ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ತುಂಗಳ ವಿಜ್ಞಾನ ಪಿಯು ಕಾಲೇಜ್, ವಿದ್ಯಾಗಿರಿ ಬಾಗಲಕೋಟೆಯಲ್ಲಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಅಂಗವಾಗಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಶ್ರೀಮತಿ ಹೇಮಲತಾ ಹುಲ್ಲೂರು, ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉದ್ಘಾಟಕರಾಗಿ ಮಕ್ಕಳ ಸ್ನೇಹಬಂದ ಹಾಗೂ ಮಕ್ಕಳ ರಕ್ಷಣೆ ಕುರಿತು ಪೋಸ್ಟರ್ ಬಿಡುಗಡೆ ಮೂಲಕ ಉದ್ಘಾಟಿಸಿದರು. ಶ್ರೀಯುತ ಜಿ.ಎನ್.ಸಿಂಹ, ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಮೂಲಕ ಮಕ್ಕಳಲ್ಲಿ ಅರಿವು ನೀಡುವ ಕೆಲಸ ಆಗುತ್ತಿದೆ ಎಂದು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಉದ್ಘಾಟನಾ ಮಾತುಗಳನ್ನು ಶ್ರೀಮತಿ ಹೇಮಲತಾ ಹುಲ್ಲೂರ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇದು ಜಿಲ್ಲಾ ಮಟ್ಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ, ಮಕ್ಕಳು ಎಂದರೆ ಪೋಷಣೆ ಮತ್ತು ಪಾಲನೆ ಅಗತ್ಯವಿರುವಂತಹ ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಪಟ್ಟಂತೆ ಮಕ್ಕಳು ಹೀಗೆ ಹಲವಾರು ಸಮಸ್ಯೆಗಳಿರುವ ಮಕ್ಕಳಿಗೆ ನೆರವು ನೀಡುತ್ತದೆ ಮತ್ತು ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ, ವಿವರಿಸುತ್ತಾ ಕಾನೂನು ಕಾಯ್ದೆಗಳ ಬಗ್ಗೆ, ಪರಿಚಯದ ಬಗ್ಗೆ, ತಿದ್ದುಪಡಿ ಕಾಯ್ದೆಗಳ ಬಗ್ಗೆ ವಿವರವಾಗಿ ತಿಳಿಸಿದರು.
ನಂತರ ಮಕ್ಕಳೊಂದಿಗೆ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು (ಬಾಲ್ಯ ವಿವಾಹ, ಆಪ್ತ ಸಮಾಲೋಚನೆ, ಪೋಕ್ಸೋ, ಮಾನಸಿಕ ಒತ್ತಡ ಮತ್ತು ಮಾನಸಿಕ ಹಿಂಸೆ) ಇತರೆ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲಾಯಿತು.
ಚಂದನ್ ಹಿರೇಮಠ್, ಪಿ.ಯು.ಸಿ ವಿದ್ಯಾರ್ಥಿನಿರವರು “ನನ್ನ ಆತ್ಮ ಸಾಕ್ಷಿಯಾಗಿ 1098 ಕ್ಕೆ ಕರೆ ಮಾಡಿ ಸಂಕಷ್ಟದಲ್ಲಿರುವ ನನ್ನ ಗೆಳೆಯರನ್ನು ಬೆಂಬಲಿಸುವೆ.ನನ್ನ ಗೆಳೆಯರಲ್ಲಿ ಯಾರಿಗಾದರೂ ಯಾವುದೇ ಹಾನಿ ಉಂಟಾದರೆ ಧ್ವನಿ ಎತ್ತಿ ನನ್ನ ಗೆಳೆಯರಲ್ಲಿ ಯಾರಿಗಾದರೂ ಹಾನಿ ಉಂಟುಮಾಡುವವರ ವಿರುದ್ಧ ಮಾತನಾಡುತ್ತೇನೆ. ನಾನು ನಿಜವಾದ ಚೈಲ್ಡ್ಲೈನ್ ಸ್ನೇಹಿತನಾಗಲು ಭರವಸೆ ನೀಡುತ್ತೇನೆಂದು ಪ್ರಮಾಣ ವಚನವನ್ನು ಅಧಿಕಾರಿಗಳಿಂದ ಹಾಗು ಮಕ್ಕಳಿಗೆ ಭೋಧಿಸಿ ಸ್ವೀಕರಿಸಲಾಯಿತು.
ಶ್ರೀಮತಿ ಶಾರದಾ ಪೂಜಾರಿ ಪ್ರರ್ಥಿಸಿದರು,ರಮೇಶ್ ಸ್ವಾಗತಿಸಿದರು ಹಾಗೂ ಶ್ರೀಮತಿ ಶೈಲಾ ಮೆಣಸಗಿ ವಂದನಾರ್ಪಣೆ ಮಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀಯುತ ಸಿದ್ದಾರ್ಥ್ ಮಗದು ಉಪ ಪ್ರಾಂಶುಪಾಲರು, ತುಂಗಳ ವಿಜ್ಞಾನ ಪಿಯು ಕಾಲೇಜ್ ಹಾಗೂ ಜಿ.ಎನ್.ಸಿಂಹ. ರೀಚ್ ಸಂಸ್ಥೆ, ಮಕ್ಕಳ ಸಹಾಯವಾಣಿ ನಿರ್ದೇಶಕರು ಬಾಗಲಕೋಟೆ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Be the first to comment