ಜಿಲ್ಲಾ ಸುದ್ದಿಗಳು
ಉಡುಪಿ
ಉಡುಪಿ ಜಿಲ್ಲೆಯ ವಿದ್ಯಾಂಗ ಉಪನಿರ್ದೇಶಕರು ಎನ್.ಎಚ್.ನಾಗುರ ಅವರು ಶಾಲಾ ಕರ್ತವ್ಯದ ಸಮಯದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಚಿತ್ರಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅವರ ಧರ್ಮ ಪತ್ನಿ ಜೊತೆಯಲ್ಲಿ ಅವರ ಹುಟ್ಟು ಹಬ್ಬವನ್ನು ಆಚರಿಸಿ, ಶಾಲೆಯಲ್ಲಿ ತಮ್ಮ ಹುಟ್ಟುಹಬ್ಬದ ಆಚರಣೆ ಮಾಡಿಕೊಂಡದ್ದು ಎಷ್ಟು ಸರಿ ?ಈಗಾಗಲೇ ಸರ್ಕಾರಿ ಸುತ್ತೋಲೆಯಲ್ಲಿ ಅಧಿಕಾರಿಗಳು ತಮ್ಮ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳಬಾರದು ಎಂಬುದನ್ನು ತಿಳಿಸಲಾಗಿದ್ದರೂ ಶಿಕ್ಷಣ ಇಲಾಖೆಯ ಜವಾಬ್ದಾರಿಯುತ ಸ್ಥಾನದಲ್ಲಿರುವ೦ತಹ ಉಪನಿರ್ದೇಶಕರು ತಮ್ಮ ಹುಟ್ಟುಹಬ್ಬವನ್ನು ಸರಕಾರಿ ಶಾಲೆಯಲ್ಲಿ ಆಚರಿಸಿಕೊಂಡದ್ದು ಮಕ್ಕಳ ಹಕ್ಕುಗಳ ದುರುಪಯೋಗವಲ್ಲವೇ?ಹುಟ್ಟುಹಬ್ಬವನ್ನು ಮತ್ತು 1ವರ್ಷದ ಸಾಧನೆಯನ್ನು ಆಚರಿಸಿಕೊಳ್ಳಲು ಇವರಿಗೆ ಶಾಲೆಯೇ ಬೇಕಾಗಿತ್ತೆ.ದೈನಂದಿನ ಕರ್ತವ್ಯ ಶಾಲಾ ಭೇಟಿ ಮತ್ತು ಸಂದರ್ಶನವನ್ನು ಶಿಕ್ಷಕರ ವಾಟ್ಸಾಪ್ ಗ್ರೂಪ್ ನಲ್ಲಿ ಅತಿ ದೊಡ್ಡ ಸಾಧನೆಯೆಂಬಂತೆ ಪ್ರತಿದಿನವೂ ಹಾಕಿಕೊಳ್ಳುತ್ತಾ ಕರಾವಳಿ ಜಿಲ್ಲೆಯ ಶಿಕ್ಷಣದ ನೇತಾರ ಎಂಬ ಬಿರುದನ್ನು ತನಗೆ ತಾನೆ ಕೊಟ್ಟುಕೊಳ್ಳುತ್ತಾ ವಿಶೇಷ ಸಾಧನೆ ಮಾಡಿದ್ದೇನೆ ಅನ್ನುವ ಪೋಸನ್ನು ನೀಡುತ್ತಿದ್ದಾರೆ.ಇವರು ಮಾಡುತ್ತಿರುವ ಎಲ್ಲಾ ಕೆಲಸಗಳು ಉಡುಪಿ ಜಿಲ್ಲೆಗೆ ಹೊಸದೇನೂ ಅಲ್ಲ ಅನೇಕ ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಬರುತ್ತಿರುವ ಉಡುಪಿ ಜಿಲ್ಲೆಗೆ ಇವರ ಕಾಣಿಕೆ ಏನು ಅನ್ನೋದು ಎಲ್ಲ ಶಿಕ್ಷಕರ ಮತ್ತು ಶಿಕ್ಷಣ ಅಭಿಮಾನಿಗಳ ಪ್ರಶ್ನೆಯಾಗಿದೆ?. ಕೋವಿಡ್ ಸಮಯದಲ್ಲಿ ಒಬ್ಬ ಸರಕಾರಿ ಅಧಿಕಾರಿ , ಸರ್ಕಾರದ ಸುತ್ತೋಲೆಗಳನ್ನು ಮತ್ತು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಈ ರೀತಿಯಾಗಿ ಸರಕಾರಿ ಶಾಲೆಯಲ್ಲಿ ತಮ್ಮ ಕಟುಂಬ ಸಮೇತರಾಗಿ ವಿಜೃಂಭಣೆಯಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಎಷ್ಟು ಸರಿ ಎಂಬುದು ಶಿಕ್ಷಣ ಪ್ರೇಮಿಗಳ ಪ್ರಶ್ನೆಯಾಗಿದೆ?
Be the first to comment