ಸಂವಿಧಾನ ಶಿಲ್ಪಿ ಜನ್ಮದಿನವನ್ನು ಜಾತ್ಯತೀತ ದಿನವನ್ನಾಗಿ ಆಚರಣೆ .ಆರ್.ಮಾನಸಯ್ಯಾ.

ವರದಿ : ಗೌತಮ ಚವ್ಹಾಣ ಲಿಂಗಸ್ಗೂರ

ಲಿಂಗಸೂಗೂರು ವರದಿ.ಲಿಂಗಸುಗೂರ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 131 ನೇ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ವಿಜೃಂಭಣೆಯಿಂದ ಬಾಬಾ ಸಾಹೇಬರ ಫೋಟೋವನ್ನು ಲಿಂಗಸುಗೂರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮರೆವಣಿಗೆ ಮೂಲಕ ಜಯಂತಿಯನ್ನು ಆಚರಿಸಲಾಯಿತು.

ಭಾರತ ಒಂದು ಜಾತ್ಯಾತೀತ ರಾಷ್ಟ್ರ, ಗಣ ತಂತ್ರ ರಾಷ್ಟ್ರ, ಪ್ರಜಾಪ್ರಭುತ್ವ ರಾಷ್ಟ್ರ, ಸಮಾಜವಾದಿ ರಾಷ್ಟ್ರವಾಗಿದೆ. ಬಾಬಾ ಸಾಹೇಬ ಅಂಬೇಡ್ಕರ್ ಜನ್ಮ ದಿನವಾದ ಇಂದು ಏ.14ನ್ನು ಜಾತಿ ನಿರ್ಮೂಲನೆ ದಿನವನ್ನಾಗಿ ಆಚರಿಸಲು ಆರ್‌. ಮಾನಸಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು ಲಿಂಗಸುಗೂರ ಪಟ್ಟಣದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ತಾಲೂಕು ಆಡಳಿತ ಆಯೋಜಿಸಿದ ಅಂಬೇಡ್ಕರ್ 131ನೇ ಜಯಂತ್ಯೋ ತ್ಸವ ಕಾರ್ಯಕ್ರಮ ಉಪನ್ಯಾಸ ನೀಡಿ
ಮಾತನಾಡಿದ ಅವರು, ಧರ್ಮವನ್ನು ರಾಜಕಾರಣದಲ್ಲಿ ಸೇರಿಸಬಾರದು ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನದಿಂದ ಕೇವಲ ಅಸ್ಪೃಶ್ಯರಿಗೆ ಲಾಭವಾಗಲ್ಲ, ಶೂದ್ರ ಅತಿಶೂದ್ರರು ಸಹ ಸಂವಿಧಾನದಿಂದ ಹಲವು ಲಾಭ ಪಡೆಯುತ್ತಿದ್ದಾರೆ.

ಬದಲಿಸಬೇಕಾಗಿದೆ ಜಾತಿಯತೆಯನ್ನು ನಿರ್ಮೂಲನೆ ಮಾಡಿದ ತಕ್ಷಣವೇ ಮೀಸಲಾತಿ ರದ್ದಗಾಲಿ ಬಗ್ಗೆ ಅತಿ ಹೆಚ್ಚು ಅಧ್ಯಯನ ಮಾಡಿ ಹಲವಾರು ಯೋಜನೆಗಳಲ್ಲಿ ನಮ್ಮ ತಕರಾರು ಇಲ್ಲ ಎಂದರು. ಸಹಾಯಕ ಆಯುಕ್ತರು ಮಾತನಾಡಿ ಬಾಬಾ ಸಾಹೇಬ ಅಂಬೇಡ್ಕರ್‌ ನೀರಾವರಿ ಯೋಜನೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದು
. ಅದರ ಪರಿಣಮವಾಗಿ ಏ.14ನ್ನು ಜಲದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಶಾಸಕ ಡಿ ಎಸ್ ಹೂಲಗೇರಿ ಮಾತನಾಡಿದರು. ವಿಧಾನ ಪರಿಷತ್ ಶರಣಗೌಡ ಪಾಟೀಲ್ ಬಯ್ಯಾಪುರು, ಪುರಸಭೆ ಅಧ್ಯಕ್ಷೆ ಸುನೀತಾ ಕಂಭಾವಿ, ಮಹಾಂತೇಶ ಪಾಟೀಲ್, ಶಶಿಧರ ಪಾಟೀಲ್, ಜನಕವಿ ದಾನಪ್ಪ ನಿಲೋಗಲ್, ಪಾಮಯ್ಯ ಮುರಾರಿ, ಲಿಂಗಪ್ಪ ಪರಂಗಿ, ಹೆಚ್.ಬಿ.ಮುರಾರಿ, ತಹಶೀಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ನರಸಪ್ಪ ತಹಶೀಲ್ದಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

Be the first to comment

Leave a Reply

Your email address will not be published.


*