ಮಸ್ಕಿಯ ಕ್ರೀಡಾ ಇತಿಹಾಸಕ್ಕೊಂದು ಮೆರುಗು ತಂದ ಮ್ಯಾರಥಾನ್ ಓಟದ ಸ್ಪರ್ಧೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಪ್ರತಾಪ್ ಗೌಡ ಪಾಟೀಲ್ ಫೌಂಡೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಮಸ್ಕಿ ಮ್ಯಾರಥಾನ್ ಓಟದ ಸ್ಪರ್ಧೆಗೆ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಚಾಲನೆಯನ್ನು ನೀಡಿದರು. ಮಸ್ಕಿ ಭಾಗದಲ್ಲಿನ ಕ್ರೀಡಾ ಪ್ರೇಮವನ್ನು ಹೆಚ್ಚಿಸುವ ದೃಷ್ಠಿಯಿಂದ ಹಮ್ಮಿಕೊಳ್ಳಲಾದ ಮ್ಯಾರಥಾನ್ ಸ್ಪರ್ಧೆಯು ಮಸ್ಕಿ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರ ನೇತೃತ್ವದಲ್ಲಿ ರವಿವಾರದಂದು ಬೆಳಿಗ್ಗೆ 8 ಗಂಟೆ 30 ನಿಮಿಷಕ್ಕೆ ಮಸ್ಕಿಯ ಬಾಲಕರ ಸರಕಾರಿ ಪ್ರೌಢ ಶಾಲೆಯ ಕ್ರೀಡಾಂಗಣದಿಂದ ಆರಂಭವಾದ ಈ 3 ಕಿ.ಮೀ ಓಟದಲ್ಲಿ ಸುಮಾರು 100 ಜನ ಸ್ಪರ್ಧಾಳುಗಳು ಭಾಗವಹಿಸಿ ಕ್ರೀಡಾಂಗಣದಿಂದ ಗಾಂಧಿ ವೃತ್ತ, ಅಶೋಕ ವೃತ್ತ, ಅಗಸಿ, ಖಲೀಲ್ ವೃತ್ತ, ದೈವದ ಕಟ್ಟೆ, ಕನಕ ವೃತ್ತ ಹಾಗೂ ಗಚ್ಚಿನ ಮಠವನ್ನು ತಲುಪಿ ಓಟವನ್ನು ಪೂರ್ಣಗೊಳಿಸಿದರು. ಈ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶಿವರಾಜ್ ಬಳಗಾನೂರು, ದ್ವಿತೀಯ ಸ್ಥಾನವನ್ನು ತಿಮ್ಮಣ್ಣ ಮಲ್ಲದಗುಡ್ಡ ಹಾಗೂ ತೃತೀಯ ಸ್ಥಾನವನ್ನು ವಿರುಪಾಕ್ಷಿ ಅಮರಾಪೂರ ಪಡೆದುಕೊಂಡರು.

CHETAN KENDULI

ಮೊದನೇ ಬಹುಮಾನವಾಗಿ 5001 ರೂ, ದ್ವಿತೀಯ ಬಹುಮಾನವಾಗಿ 3001 ರೂ, ಹಾಗೂ ತೃತೀಯ ಬಹುಮಾನವಾಗಿ 1111 ರೂ. ಗಳನ್ನು ಮತ್ತು ಬಾಪೂಜಿ ಸ್ಪೋರ್ಟ್ಸ್ ಸೆಂಟರ್ ವತಿಯಿಂದ ಕಪ್ ಗಳನ್ನು ನೀಡಿ ಗೌರವಿಸಲಾಯಿತು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಈ ಬಹುಮಾನ ಕಾರ್ಯಕ್ರಮವನ್ನು ನೆರವೇರಿಸಿದ ನಂತರ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್ ಅವರು ಮಸ್ಕಿಯ ಅಭಿನಂದನ್ ಸಂಸ್ಥೆ ಹಾಗೂ ಪ್ರತಾಪ್ ಗೌಡ ಪಾಟೀಲ್ ಫೌಂಡೇಶನ್ ಗಳು ಜಂಟಿಯಾಗಿ ಕೈಗೊಂಡ ಕ್ರೀಡಾ ಪರ್ವವು ಬಹಳಷ್ಟು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆದಿರುವುದು ಶ್ಲಾಘನೀಯ ಹಾಗೂ ಅತ್ಯುತ್ತಮ ಕಾರ್ಯವಾಗಿದೆ. ಈ ಸಂಸ್ಥೆಗಳು ಇನ್ನೂ ಮುಂದೆ ಹೀಗೆ ಒಗ್ಗೂಡಿ ಮುನ್ನಡೆದು ಯಶಸ್ವಿಯಾಗಿ ಕಾರ್ಯಗಳನ್ನು ಮಾಡಲಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. 

ಈ ಸಂದರ್ಭದಲ್ಲಿ ಷ.ಬ್ರ.ವರರುದ್ರಮುನಿ ಶಿವಾಚಾರ್ಯರು, ಸಿಪಿಐ ಸಂಜೀವ್ ಬಳಿಗಾರ್, ಪಿಎಸ್ಐ ಸಿದ್ರಾಮ್ ಬಿದರಾಣಿ, ಡಾ|| ಶಿವಶರಣಪ್ಪ ಇತ್ಲಿ, ಡಾ|| ಮೌನೇಶ್, ದೈಹಿಕ ಶಿಕ್ಷಕರಾದ ದೊಡ್ಡ ಬಸಯ್ಯ ಹಾಗೂ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಗೌರವಾಧ್ಯಕ್ಷರಾದ ಶಿವಪ್ರಸಾದ್ ಕ್ಯಾತನಟ್ಟಿ, ಪ್ರತಾಪಗೌಡ ಪಾಟೀಲ್ ಫೌಂಡೇಶನ ನ ಅಧ್ಯಕ್ಷರಾದ ಪ್ರಸನ್ನ ಪಾಟೀಲ್ ಹಾಗೂ ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳು, ಪ್ರತಾಪಗೌಡ ಫೌಂಡೇಶನ್ ನ ಪದಾಧಿಕಾರಿಗಳು, ದೈಹಿಕ ಶಿಕ್ಷಕ ಸಂಘದ ಎಲ್ಲಾ ಶಿಕ್ಷಕರು ಹಾಗೂ ಸ್ಪರ್ಧಾಳುಗಳು, ಮಸ್ಕಿಯ ಗಣ್ಯರು ಮತ್ತಿತರ ನಾಗರೀಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*