ರಾಜ್ಯ ಸುದ್ದಿಗಳು
ದೇವನಹಳ್ಳಿ: ಸ್ವಚ್ಛ ಪರಿಸರ ನಿರ್ಮಾಣ ನಮ್ಮ ನಿಮ್ಮೆಲ್ಲರ ಆಲೋಚನೆಗೆ ಬಿಟ್ಟಿದ್ದು, ಇದು ಕೇವಲ ಒಂದು ದಿನದ ಸ್ವಚ್ಛತೆ ಆಗಬಾರದು ವರ್ಷವಿಡೀ ಸ್ವಚ್ಛತಾ ಆಂದೋಲನವಾಗಬೇಕು ಎಂದು ಕೊಯಿರ ಗ್ರಾಪಂ ಅಧ್ಯಕ್ಷೆ ವಿ.ರಮ್ಯ ಶ್ರೀನಿವಾಸ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗಾಂಧಿಜಯಂತಿಯ ಅಂಗವಾಗಿ ಗ್ರಾಪಂ ವತಿಯಿಂದ ಶ್ರಮದಾನ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ವಚ್ಛತೆಯೊಂದೇ ಮುಖ್ಯ ಪಾತ್ರ ವಹಿಸಲಿದೆ. ಎಲ್ಲರೂ ಒಗ್ಗೂಡಿ ಸ್ವಚ್ಛಗೊಳಿಸಿದರೆ ಇಡೀ ಸಮಾಜ ಆರೋಗ್ಯಕರವಾಗಿರುತ್ತದೆ. ಅನುಪಯುಕ್ತ ಗಿಡಗಂಟೆಗಳನ್ನು ಕಿತ್ತೊಗೆದು ಆ ಜಾಗದಲ್ಲಿ ಗಿಡ ನೆಟ್ಟರೆ ಮುಂದೊಂದು ದಿನ ಮರವಾಗಿ ನೆರಳು ನೀಡುತ್ತದೆ. ಬರುವ ರೋಗಿಗಳಿಗೆ ಉತ್ತಮ ಪರಿಸರವಾಗಿ ಮಾರ್ಪಾಟಾಗುತ್ತದೆ ಎಂದು ಮಾಹಿತಿ ನೀಡಿದರು.ಈ ವೇಳೆಯಲ್ಲಿ ಗ್ರಾಪಂ ಸದಸ್ಯರು, ಪ್ರಭಾರ ಪಿಡಿಒ ಪದ್ಮಮ್ಮ, ಕಾರ್ಯದರ್ಶಿ ಆದೇಪ್ಪ, ಗ್ರಾಪಂ ಸಿಬ್ಬಂದಿ ಇದ್ದರು.
Be the first to comment