KGF-2 Review : ತಾಯಿಗೆ ಕೊಟ್ಟ ಮಾತಿಗಾಗಿ ಮುಂದುವರೆದ ರಾಕಿ ರಕ್ತಚರಿತ್ರೆ..

ವರದಿ ಆಕಾಶ್ ಚಲವಾದಿ ಬೆಂಗಳೂರು ಹೆಡ್

ರಾಜ್ಯ ಸುದ್ದಿಗಳು 

ಬೆಂಗಳೂರು 

ಯಾವ್ದೆ ಸಿನಿಮಾ ನೋಡೋಕೆ ಹೋಗೋವಾಗ ಎಕ್ಸ್​ಪೆಕ್ಟೇಷನ್​​​ ಇಟ್ಕೊಬಾರ್ದು ಅಂತಾರೆ. ಆದ್ರೆ, ಕೆಜಿಎಫ್​ ಚಾಪ್ಟರ್​-2 ನೋಡೋಕೆ ಎಷ್ಟೇ ಎಕ್ಸ್​ಪೆಕ್ಟೇಷನ್​ ಇಟ್ಕೊಂಡು ಹೋದ್ರು, ಅದನ್ನೆಲ್ಲಾ ಮೀರಿ ಸಿನಿಮಾ ನಿಮ್ಮನ್ನ ಎಂಟರ್​​ಟೈನ್​ ಮಾಡುತ್ತೆ. ಯಾಕಂದ್ರೆ, ಕೆಜಿಫ್​​ ಫಸ್ಟ್​​ ಚಾಪ್ಟರ್​ಗಿಂತ ಸೆಕೆಂಡ್​ ಚಾಪ್ಟರ್​​ ಸಿಕ್ಕಾಪಟ್ಟೆ ದೊಡ್ಡ ಸಿನಿಮಾ. ಮೇಕಿಂಗ್​, ಪರ್ಫಾರ್ಮೆನ್ಸ್​, ಸ್ಟಾರ್​​ಕಾಸ್ಟ್, ಕ್ಯಾನ್ವಾಸ್​​​ ಎಲ್ಲಾ ವಿಭಾಗದಲ್ಲೂ ಇದು ಅದಕ್ಕಿಂತ ಹಲವು ಪಟ್ಟು ದೊಡ್ಡ ಸಿನಿಮಾ. ಅದೇ ಕಾರಣಕ್ಕೆ ಸಿನಿಮಾ ಪ್ರತಿಯೊಬ್ಬರಿಗೂ ಹೊಸ ಅನುಭವ ನೀಡ್ತಿದೆ. ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೆ.

CHETAN KENDULI

 

ಚಿತ್ರ : KGF ಚಾಪ್ಟರ್-2

ನಿರ್ದೇಶನ : ಪ್ರಶಾಂತ್​ ನೀಲ್

ನಿರ್ಮಾಣ : ವಿಜಯ್​ ಕಿರಗಂದೂರ್ (ಹೊಂಬಾಳೆ ಫಿಲ್ಮ್ಸ್)

ಪಾತ್ರವರ್ಗ: ​​​​​ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್​​ ರೈ, ಈಶ್ವರಿ ರಾವ್, ರಾವು ರಮೇಶ್, ಮಾಳವಿಕಾ ಅವಿನಾಶ್​, ವಿಶಿಷ್ಠ ಸಿಂಹ ಮುಂತಾದವರು.

ಮಾರ್ಕ್ಸ್: 3.5/5

ರೇಟಿಂಗ್ :

ಫಸ್ಟ್​ ಚಾಪ್ಟರ್​​ನಲ್ಲಿ ಗರುಡ ಸತ್ತಮೇಲೆ ನರಾಚಿಯಲ್ಲಿ ಏನೇನಾಯ್ತು..? ರಾಕಿ ಭಾಯ್​ಗೆ ಅಧೀರನಿಂದ ಎದುರಾದ ಸಂಕಷ್ಟ ಏನು..? ರಾಕಿ ಹೇಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ..? ಪ್ರಧಾನಿ ರಮಿಕಾ ಸೇನ್​​​ನ ಕ್ರಿಮಿನಲ್​ ರಾಕಿ ಎದುರು ಹಾಕಿಕೊಂಡಿದ್ಯಾಕೆ..? ರೀನಾ ದೇಸಾಯಿನ ಮದುವೆ ಆಗ್ಬೇಕು ಅಂದುಕೊಂಡಿದ್ದ ಕಮಲ್​ ಕಥೆ ಏನಾಯ್ತು..? ನರಾಚಿಯ ತ್ರಿ ಬೈ ನೈನ್ ಸ್ಟ್ರಾಟಜಿ ತಿಳ್ಕೊಂಡ ರಾಕಿ ಮಾಡಿದ್ದೇನು..? ಅಧೀರನಿಂದ ಪೆಟ್ಟು ತಿಂದ ರಾಕಿ ದುಬೈಗೆ ಓಡಿ ಹೋಗಿದ್ದು ನಿಜಾನಾ..? ಅಷ್ಟಕ್ಕೂ ಶಾಂತಮ್ಮ ಮಗನ ಬಗ್ಗೆ ಕಂಡ ಕನಸೇನು..? ಶೇಖರಿಸಿದ ಬಂಗಾರವನ್ನೆಲ್ಲಾ ರಾಕಿ ಏನ್​ ಮಾಡ್ದ..? ಅಷ್ಟಕ್ಕೂ ಕೆಜಿಎಫ್​​​ ಸಿನಿಮಾ ಮೇನ್​​ ವಿಲನ್​ ಯಾರು..? ಅಬ್ಬಬ್ಬಾ ಈ ಪ್ರಶ್ನೆಗಳೆಲ್ಲಾ ಎಷ್ಟು ಇಂಟ್ರೆಸ್ಟಿಂಗ್​ ಅಲ್ವಾ..? ಆ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.

3 ವರ್ಷಗಳ ಹಿಂದೆ ತೆರೆಗಪ್ಪಳಿಸಿದ ಕೆಜಿಎಫ್​ ಸಿನಿಮಾ ಮ್ಯಾಜಿಕ್​​ ಕಣ್ಣ ಮುಂದಿದೆ. ಹೆಜ್ಜೆ ಹೆಜ್ಜೆಗೂ ಎಲಿವೇಟ್​ ಆದ ಹೀರೋಯಿಸಂ, ತಾಯಿ ಹೇಳಿದ ಮಾತುಗಳು, ಆ ಮಾತುಗಳ ಪ್ರಭಾವದಿಂದ ಬೆಳೆದ ಹುಡುಗ, ಹೀಗೆ ಕಥೆ ಸಾಗಿತ್ತು.. ಚಾಪ್ಟರ್​​-2 ಅದಕ್ಕಿಂತ ಬಹಳ ದೊಡ್ಡ ಸಿನಿಮಾ. ಗರುಡ ಸತ್ತ ಮೇಲೆ ನರಾಚಿಗೆ ರಾಕಿನೇ ನಾಯಕ. ಆತನಿಗೆ ಸುಫಾರಿ ಕೊಟ್ಟವರೆಲ್ಲಾ ಈಗ ಪಾರ್ಟ್ನರ್ಸ್​ ಆಗಿದ್ದಾರೆ. ಅಲ್ಲಿಂದ ಚಾಪ್ಟರ್​-2 ಕಥೆ ಶುರುವಾಗುತ್ತೆ. ಆನಂದ್​ ಇಂಗಳಗಿ ಬದ್ಲು ಈ ಬಾರಿ ಅವ್ರ ಮಗ ವಿಜಯೇಂದ್ರ ಇಂಗಳಗಿ, ರಾಕಿಯ ರಕ್ತ ಚರಿತ್ರೆ ಬಿಚ್ಚಿಡುತ್ತಾ ಹೋಗ್ತಾರೆ.

KGF​​- 2 ಕಥೆಯೇನು..? 

ಮೊದಲೇ ಚಾಣಾಕ್ಷನಾಗಿದ್ದ ರಾಕಿ, ಗರುಡ ಸತ್ತಮೇಲೆ ವರಸೆ ಮತ್ತಷ್ಟು ಬದಲಿಸಿದ್ದಾನೆ. ಹಾಸಿಗೆ ಇದ್ದಷ್ಟು ಕಾಲು ಚಾಚುವ ಜಾಯಮಾನ ಅವನದ್ದಲ್ಲ, ಹಾಸಿಗೆಯನ್ನೇ ವಿಸ್ತರಿಸಿಕೊಳ್ಳುವವನು. ಅದಕ್ಕಾಗಿ ಏನ್​ ಮಾಡೋಕು ಹಿಂದು ಮುಂದು ನೋಡುವವನಲ್ಲ. ಚಿನ್ನದ ಮೇಲಿನ ವ್ಯಾಮೋಹವೂ ಹೆಚ್ಚಾಗಿದೆ. ಅಧೀರ ಅಷ್ಟೇ ಅಲ್ಲ, ಇಡೀ ಭಾರತ ಸರ್ಕಾರ ಎದುರು ನಿಂತ್ರು, ಅವನ ಆರ್ಭಟವನ್ನ ತಡೆಯೋಕೆ ಆಗೋದಿಲ್ಲ.

ಕಥೆ ಬಗ್ಗೆ ಹೇಳೋದಾದ್ರೆ, ಗರುಡನ ಕೊಂದ ರಾಕಿ, ನರಾಚಿ ಚಿನ್ನದ ಸಾಮ್ರಾಜ್ಯಕ್ಕೆ ಅಧಿಪತಿ ಆಗಿದ್ದಾನೆ. ಆದ್ರೆ, ಸುತ್ತಾ ಇರುವ ವೈರಿಗಳನ್ನು ಮಟ್ಟ ಹಾಕಿ ತನ್ನ ಗುರಿ ತಲುಪೋದು ಅಷ್ಟು ಸುಲಭವಲ್ಲ. ಈ ಹಾದಿಯಲ್ಲಿ ಅಧೀರ ಮಗ್ಗಲ ಮುಳ್ಳಾಗಿದ್ದಾನೆ..ತನ್ನ ಕಾರ್ಯ ಸಾಧನೆಗೆ ಏನ್​ ಬೇಕಾದ್ರು ಮಾಡ್ತಾನೆ ರಾಕಿ.. ಯಾರನ್ನು ಕೊಲ್ಲೋಕು ಸೈ, ಯಾರೊಟ್ಟಿಗೆ ಕೈ ಜೋಡಿಸೋಕು ಸೈ, ಕೊನೆಗೆ ಇಡೀ ಕೇಂದ್ರ ಸರ್ಕಾರವನ್ನೇ ಕೊಂಡುಕೊಳ್ಳಲು ಹಿಂದುಮುಂದು ನೋಡೋದಿಲ್ಲ. ಚಿನ್ನದ ದಾಹಕ್ಕೆ ಏನೆಲ್ಲಾ ಮಾಡ್ತಾನೆ ರಾಕಿ..? ತನ್ನ ಕಾರ್ಯ ಸಾಧನೆಗೆ ಕೈ ಜೋಡಿಸಿದ ಗಣಿ ಕಾರ್ಮಿಕರಿಗಾಗಿ ರಾಕಿ ಏನ್​ ಮಾಡ್ದ..? ಪ್ರಪಂಚದಲ್ಲಿ ಯಾರ ಬಳಿಯೂ ಇಷ್ಟದಷ್ಟು ಚಿನ್ನ ಸಂಪಾದಿಸಿದ ರಾಕಿ ಅದನ್ನು ಏನ್​ ಮಾಡ್ದ..? ಅನ್ನೋದನ್ನ ತೆರೆಮೇಲೆ ನೋಡ್ಬೇಕು

ಆರ್ಟಿಸ್ಟ್​ ಪರ್ಫಾರ್ಮೆನ್ಸ್​ ಹೇಗಿದೆ..?

ಪರ್ಫಾರ್ಮೆನ್ಸ್​​ ವಿಚಾರಕ್ಕೆ ಬಂದ್ರೆ, ರಾಕಿಂಗ್​ ಸ್ಟಾರ್​ ಯಶ್​​ ಒನ್​ ಮ್ಯಾನ್​ ಶೋ ಅನ್ಬೇಕು. ಕಿಲ್ಲಿಂಗ್​ ಲುಕ್ಸ್​​, ಸ್ಟೈಲ್, ಸ್ವಾಗ್​​ ಅಬ್ಬಬ್ಬಾ ಭಯಂಕರ. ಗಡ್ಡ, ಹೇರ್​ ಸ್ಟೈಲ್, ಸೂಟು ಬೂಟು, ಆ್ಯಕ್ಷನ್​​​ ಸೀನ್ಸ್​​ನಲ್ಲಿ ಯಶ್ ಅಬ್ಬರಿಸಿರೋ ಪರಿ ಹುಬ್ಬೇರಿಸುವಂತಿದೆ. ಫಸ್ಟ್​​ ಚಾಪ್ಟರ್​ನಲ್ಲಿ ಯಶ್​​ಪರ್ಫಾರ್ಮೆನ್ಸ್​ಗೆ ಅಭಿಮಾನಿಗಳಾದವರು, ಈ ಬಾರಿ ವೀರಾಭಿಮಾನಿಗಳಾಗಿ ಬಿಡ್ತಾರೆ. ರಾಕಿ ಪಾತ್ರದಲ್ಲಿ ಮತ್ಯಾರನ್ನು ಊಹಿಸಿಕೊಳ್ಳದ ಮಟ್ಟಿಗೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಫಸ್ಟ್​ ಪಾರ್ಟ್​ನಲ್ಲಿ ಕೆಲವೇ ಸೀನ್​ಗಳಲ್ಲಿ ಮಿಂಚಿದ್ದ, ನಾಯಕಿ ಶ್ರೀನಿಧಿ ಶೆಟ್ಟಿಗೆ ಇಲ್ಲಿ ಜಾಸ್ತಿ ಸ್ಕ್ರೀನ್​ ಸ್ಪೇಸ್​ ಇದೆ.. ಅಧೀರನ ಅವತಾರದಲ್ಲಿ ಸಂಜಯ್​ ದತ್​ ಭಯ ಹುಟ್ಟಿಸ್ತಾರೆ.. ವೈಕಿಂಗ್ಸ್​​​​​ ರೀತಿ ಕಾಸ್ಟ್ಯೂಮ್​​, ಟ್ಯಾಟು, ಲುಕ್ಸ್​​​​ ಸಿಂಪ್ಲಿ ಸೂಪರ್​.. ಇನ್ನು ಕೆಜಿಎಫ್​​ ಧೂಳಿನಲ್ಲಿ ಸಂಜಯ್​ ದತ್​​​​ ಆ್ಯಕ್ಷನ್​ ಸೀಕ್ವೆನ್ಸ್​​ಗಳಲ್ಲೂ ಡ್ಯೂಪ್​ ಇಲ್ಲದೇ ನಟಿಸಿ, ಸೈ ಅನ್ನಿಸಿಕೊಂಡಿದ್ದಾರೆ.. ಆದ್ರೆ, ಅವ್ರ ರಗಡ್​ ಪಾತ್ರಕ್ಕೆ ದೇಹ ಅಷ್ಟಾಗಿ ಸಪೋರ್ಟ್​ ಮಾಡಿಲ್ಲ ಅನ್ಸತ್ತೆ.

ಸಂಜಯ್​ ದತ್​ಗಿಂದ ಚಾಪ್ಟರ್​​-2ನಲ್ಲಿ ರಮಿಕಾ ಸೇನ್​​ ರವೀನಾ ಟಂಡನ್​​​ ಹೆಚ್ಚು ಮಾರ್ಕ್ಸ್​​ ಗಿಟ್ಟಿಸಿಬಿಡ್ತಾರೆ. ದೇಶದ ಪ್ರಧಾನಿ ಪಾತ್ರದಲ್ಲಿ ಅವ್ರ ಲುಕ್ಸ್​​, ಕಾಸ್ಟ್ಯೂಮ್, ಪರ್ಫಾರ್ಮೆನ್ಸ್​​ ಹೈಲೆಟ್​ ಅನ್ನಿಸಿಕೊಂಡಿದೆ. ಇನ್ನು ಸಿಬಿಐ ಆಫೀಸರ್​ ಪಾತ್ರದಲ್ಲಿ ರಾವು​ ರಮೇಶ್​, ರಾಕಿಗಾಗಿ ಪ್ರಾಣತ್ಯಾಗ ಮಾಡುವ ಯುವಕನ ತಾಯಿ ಪಾತ್ರದಲ್ಲಿ ಈಶ್ವರಿ ರಾವ್​​ ಪ್ರೇಕ್ಷಕರ ಮನಗೆಲ್ತಾರೆ. ಇನ್ನುಳಿದಂತೆ ಪ್ರೀಕ್ವೆಲ್​​ನಲ್ಲಿದ್ದ ಕಲಾವಿದರು ಸೀಕ್ವೆಲ್​ನಲ್ಲೂ ಅದೇ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ.

ಟೆಕ್ನಿಕಲಿ ಸಿಕ್ಕಾಪಟ್ಟೆ ಸ್ಟ್ರಾಂಗ್​ ಆಗಿರೋ ಸಿನಿಮಾ ಕೆಜಿಎಫ್​-2. ಭುವನ್​ ಗೌಡ ಸಿನಿಮಾಟೋಗ್ರಫಿಗೆ ಸಿನಿರಸಿಕರು ಫಿದಾ ಆಗೋಗಿದ್ದಾರೆ. ಸಾಂಗ್ಸ್​ ಮಾತ್ರವಲ್ಲ ಬಿಜಿಎಂನಲ್ಲೂ ಚಮತ್ಕಾ ಮಾಡಿದ್ದಾರೆ ರವಿಬಸ್ರೂರು. ರಣ ರಣ ಸುಲ್ತಾನ ಹಾಡಂತೂ ಸಿಲ್ವರ್​ ಸ್ಕ್ರೀನ್​ಗೆ ಕಿಚ್ಚುವಂತಿದೆ. ಪ್ರಶಾಂತ್​ ನೀಲ್​ ಡೈರೆಕ್ಷನ್​ ಬಗ್ಗೆ ನಿಮಗೆ ಹೇಳಲೇಬೇಕು. ಇಡೀ ಕೆಜಿಎಫ್​ ಸಿನಿಮಾ ವಿಷನ್​ ಅವ್ರದ್ದೇ. ಅದನ್ನ ತೆರೆಮೇಲೆ ಸೊಗಸಾಗಿ ತರುವಲ್ಲಿ ಅವ್ರು ಗೆದ್ದಿದ್ದಾರೆ. ಎಷ್ಟೇ ನಿರೀಕ್ಷೆ, ಒತ್ತಡ ಇದ್ರು ಅದನ್ನೆಲ್ಲಾ ಮೀರಿ ಅದ್ಬುತ ಪ್ರಾಡೆಕ್ಟ್​ ಕೊಟ್ಟಿದ್ದಾರೆ. ಅವ್ರ ನಿರ್ದೇಶನಕ್ಕೆ ಹ್ಯಾಟ್ಸಾಫ್​ ಹೇಳಲೇಬೇಕು. ಯಾವುದೇ ಕಾರಣಕ್ಕೆ ಸಿನಿಮಾ ಮಿಸ್​ ಮಾಡಿಕೊಳ್ಳಬೇಕು.. ಪಕ್ಕಾ ಪೈಸಾ ವಸೂಲ್​ ಸಿನಿಮಾ ಕೆಜಿಎಫ್ ಚಾಪ್ಟರ್​-2.

Be the first to comment

Leave a Reply

Your email address will not be published.


*