ರಾಜ್ಯ ಸುದ್ದಿ
ಕಾರವಾರ: ರಾಜ್ಯ ಸರ್ಕಾರ ಕಾಲೇಜು ಪ್ರಾರಂಭಕ್ಕೆ ಸಿದ್ದತೆ ನಡೆಸುತ್ತಿದ್ದು, ಅದಕ್ಕೂ ಮೊದಲು ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಮೊದಲ ಆದ್ಯತೆ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಎಲ್ಲ ಕಡೆ ಲಸಿಕಾಕರಣ ನಡೆಸುತ್ತಿದೆ.
ಜಿಲ್ಲೆಯಲ್ಲೂ ಸೋಮವಾರ 3570 ಡೋಸ್ ಲಸಿಕೆ ಲಭ್ಯವಿದ್ದು, ತಾಲೂಕಿನ ವಿವಿಧ ಕಾಲೇಜುಗಳಲ್ಲಿ ಲಸಿಕಾಭಿಯಾನ ನಡೆಯಲಿದೆ. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಲಸಿಕೆ ಪಡೆದುಕೊಳ್ಳಬೇಕಿದೆ.
ಭಟ್ಕಳದಲ್ಲಿ 500 ಡೋಸ್ ಕೊರೊನಾ ವ್ಯಾಕ್ಸಿನ್ ಲಭ್ಯವಿದ್ದು, ಶೌಕಿ ಬಿ.ಎಡ್ ಕಾಲೇಜು, ಬೀನಾ ವಿದ್ಯಾ ಡಿಗ್ರಿ ಕಾಲೇಜು, ಅಂಜುಮನ್ ಇಂಜಿನೀಯರಿಂಗ್ ಕಾಲೇಜು, ಸಿದ್ದಾರ್ಥ ಡಿಗ್ರಿ ಕಾಲೇಜಿನಲ್ಲಿ ನೀಡಲಾಗುತ್ತದೆ. ಕಾರವಾರದಲ್ಲಿ 120 ವ್ಯಾಕ್ಸಿನೇಷನ್ ಲಭ್ಯವಿದ್ದು, ಮರೀನಾ ಬಯಾಲಜಿ ಕಾಲೇಜ್‍ನಲ್ಲಿ, ಮಾಜಾಳಿ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ, ಕಾಮಧೇನು ಬಿಸಿಎ ಕಾಲೇಜಿನಲ್ಲಿ ನೀಡಲಾಗುತ್ತದೆ. ದಾಂಡೇಲಿಯಲ್ಲಿ 400 ವ್ಯಾಕ್ಸಿನೇಷನ್ ಲಭ್ಯವಿದ್ದು ಆಶಾ ಕಿರಣ ಐಟಿಐ ಕಾಲೇಜು, ಸರ್ಕಾರಿ ಕಾಲೇಜು, ಜನತಾ ವಿದ್ಯಾಲಯದಲ್ಲಿ ವ್ಯಾಕ್ಸಿನ್ ಲಭ್ಯ. ಹೊನ್ನಾವರದಲ್ಲಿ 300 ವ್ಯಾಕ್ಸಿನ್ ಅದನ್ನು ಜೀವನಜ್ಯೋತಿ ಖಾಸಗಿ ಐಟಿಐ ಕಾಲೇಜು, ಸರ್ಕಾರಿ ಐಟಿಐ ಕಾಲೇಜಿನಲ್ಲಿ ನೀಡಲಾಗುತ್ತದೆ. ಶಿರಸಿಯಲ್ಲಿ 800 ವ್ಯಾಕ್ಸಿನ್ ಲಭ್ಯವಿದ್ದು, ಎಂಇಎಸ್ ಆರ್‍ಎನ್‍ಎಸ್ ಕಾಲೇಜಿನಲ್ಲಿ, ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಸರ್ಕಾರಿ ಐಟಿಐ ಕಾಲೇಜು ಬನವಾಸಿ, ಎಂಇಎಸ್ ಐಟಿಐ (ಪ್ರೈ)ಕಾಲೇಜು, ಸತಾವೀರ ಐಟಿಐ ಕಾಲೇಜು, ವಿಶಾಲಾಕ್ಷಿ ಐಟಿಐ ಕಾಲೇಜು ಶಿರಸಿ, ಸರ್ಕಾರಿ ಐಟಿಐ ಕಾಲೇಜು ಬನವಾಸಿ, ಶಾಂತವೀರ ಖಾಸಗಿ ಕಾಲೇಜು ನರೂರು, ವಿಶಾಲಾಕ್ಷಮ್ಮ ಖಾಸಗಿ ಕಾಲೇಜು, ವಿಶ್ವೇಶ್ವರಯ್ಯ ಖಾಸಗಿ ಕಾಲೇಜು ಬನವಾಸಿಯಲ್ಲಿ ನೀಡಲಾಗುತ್ತದೆ. ಯಲ್ಲಾಪುರದಲ್ಲಿ 350 ಕೊರೊನಾ ಲಸಿಕೆ ಲಭ್ಯವಿದ್ದು, ಸರ್ಕಾರಿ ಐಟಿಐ ಕಾಲೇಜಿನಲ್ಲಿ ನೀಡಲಾಗುತ್ತೆ.
ಸಿದ್ದಾಪುರದಲ್ಲಿ 200 ಡೋಸ್ ಲಸಿಕೆಯಿದ್ದು ಸರ್ಕಾರಿ ಐಟಿಐ ಕಾಲೇಜಿನಲ್ಲಿ ನೀಡಲಾಗುತ್ತದೆ. ಅಂಕೋಲಾದಲ್ಲಿ 900 ಲಸಿಕೆಯಿದ್ದು ಸರ್ಕಾರಿ ಕಾಲೇಜಿನಲ್ಲಿ ಮತ್ತು ಕೆಎಲ್‍ಇ ಕಾಲೇಜಿನಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
Be the first to comment