ರಾಜ್ಯ ಸುದ್ದಿಗಳು
ದೇವನಹಳ್ಳಿ
ಮನುಷ್ಯನ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಮಾರಕವಾಗುತ್ತಿರುವ ಹಲವಾರು ಸಂಗತಿಗಳಲ್ಲಿ ಕಲ್ಲು ಗಣಿಗಾರಿಕೆಯಿಂದ ಹೊರಸೂಸುವ ಧೂಳಿನ ಕಣಗಳು ನೇರವಾಗಿ ಮನುಕುಲಕ್ಕೆ ಮಾರಕವಾಗುವ ಪರಿಸ್ಥಿತಿ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ತೈಲಗೆರೆ, ಮೀಸಗಾನಹಳ್ಳಿ ಸೇರಿದಂತೆ ಸುತ್ತಮುತ್ತಲು ನಡೆಯುತ್ತಿರುವ ಗಣಿಗಾರಿಕೆ ಗ್ರಾಮೀಣ ಜನರ ನಿದ್ದೆ ಕೆಡಿಸಿದೆ.ದೇವನಹಳ್ಳಿ ತಾಲೂಕಿನಲ್ಲಿ ಸಾಕಷ್ಟು ರೈತರು ಕೃಷಿ ಮತ್ತು ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಕೊಯಿರ ಬಂಡೆ ಹಾಗೂ ಇತರೆ ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ಯತೇಚ್ಛವಾಗಿ ನಡೆಯುತ್ತಿದೆ. ಅನುಮತಿ ಪಡೆದುಕೊಂಡಿದ್ದರೂ ಸಹ ಗಣಿ ಮಾಲೀಕರು ಸುತ್ತಮುತ್ತಲಿನ ಗ್ರಾಮಗಳಿಗೆ ಧೂಳು ಹೋಗದಂತೆ ಕ್ರಮಕೈಗೊಳ್ಳದಿರುವುದು ಹಾಗೂ ಸರಿಯಾದ ರೀತಿಯಲ್ಲಿ ಕಾನೂನು ಪಾಲನೆ ಮಾಡದಿರುವುದು ಕಲ್ಲುಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಆಸುಪಾಸಿನ ಜನರಿಗೆ ಅನಾರೋಗ್ಯ ಭೀತಿ ಕಾಡತೊಡಗಿದೆ.
ಕಲ್ಲು ಕ್ವಾರಿಗಳು ಕಣ್ಣಿಗೆ ಕಾಣದ ಸಣ್ಣ ಧೂಳಿನ ಕಣಗಳನ್ನು ಸೃಷ್ಟಿಸುತ್ತಿರುವುದು ವೈಜ್ಞಾನಿಕವಾಗಿ ಸಿಲಿಕೋಸಿಸ್‌ಗೆ ಕಾರಣವಾಗಬಹುದು. ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರವ ಹಾಗೂ ಗುಣಪಡಿಸಲಾಗದ ಶ್ವಾಸಕೋಶದ ಕಾಯಿಲೆ, ಹೃದಯ ಕಾಯಿಲೆ, ಪಾರ್ಶ್ವವಾಯು ಕಾಯಿಲೆಗಳು ಸೇರಿದಂತೆ ಹಲವಾರು ರೀತಿಯ ಕಾಯಿಲೆಗಳು ಧೂಳಿನಿಂದ ಅನಾರೋಗ್ಯಕ್ಕೆ ತುತ್ತಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಬೆಟ್ಟದಲ್ಲಿ ನಡೆಯುವ ಗಣಿಗಾರಿಕೆ ಈಗಾಗಲೇ ಸುಮಾರು ೨೦೦ಕ್ಕೂ ಹೆಚ್ಚು ಅಡಿಗಳಷ್ಟು ಆಳ ಇಳಿಸಿದ್ದರೂ ಸಹ ಸ್ಪೋಟಿಸುವ ಕಲ್ಲಿನ ಕಣಗಳು ಮೋಡದಂತೆ ಬೆಳ್ಳಂ ಬೆಳಿಗ್ಗೆ ಗೋಚರವಾಗುತ್ತಿರುವುದು ಸಾಮಾನ್ಯ ಜನರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಲ್ಲದೆ, ಚಿಕ್ಕ ಮಕ್ಕಳು, ವೃದ್ಧರು, ವಯೋವೃದ್ಧರಿಗೆ ಇದೊಂದು ಶಾಪವಾಗಿ ಪರಿಣಮಿಸಿದೆ. ಕೂಡಲೇ ಮನುಕುಲಕ್ಕೆ ಗಾಸಿಯನ್ನುಂಟು ಮಾಡುವ ಗಣಿಗಾರಿಕೆ, ಕ್ರಷರ್‌ಗಳನ್ನು ಕೂಡಲೇ ನಿಷೇಧ ಮಾಡಬೇಕು ಎಂದು ಗ್ರಾಮೀಣ ಭಾಗದ ಜನರು ಒತ್ತಾಯಿಸುತ್ತಿದ್ದಾರೆ.
ಕಲ್ಲುಗಳನ್ನು ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಕ್ಕೂ ಬಳಸಬೇಕಾಗುತ್ತದೆ. ಆದರೆ, ಆರೋಗ್ಯದ ಮೇಲೂ ನಿಗಾ ವಹಿಸುವ ಅನಿವಾರ್ಯತೆ ಇದೆ. ಬಂಡೆಗಳನ್ನು ಸಣ್ಣ ತುಂಡುಗಳಾಗಿ ಒಡೆಯಲಾಗುತ್ತಿದೆ ಮತ್ತು ಕಲ್ಲಿನ ಕ್ರಷರ್, ಪುಡಿ ಮಾಡುವ ಬಂಡೆಗಳು ದೊಡ್ಡ ಪ್ರಮಾಣದ ಧೂಳಿಗೆ ಕಾರಣವಾಗುತ್ತಿದೆ. ಇದು ಗಾಳಿಯಲ್ಲಿ ತೇಲುತ್ತಿರುವುದರಿಂದ ಮನುಷ್ಯನ ಶ್ವಾಸಕಾಂಗಕ್ಕೆ ನೇರವಾಗಿ ಬಲು ಸಲೀಸಾಗಿ ಸೂಕ್ಷ್ಮಾಣುಧೂಳುಗಳು ಉಸಿರಾಟದ ಪ್ರಕ್ರಿಯೆಯಲ್ಲಿ ಬೆರೆಯುವುದರಿಂದ ಆರೋಗ್ಯಕ್ಕೆ ಬಲು ಅಪಾಯಕಾರಿಯಾಗಲಿದೆ. ಮುಂದೊಂದು ದಿನ ಇದೇ ಗಣಿಗಾರಿಕೆ ಇಡೀ ಮನುಕುಲಕ್ಕೆ ತುತ್ತಾಗುವುದರಲ್ಲಿ ಎರಡು ಮಾತಿಲ್ಲ. ಇದೆಲ್ಲಾ ತಿಳಿದಿರುವ ಅಧಿಕಾರಿಗಳು ಸಹ ಏನು ಅರಿಯದಂತೆ ಗಣಿಗಾರಿಕೆಗೆ ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಕೊಯಿರ ರೈತ ಚಿಕ್ಕೇಗೌಡ ಬೇಸರ ವ್ಯಕ್ತಪಡಿಸಿದರು.
Be the first to comment