ದೇವನಹಳ್ಳಿಯನ್ನು ಸಮಗ್ರ ಅಭಿವೃದ್ಧಿಗೊಳಿಸುವುದೇ ನನ್ನ ಗುರಿ* : *ಶಾಸಕ *ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಲು ಸಲಹೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಇಡೀ ದೇಶ, ವಿಶ್ವ ವ್ಯಾಪಿಯಲ್ಲಿ ಆವರಿಸಿರುವ ಕೊರೊನಾ ಸಾಂಕ್ರಾಮಿಕ ರೋಗದಿಂದ ಪಾರಾಗಬೇಕಾದರೆ, ಪ್ರತಿಯೊಬ್ಬರು ತಪ್ಪದೇ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ಪಟ್ಟಣದ ಹೊಸಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಪುರಸಭಾ ಸದಸ್ಯ ವೈ.ಆರ್.ರುದ್ರೇಶ್ ಅವರ ನೂತನ ಕಟ್ಟಡ ಉದ್ಘಾಟಿಸಿ, ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಈಗಾಗಲೇ ಕೋವಿಡ್-೧೯ ಮೊದಲನೇ ಅಲೆ ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಪ್ರಾಣಪಕ್ಷಿಗಳು ಹಾರಿಹೋಗಿರುವ ನಿದರ್ಶನಗಳು ಕಣ್ಮುಂದೆ ಇವೆ. ಮೂರನೇ ಅಲೆಯಲ್ಲಿ ಮಕ್ಕಳು ಜಾಗರೂಕತೆಯಾಗಿರಬೇಕಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಮನೆಯಿಂದಾಚೆ ಕಳುಹಿಸಬೇಕಾದರೆ, ನೂರು ಬಾರಿ ಯೋಚಿಸಬೇಕು. ಒಂದು ಬಾರಿ ಸೋಂಕು ಹರಡಿದರೆ, ಸೋಂಕು ವ್ಯಾಪಕವಾಗಿ ಹರಡುತ್ತಲೇ ಇರುತ್ತದೆ. ಮೂರನೇ ಅಲೆಗೆ ಮಕ್ಕಳು ಹೆಚ್ಚಾಗಿ ತುತ್ತಾಗುವುದರಿಂದ ಸಾಕಷ್ಟು ಜಾಗೃತರಾಗಿರಬೇಕು. ಈಗಾಗಲೇ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಲಸಿಕೆ ಹಾಕಿಸಿಕೊಳ್ಳದ ನಾಗರೀಕರು ಕೂಡಲೇ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ ಮತ್ತು ದೇವನಹಳ್ಳಿ ಪಟ್ಟಣದ ಲಯನ್ಸ್‌ಕ್ಲಬ್‌ನಲ್ಲಿ ಪಡೆದುಕೊಳ್ಳಬಹುದು ಎಂದರು.

CHETAN KENADULI

ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಚುರುಕುಗೊಳಿಸಲಾಗಿದೆ. ಕೆಲವರು ಸುಖಸುಮ್ಮನೆ ಆರೋಪ ಮಾಡುತ್ತಾರೆ. ಅವಕ್ಕೆಲ್ಲಾ ಕಿವಿಗೊಡಬಾರದು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಪಕ್ಷಾತೀತವಾಗಿ ಎಲ್ಲರನ್ನು ಒಳಗೊಂಡು ಸಮಗ್ರ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದೇನೆ. ಮುಖಂಡರ ಸಲಹೆ, ಸೂಚನೆಯನ್ನು ಆಲಿಸಿ ಸೂಕ್ತ ನಿರ್ಧಾರದೊಂದಿಗೆ ತಾಲೂಕನ್ನು ಮಾದರಿಯನ್ನಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್ ಬಾಬು, ಮುಖಂಡರಾದ ರವಿಕುಮಾರ್, ಕಾಳಪ್ಪನವರ ವೆಂಕಟೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಪುರಸಭಾ ಸದಸ್ಯ ವೈ.ಆರ್.ರುದ್ರೇಶ್, ಯುವ ಜೆಡಿಎಸ್ ಅಧ್ಯಕ್ಷ ಭರತ್, ವಿಜಯಕುಮಾರ್, ಕಿರಣ್‌ಗೌಡ, ವಿನಯ್, ರವಿಕುಮಾರ್, ಇತರರು ಇದ್ದರು.

Be the first to comment

Leave a Reply

Your email address will not be published.


*