ರಾಜ್ಯ ಸುದ್ದಿಗಳು
ದೇವನಹಳ್ಳಿ
ಪ್ರತಿ ಸಾಮಾನ್ಯ ಪ್ರಜೆಗಳು ನಾಯಕರಂತೆ ದುಡಿಯಬೇಕು. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಒಗ್ಗೂಡಿ ಕೆಲಸ ಮಾಡಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ಆಲೂರುದುದ್ದನಹಳ್ಳಿ ಗ್ರಾಪಂ ಆವರಣದಲ್ಲಿ ೨೦೨೧-೨೨ನೇ ಸಾಲಿನ ಮೊದಲನೇ ಹಂತದ ಗ್ರಾಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಗ್ರಾಪಂ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ೫ಲಕ್ಷ ಅನುದಾನವನ್ನು ನೀಡಲಾಗಿದೆ. ಮತ್ತೊಂದು ಬಾರಿ ೫ಲಕ್ಷ ಅನುದಾನವನ್ನು ನೀಡಲಾಗುತ್ತದೆ. ಈ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಇದೆ. ಅದಕ್ಕೆ ಪರಿಹಾರವನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ. ಚರಂಡಿ, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ಅಧಿಕಾರಿಗಳು ನೀಡಬೇಕು. ಕೆರೆಯ ಹೂಳೆತ್ತುವ ಕಾಮಗಾರಿಗೆ ಬಯಪ್ಪ ಅನುದಾನ ಇದ್ದು, ಅದನ್ನು ತಂದು ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಶಾಲೆ ಜಾಗದ ಖಾತೆ ವಿಚಾರವಾಗಿ ಖಾತೆ ಮಾಡಿಕೊಡಲು ತಾಪಂ ಕಾರ್ಯನಿರ್ವಹಕಾಧಿಕಾರಿಗೆ ಸೂಚನೆ ನೀಡಲಾಗಿದೆ. ಗ್ರಾಮಗಳಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಗಮನಕ್ಕೆ ತಂದರೆ ಅದನ್ನು ಪರಿಹರಿಸಲು ಶ್ರಮಿಸಲಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿಯ ಕಡೆ ಹೆಜ್ಜೆ ಹಾಕುವಂತಾಗಬೇಕು ಎಂದು ಸಲಹೆ ಮಾಡಿದರು. ಇದೇ ಸಂದರ್ಭದಲ್ಲಿ ಅಂಗನವಾಗಿ ಕಾರ್ಯಕರ್ತೆಯರ ಪೋಷಣ್ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ಮಗುವಿಗೆ ಸರಿ(ರಾಗಿ ಗಂಜಿ) ಕುಡಿಸುವುದರ ಮೂಲಕ ಸಭೆಯ ಗಮನಸೆಳೆದರು.
*ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿ*: ಸರಕಾರಿ ಇಲಾಖೆಗಳಲ್ಲಿ ಸರಕಾರದ ವಿವಿಧ ಯೋಜನೆಗಳು ಲಭ್ಯವಿದ್ದು, ಅರ್ಹ ಫಲಾನುಭವಿಗಳು ಸಂಬಂಧಪಟ್ಟ ಇಲಾಖೆಗೆ ಸಂಪರ್ಕಿಸಿ ಸೂಕ್ತ ಮಾಹಿತಿ ಪಡೆದುಕೊಂಡು ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಗ್ರಾಮಸ್ಥರಿಗೆ ಇಲಾಖಾ ಯೋಜನೆಗಳ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.
ಈ ವೇಳೆಯಲ್ಲಿ ಆಲೂರುದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ ರಾಮಣ್ಣ, ಉಪಾಧ್ಯಕ್ಷೆ ಸಿ.ಕಾಂತ ಮುನಿರಾಜು, ಸದಸ್ಯರಾದ ಅಂಬಿಕಪ್ರಭು, ಜಯಲಕ್ಷ್ಮಮ್ಮ, ರಘು.ಆರ್, ಎ.ಮೂರ್ತಿ, ಮೀನಾಕ್ಷಿಕೃಷ್ಣಮೂರ್ತಿ, ಪಿ.ಮುನಿರಾಜು, ಮುನಿನಂಜಪ್ಪ.ಬಿ, ಚಿಕ್ಕಮುನಿಶಾಮಪ್ಪ, ಕೃಷ್ಣಮ್ಮ.ಎನ್.ಯಲ್ಲಪ್ಪ, ಬಿ.ಎ.ಬೈರೇಗೌಡ, ಪಿಡಿಒ ಸುಶೀಲಮ್ಮ.ಎಸ್, ತಾಪಂ ಇಒ ಎಚ್.ಡಿ.ವಸಂತಕುಮಾರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಅಧಿಕಾರಿ ಎನ್.ಸೋಮಶೇಖರ್, ನಾಡಕಚೇರಿಯ ಸಿಬ್ಬಂದಿ ಲಾವಣ್ಯ, ಉಪ ಸಾಮಾಜಿಕ ಅರಣ್ಯಾಧಿಕಾರಿ ಚಿದಾನಂದ್, ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಸತ್ಯನಾರಾಯಣ್, ಸಿಡಿಪಿಒ ರೇಣುಕಾ, ತೋಟಗಾರಿಕೆ ಇಲಾಖೆಯ ಪೂರ್ಣಿಮಾ, ಬೆಸ್ಕಾಂ ಅಧಿಕಾರಿ ಮಲ್ಲಿಕಾರ್ಜುನ್, ಸಿಆರ್‌ಪಿ ಜ್ಯೋತಿಕುಮಾರ್, ಪಶುಪಾಲನಾ ಇಲಾಖೆ ನಾರಾಯಣಸ್ವಾಮಿ, ಗ್ರಾಮಸ್ಥರು, ಮುಖಂಡರು, ಇದ್ದರು.
Be the first to comment