ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿ ಗಂಗಪ್ಪ ನನ್ನು ಅಮಾನತುಗೊಳಿಸಿ : ಆರ್. ಕೆ ನಾಯಕ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಗಂಗಪ್ಪ ಗ್ರಾಮ ಲೆಕ್ಕಾಧಿಕಾರಿ ಮಸ್ಕಿ ಇವರನ್ನು ಕೂಡಲೇ ಅಮಾನತು ಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಆರ್. ಕೆ ನಾಯಕ ರವರು ಒತ್ತಾಯಿಸಿದ್ದಾರೆ.ಮಸ್ಕಿ ಪಟ್ಟಣದ ಗ್ರಾಮ ಲೆಕ್ಕಾಧಿಕಾರಿ ಗಂಗಪ್ಪ ರವರು ವೃದ್ಧರ ಮಾಸಾಶನ, ಪಹಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಗಳನ್ನು ಎರಡು ಮೂರು ದಿನಗಳಲ್ಲಿಯೇ ತೆಗೆದು ಕೊಡಲಾಗುವುದು ಎಂದು ಜನ ಸಾಮಾನ್ಯರಿಂದ ಈ ಪತ್ರಗಳಿಗೆ ಇಂತಿಷ್ಟು ಹಣವನ್ನು ನೀಡಿ ಎಂದು ನಿಗದಿಪಡಿಸಿ ಖಾಸಗಿ ವ್ಯವಹಾರ ನಡೆಸುತ್ತಿದ್ದಾರೆ. ಹಾಗೆಯೇ ಎರಡು ಮೂರು ದಿನಗಳಲ್ಲಿ ಏನಾದರೂ ಅರ್ಜಿ ಸಲ್ಲಿಸಿದ್ದು ಬಾರದೇ ಇದ್ದಾಗ ಜನ ಸಾಮಾನ್ಯರು ಕಛೇರಿಯಿಂದ ಮನೆಗೆ ಸುತ್ತಾಡಿ ಗೊಳಾಡುವ ಪರಿಸ್ಥಿತಿ ಎದುರಾಗಿದೆ. ವೃದ್ಧರ ಮಾಸಾಶನ ಪತ್ರಕ್ಕೆ ನಾಲ್ಕು ಸಾವಿರ ರೂಪಾಯಿ ಕೊಡಬೇಕೆಂದು ನಿಗದಿ ಮಾಡಿದ್ದು, ಇಷ್ಟು ಹಣ ನೀಡದೇ ಇದ್ದಲ್ಲಿ ಕಡಾ ಖಂಡಿತವಾಗಿ ನಿಮ್ಮ ಮಾಸಾಶನ ಪತ್ರಗಳನ್ನು ಮಾಡಲಾಗುವುದಿಲ್ಲ ಎಂದು ಉತ್ತರಿಸುವರು ಎಂದು ಜನ ಸಾಮಾನ್ಯರ ನೋವಾಗಿದೆ ಎಂದು ಆರ್. ಕೆ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

CHETAN KENDULI

ತಹಶೀಲ್ದಾರ್ ಕಾರ್ಯಾಲಯದ ಯಾರೇ ಇರಲಿ ಒಬ್ಬ ಮನುಷ್ಯ 1 ಅರ್ಜಿ ಹಾಕಬೇಕೆಂದರೆ ಎಲ್ಲಾ ರೀತಿಯಲ್ಲಿ ಡಾಕ್ಯುಮೆಂಟನ್ನು ಚೆಕ್ ಮಾಡಿ ಅರ್ಜಿ ಹಾಕಲಾಗುತ್ತದೆ. ಆದರೆ ನಮ್ಮ ಮಸ್ಕಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಗಂಗಪ್ಪನವರು ಅವರ ಆಪ್ತರು ಯಾರೋ ಒಬ್ಬ ವ್ಯಕ್ತಿ ಡಾಕ್ಯುಮೆಂಟನ್ನು ಹಾಡಹಗಲೇ ಕಂತೆಕಂತೆ ಹೊರಗಡೆ ತಂದು ಅಪ್ಡೇಟ್ ಮಾಡ್ತಾ ಇದ್ದಾರೆ. ಈ ಕಾಗದ ಪತ್ರವನ್ನು ಹೊರಗಡೆ ತರಲು ಮಸ್ಕಿ ವಿಎ ಗಂಗಪ್ಪನವರ ಕುಮ್ಮಕ್ಕಿದೆ ಇವರನ್ನು ಕೂಡಲೇ ಮಸ್ಕಿಯ ತಹಶೀಲ್ದಾರರಾದ ಕವಿತಾ.ಆರ್ ಇವರು ಜನಸಾಮಾನ್ಯರ ನಡುವೆ ಚೆಲ್ಲಾಟವಾಡುತ್ತಿರುವ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡು ಕಂದಾಯ ಇಲಾಖೆಗೆ ವಚನ ಭ್ರಷ್ಟ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯನ್ನು ಅಮಾನತು ಮಾಡಬೇಕು. ಒಂದು ವೇಳೆ ಅಮಾನತು ಮಾಡದೇ ಹೋದ ಪಕ್ಷದಲ್ಲಿ ನಿಮ್ಮ ಕಾರ್ಯಾಲಯದ ಮುಂಭಾಗದಲ್ಲಿಯೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಆರ್. ಕೆ ನಾಯಕ ರವರು ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಸಿದ್ದಾರೆ.

Be the first to comment

Leave a Reply

Your email address will not be published.


*