ಕೆಂದೂಳಿ ತಿಳಿಸಿದ್ದಾರೆ.
ಹೆಚ್ಚುವರಿ ಪೀಡರ್ ಅಳವಡಿಕೆಗೆ ಆಗ್ರಹ:
ಬೃಹತ್ ಪ್ರಮಾನದಲ್ಲಿ ಬೆಳೆಯುತ್ತಿರುವ ಮುದ್ದೇಬಿಹಾಳ ಪಟ್ಟಣಕ್ಕೆ ವಿದುತ್ ವಿಸ್ತರಣಾ ಜಾಲವನ್ನು ವಿಸ್ತರಿಸುವ ಕ್ರಮ ಕೈಗೊಳ್ಳುವುದು ಅವಶ್ಯಕವಿದೆ. ನಗರದ ಯಾವುದೋ ಒಂದು ಭಾಗದಲ್ಲಿ ಏನಾದರೂ ಕೆಲಸವಿದ್ದಲ್ಲಿ ಇಡೀ ನಗರದ ವಿದ್ಯುತ್ ಪುರೈಕೆ ನಿಲ್ಲಿಸಬೇಕಾಗಿದೆ. ಇದಕ್ಕಾಗಿ ಉತ್ತಮ ವಿದ್ಯುತ್ ಸೇವೆ ಒದಗಿಸಲು ಅನುಕೂಲವಾಗುವಂತೆ ಈಗಿರು ಪೀಡರ್‌ಗಳ ಜೊತೆಗೆ ಇನ್ನೂ ಎರಡು ಪೀಡರ್‌ಗಳನ್ನು ಹೆಚ್ಚಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ವ್ಯಾಪಾರಸ್ಥರಾದ ಬಸವರಾಜ ನಂದಿಕೇಶ್ವರಮಠ, ಎಲ್.ಬಿ.ರಾಠೋಡ, ಪ್ರಕಾಶ ಹೂಗಾರ, ಮಲಿಕಸಾಬ ನದಾಫ, ಆರ್.ಎಸ್.ಕಂಠಿ, ಬಾವುಸಾಬ ಬಾಗವಾನ, ಉಮರಫಾರುಕ, ರಮೇಶ ಕೆಂದೂಳಿ, ಸೋಮಲಾಲ ಪಟೇಲ, ಬಸವರಾಜ ಹಳ್ಳದ ಅವರು ಇನ್ನೂ 24 ಗಂಟೆಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*