ಜಿಲ್ಲಾ ಸುದ್ದಿ
ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮದ ಬಾಲಕಿಯೊಬ್ಬಳು ಪಟ್ಟಣದ ವೈದ್ಯನೊಬ್ಬನ ನಿರ್ಲಕ್ಷ್ಯತನದಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.ಚವಡಳ್ಳಿ ಗ್ರಾಮದ ಲಕ್ಷ್ಮಣ ಕೋಣನಕೇರಿ ಎಂಬುವರ ಪುತ್ರಿ ದೀಕ್ಷಾ(6) ಬಾಲಕಿ ಜೂನ 6 ರಂದು ಆಕಸ್ಮಿಕವಾಗಿ ತಿಳಿಯದೇ ಕಳೆನಾಶಕ ವಿಷವನ್ನು ಕುಡಿದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಶುಕ್ರವಾರ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಕುರಿತು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ವಿವರ: ಜೂನ 6 ರಂದು ಬಾಲಕಿಗೆ ತಿಳಿಯದೆ ಕಳೆನಾಶ ಔಷಧಿ ಕುಡಿದು ಅಸ್ವಸ್ಥಳಾದ ಈಕೆಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ಖಾಸಗಿ ಕ್ಲಿನಿಕಿಗೆ ಕರೆದುಕೊಂಡು ಬಂದ ಪಾಲಕರು, ನಮ್ಮ ಮಗಳು ಪಾನಿಯಾ ಎಂದು ತಿಳಿದು ಕಳೆನಾಶಕ ಕುಡಿದಿದ್ದಾಳೆ ಎಂದು ತಿಳಿಸಿದ್ದಾರೆ.
ಆಗ ಆ ವೈದ್ಯ ಡ್ರಿಪ್ಸ್ ಹಾಕಿ ಪ್ರಥಮ ಚಿಕಿತ್ಸೆ ನೀಡಿ ಬಾಲಕಿಗೆ ಮನೆಗೆ ಕಳುಹಿಸಿದ್ದಾನೆ. ವೈದ್ಯನ ಮಾತು ಕೇಳಿ ಪಾಲಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅದೇ ದಿನ ಬಾಲಕಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿ ತೊಡಗಿದ್ದಾಗ ಮತ್ತೇ ಅದೇ ವೈದ್ಯರು ಬಳಿ ಬಂದಿದ್ದಾರೆ. ಹೀಗೆ ಜೂ.6 ರಿಂದ 8ವರೆಗೆ ಬಾಲಕಿಗೆ ಚಿಕಿತ್ಸೆ ನೀಡಿ 2 ಗಂಟೆಗಳ ವರೆಗೆ ಕ್ಲಿನಿಕ್‍ನಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಿ ನಿಮ್ಮ ಮಗಳಿಗೆ ಏನು ಆಗುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದನು ಎನ್ನಲಾಗಿದೆ.ತದನಂತರ ದಿನ ಕಳದಂತೆ ಬಾಲಕಿಯ ಹೊಟ್ಟೆ ನೋವಿನ ನರಳಾಟ ನೋಡಲಾರದೆ ಪಾಲಕರು ಬೇರೆ ವೈದ್ಯರ ಹತ್ತಿರ ತೆರಳಿ ಆದ ಘಟನೆ ಬಗ್ಗೆ ವಿವರವಾಗಿ ಹೇಳಿದ್ದಾರೆ. ಆ ವೈದ್ಯರು, ಆದಷ್ಟು ಬೇಗ ಬಾಲಕಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದು ಹುಬ್ಬಳ್ಳಿ ಕಿಮ್ಸಗೆ ಕರೆದೊಯ್ಯಲು ಸಲಹೆ ನೀಡಿದ್ದಾರೆ. ಅದಾಗಲೇ ಬಾಲಕಿಯ ಆರೋಗ್ಯದ ಸ್ಥಿತಿ ಗಂಭೀರವಾಗತೊಡಗಿತ್ತು. ನಾಲ್ಕು ದಿನದ ನಂತರ ಬಾಲಕಿಯನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಿದರು.
ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಸಾವನ್ನಪ್ಪಿದ್ದಾಳೆ. ಸಕಾಲದಲ್ಲಿ ಬೇಕಾದ ಚಿಕಿತ್ಸೆ ನೀಡಿದ್ದರೆ ನಮ್ಮ ಮಗಳು ಬದುಕುತ್ತಿದ್ದಳು ಅಲ್ಲದೇ ಈ ವೈದ್ಯನ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿಯಿಂದ ಸಾವನ್ನಪ್ಪಿದ್ದಾಳೆ ಎಂದು ಮೃತ ಬಾಲಕಿಯ ಕುಟಂಬದವರು ಆಕ್ರೋಶ ವ್ಯಕ್ತಪಡಿಸಿ ವೈದ್ಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಿದ್ಧರಾಗಿದ್ದೇವೆ ಎಂದು ಮೃತ ಕುಟಂಬದವರು ತಿಳಿಸಿದ್ದಾರೆ
.
Be the first to comment