ರಾಜ್ಯ ಸುದ್ದಿ
ಕಾರವಾರ: ನಗರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳಲು ಬೆಳಿಗ್ಗೆಯಿಂದಲೇ ಕಾದು ಕುಳಿತಿದ್ದ ಜನರಿಗೆ ವ್ಯಾಕ್ಸಿನ್ ಖಾಲಿಯಾದ ಸುದ್ದಿ ಹಬ್ಬುತ್ತಿದ್ದಂತೆ ಅಲ್ಲಿಗೆ ನಂದಿದ್ದ ನೂರಾರು ಜನರು ಆಸ್ಪತ್ರೆಗೆ ನುಗ್ಗಲು ಯತ್ನಿಸಿದ ಘಟನೆ ನಡೆಯಿತು.
ಕೊರೊನಾ ಲಸಿಕೆ ಪಡೆಯಲು ಬೆಳಿಗ್ಗೆಯಿಂದ ಜನ ಸಾಲುಗಟ್ಟಿದ್ದರು. ಆದರೆ ಕೆಲ ಹೊತ್ತಿನ ಬಳಿಕ ಕೇವಲ 150 ಜನರಿಗೆ ಮಾತ್ರ ಲಸಿಕೆ ನೀಡುವುದಾಗಿ ಸಿಬ್ಬಂದಿ ತಿಳಿಸಿದ್ದರಾದರೂ ಜನ ಲಸಿಕೆಗಾಗಿ ಕಾದು ನಿಂತಿದ್ದರು. ಕೊನೆಗೆ 150 ಜನರಿಗೆ ಲಸಿಕೆ ಹಾಕಿದ ಬಳಿಕ ಬಾಗಿಲು ಬಂದ್ ಮಾಡಲು ಮುಂದಾಗಿದ್ದು ಈ ವೇಳೆ ಲಸಿಕೆಗಾಗಿ ಕಾದು ಕುಳಿತಿದ್ದವರು ಬಾಗಿಲು ಬಂದ್ ಮಾಡಲು ಬಿಡದೆ ಆಸ್ಪತ್ರೆ ಒಳಭಾಗಕ್ಕೆ ತೆರಳಲು ಯತ್ನಿಸಿದ್ದರು. ಸ್ಥಳದಲ್ಲಿದ್ದ ಪೆÇಲೀಸರು ಹಾಗೂ ಸಿಬ್ಬಂದಿ ತಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಪ್ರತಿನಿತ್ಯ 300 ಕ್ಕೂ ಹೆಚ್ಚು ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಆದರೆ ಇಂದು ಕೇವಲ 150 ಜನರಿಗೆ ವ್ಯಾಕ್ಸಿನ್ ನೀಡುವುದಾಗಿ ತಿಳಿಸುತ್ತಿದ್ದಾರೆ. ಯಾವಾಗ ಬಂದಾಗಲೂ ವ್ಯಾಕ್ಸಿನ್ ಸ್ಟಾಕ್ ಇಲ್ಲ ಎಂದು ತಿಳಿಸಲಾಗುತ್ತಿದೆ. ನಾವು ಕೆಲಸ ಕಾರ್ಯವನ್ನು ಬಿಟ್ಟು ಸಾಲುಗಟ್ಟಿದ್ದರು ಪ್ರಯೋಜನವಾಗುತ್ತಿಲ್ಲ. ಈಗ ಬಂದವರಿಗೆ ವ್ಯಾಕ್ಸಿನ್ ನೀಡುವಂತೆ ವ್ಯಾಕ್ಸಿನ್ ಪಡೆಯಲು ಬಂದವರು ಒತ್ತಾಯಿಸಿದ ಘಟನೆ ನಡೆಯಿತು.
Be the first to comment